ಹೈದರಾಬಾದ್, ತೆಲಂಗಾಣ: ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಖಾಸಗಿ ಉದ್ಯೋಗಿಯಾಗಿರುವ ಉಮೇರಾ ಫಾತಿಮಾ ಮತ್ತು ಮೊಹಮ್ಮದ್ ಮಹಮ್ಮದ್ ಅವರು ತಮ್ಮ ನಾಲ್ಕು ಮಕ್ಕಳೊಂದಿಗೆ ಹೈದರಾಬಾದ್‌ನ ಪ್ಯಾರಾಮೌಂಟ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ನೀರಿನ ಮೋಟಾರ್ ಕೆಟ್ಟ ಪರಿಣಾಮ ಮನೆಗೆ ನೀರು ಬಂದಿಲ್ಲ. ನೀರು ಇಲ್ಲದ ಕಾರಣ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮಹ್ಮದ್ ಅವರ ಮಕ್ಕಳಾದ ಮಹಮ್ಮದ್ ರಿಜ್ವಾನ್ (18) ಮತ್ತು ಮಹಮ್ಮದ್ ರಜಾಕ್ (16) ಬಕೆಟ್ ತೆಗೆದುಕೊಂಡು ಕೆಳಗಿಳಿದಿದ್ದರು.
ಮೋಟಾರ್ ಸ್ವಿಚ್ ಆನ್ ಆಗಿರುವುದನ್ನು ಗಮನಿಸದ ರಿಜ್ವಾನ್ ನೀರಿನ ಹೊಂಡಕ್ಕೆ ಇಳಿದಿದ್ದಾನೆ. ಬಕೆಟ್‌ನಲ್ಲಿ ನೀರು ಹಾಕಲು ಯತ್ನಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಅಣ್ಣ ಹೊರಗೆ ಬಾರದೇ ಇದ್ದಾಗ ಕಿರಿಯ ಸಹೋದರ ರಜಾಕ್ ಒಳಗೆ ಹೋಗಿ ರಕ್ಷಿಸಲು ಯತ್ನಿಸಿದ್ದಾನೆ. ಆತನಿಗೂ ವಿದ್ಯುತ್ ತಗುಲಿ ಗುಂಡಿಗೆ ಬಿದ್ದಿದ್ದಾರೆ.
ಅರ್ಧ ಗಂಟೆ ಕಳೆದರೂ ಮಕ್ಕಳು ಬಾರದ ಕಾರಣ ತಾಯಿ ಉಮೇರಾ ಫಾತಿಮಾ, ರಿಜ್ವಾನ್, ರಜಾಕ್ ಸ್ನೇಹಿತ ಸೈಯದ್ ಅನಸುದ್ದೀನ್ ಹುಸೇನ್ ಅವರನ್ನು ಕೆಳಕ್ಕೆ ಕಳುಹಿಸಿದ್ದಾರೆ. ಗುಂಡಿಗೆ ಇಬ್ಬರು ಬಿದ್ದಿರುವುದನ್ನು ಕಂಡ ಅನಸುದ್ದೀನ್ ಜೋರಾಗಿ ಕಿರುಚಿ ಹೊಂಡದಲ್ಲಿದ್ದ ಇಬ್ಬರನ್ನು ಹೊರತರಲು ಯತ್ನಿಸುತ್ತಿದ್ದಾಗ ಆತನಿಗೂ ಶಾಕ್ ಆಗಿ ಹೊಂಡಕ್ಕೆ ಬಿದ್ದಿದ್ದಾನೆ.
