ETV Bharat / bharat

ವೇಶ್ಯಾವಾಟಿಕೆಗೆ ಬಾಲಕಿಯ ಮಾರಾಟ ಯತ್ನ.. ಚಾಣಾಕ್ಷತೆಯಿಂದ ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು - ಅಪರಾಧ ವಿಭಾಗದ ಪೊಲೀಸರು

40 ಸಾವಿರ ರೂಪಾಯಿಗೆ 11 ವರ್ಷದ ಬಾಲಕಿಯನ್ನ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಮಹಿಳೆಯರನ್ನ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸ್ನೇಹಿತೆಯೆ ಮಗಳನ್ನು ಪುಸಲಾಯಿಸಿ ಕರೆತಂದು ಮಾರಾಟ ಮಾಡಲು ಯತ್ನಿಸಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Three women arrested in Nagpur for trying to sell an 11-year-old girl's virginity
11 ವರ್ಷದ ಬಾಲಕಿಯನ್ನ ಮಾರಾಟ ಮಾಡಲು ಯತ್ನ
author img

By

Published : Oct 2, 2021, 2:24 PM IST

ನಾಗ್ಪುರ (ಮಹಾರಾಷ್ಟ್ರ): 11 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡುವ ಉದ್ದೇಶದಿಂದ ಮಾರಾಟ ಮಾಡಲು ಯತ್ನಿಸಿದ ಮೂವರು ಮಹಿಳೆಯರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಿಖರ ಮಾಹಿತಿ ಆಧರಿಸಿ ದಾಳಿ ಮಾಡಿದ್ದ ಅಪರಾಧ ವಿಭಾಗದ ಪೊಲೀಸರು ಮೂವರು ಆರಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಅರ್ಚನಾ ಶೇಖರ್ ವೈಶಂಪಾಯನ್, ರಂಜನಾ ಮೆಶ್ರಾಮ್ ಮತ್ತು ಕವಿತಾ ನಿಖರೆ ಎಂದು ಗುರುತಿಸಲಾಗಿದೆ. ಆರೋಪಿ ಅರ್ಚನಾ ಶೇಖರ್ ತನ್ನ ಸ್ನೇಹಿತೆಯ ಮಗಳನ್ನು ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಓಲೈಸಿ ಕರೆತಂದಿದ್ದಳು. ಬಳಿಕ ಆಕೆಯನ್ನ 40 ಸಾವಿರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಳು.

ಅರ್ಚನಾ ಗ್ರಾಹಕರಿಗಾಗಿ ಕಾಯಲು ಆರಂಭಿಸಿದ್ದು, ಇದಕ್ಕಾಗಿ ವಾಟ್ಸಾಪ್​ ಮೂಲಕ ಕೆಲ ಗಿರಾಕಿಗಳಿಗೆ ಸಂದೇಶ ಕಳುಹಿಸಿದ್ದಳು. ಈ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆರೋಪಿಯೊಂದಿಗೆ ಸಂಪರ್ಕ ಸಾಧಿಸಿದ್ದು, ಬಳಿಕ ಮೂವರು ಮಹಿಳೆಯರನ್ನ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.