ಅನಸುದ್ದೀನ್ ಕಿರುಚಿದ ಶಬ್ದ ಕೇಳಿ ಕೆಳಗೆ ಬಂದ ತಾಯಿ ಉಮೇರಾ ಫಾತಿಮಾ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಚಿಲುಕ ರಾಜಯ್ಯ ಅಲ್ಲಿಗೆ ಬಂದು ಮೋಟಾರ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಸ್ಥಳೀಯರು ಮೂವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಕುಟುಂಬಸ್ಥರ ದೂರಿನಂತೆ ಬಂಜಾರ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಿಜ್ವಾನ್ ಇಂಟರ್ ಮೀಡಿಯೇಟ್ ಎರಡನೇ ವರ್ಷ, ರಝಾಕ್ 10ನೇ ತರಗತಿ ಹಾಗೂ ಅನಸುದ್ದೀನ್ ಪದವಿ ಓದುತ್ತಿದ್ದಾರೆ.
ಓದಿ: ಭಯೋತ್ಪಾದಕರ ಸಂಘಟನೆ ಜೊತೆ ಅತಿಕ್ ಅಹ್ಮದ್ ನೇರ ಸಂಪರ್ಕ.. ನಮಗೆ ಯೋಗಿ ಮೇಲೆ ನಂಬಿಕೆಯಿದೆ ಎಂದ ಮೃತ ವಕೀಲನ ಕುಟುಂಬ
ಉತ್ತರಪ್ರದೇಶದಲ್ಲಿ ದಾರುಣ ಹತ್ಯೆ: ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಆತನನ್ನು ಕಂಬಕ್ಕೆ ಕಟ್ಟಿ, ಬೆಲ್ಟ್‌ಗಳಿಂದ ಥಳಿಸಿ, ಕಬ್ಬಿಣದ ರಾಡ್‌ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ವಿದ್ಯುತ್ ಸ್ಪರ್ಶಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಈ ಅಮಾನವೀಯ ಘಟನೆ ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಪೊಲೀಸರ ಪ್ರಕಾರ, ಶಿವಂ ಜೋಹ್ರಿ (33) ಎಂಬ ವ್ಯಕ್ತಿ ಸರ್ದಾರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೂರಿ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶಿವಂ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲವು ವಸ್ತುಗಳು ಕಳೆದು ಹೋಗಿದ್ದವು. ಈ ಕ್ರಮದಲ್ಲಿ ಆ ಕಂಪನಿಯ ಮಾಲೀಕರಾದ ನೀರಜ್ ಗುಪ್ತಾ ಮತ್ತು ಕನ್ಹಯ್ಯಾ ಹೊಸೇರಿ ಅವರಿಗೆ ಶಿವಂ ಜೋಹ್ರಿ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಶಿವಂನಿಂದ ಸತ್ಯ ಬಾಯಿ ಬಿಡಿಸಲು ಕಂಪನಿ ಮಾಲೀಕರು ಬುಧವಾರ ಬಟ್ಟೆ ಅಂಗಡಿಗೆ ಕರೆ ತಂದಿದ್ದರು. ಬಳಿಕ ಅಂಗಿ ಕಳಚಿ ಕಬ್ಬಿಣದ ಕಂಬಕ್ಕೆ ಕಟ್ಟಿದ್ದರು. ಹಲ್ಲೆ ಮಾಡಬೇಡಿ ಎಂದು ಸಂತ್ರಸ್ತ ಬೇಡಿಕೊಂಡರೂ ಸಹ ನಿರ್ದಯವಾಗಿ ಬೆಲ್ಟ್ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆ ನಂತರ ಕರೆಂಟ್ ಶಾಕ್ ಕೊಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಶಿವಂ ಮಾತನಾಡದಿರುವುದನ್ನು ಕಂಡ ಆರೋಪಿಗಳು ಸಂಚು ರೂಪಿಸಲು ಪ್ರಯತ್ನಿಸಿದರು. ಆರೋಪಿಗಳು ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಕರೆ ಮಾಡಿ ಶಿವಂಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ತಿಳಿಸಿದರು. ನಂತರ ಶಿವಂನನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿವಂ ಸಾವಿನ ಬಗ್ಗೆ ಅನುಮಾನಗೊಂಡ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.