ಜಗಿತ್ಯಾಲ: ಮೂಢನಂಬಿಕೆ ಪ್ರಭಾವದಿಂದಾಗಿ ಗುಂಪೊಂದು ತಂದೆ ಮತ್ತು ಆತನ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಗಿತ್ಯಾಲ ಜಿಲ್ಲೆಯ ಎರುಕಲವಾಡದಲ್ಲಿ ನಡೆದಿದೆ.
ಎರುಕಲವಾಡದಲ್ಲಿ ಜಗನ್ನಾಥಂ ನಾಗೇಶ್ವರ ರಾವ್ (60) ವಾಸವಾಗಿದ್ದಾರೆ. ಅವರ ಪುತ್ರರ ಕುಟುಂಬಗಳು ಸಹ ಹತ್ತಿರದಲ್ಲೇ ವಾಸಿಸುತ್ತಿವೆ. ಆರು ತಿಂಗಳಿಗೊಮ್ಮೆ ನಡೆಯುವ ಸ್ಥಳೀಯ ಸಮುದಾಯ ಸಭೆಗೆ ಗುರುವಾರ ಹಿರಿಯ ಮಗ ರಾಮಬಾಬು (35), ಎರಡನೇ ಮಗ ರಮೇಶ್ (25) ಮತ್ತು ಮೂರನೇ ಮಗ ರಾಜೇಶ್ ತನ್ನ ತಂದೆ ನಾಗೇಶ್ವರ ರಾವ್ ಜೊತೆ ಬಂದಿದ್ದರು. ನಾಗೇಶ್ವರ ರಾವ್ ಮತ್ತು ಅವರ ಪುತ್ರರ ಕುಟುಂಬದ ಮಹಿಳೆಯರೂ ಸಮುದಾಯ ಸಭೆಯಲ್ಲಿ ಭಾಗವಹಿಸಿದ್ದರು.
ಓದಿ: ಥಪ್ಪಡ್.. ವರನ ಒಂದೇ ಏಟಿಗೆ ಮುರಿದು ಬಿತ್ತು ಮದುವೆ: ವಧುವಿನ ದಿಟ್ಟ ನಿರ್ಧಾರಕ್ಕೆ ಶಹಬ್ಬಾಸ್ಗಿರಿ
ಆಗಲೇ ಜಾತಿ ಸಮಾವೇಶದಲ್ಲಿ ಕುಳಿತಿದ್ದ ವೈರಿ ಗುಂಪು ನಾಗೇಶ್ವರ ರಾವ್ ಮತ್ತು ಅವರ ಮೂವರು ಪುತ್ರರ ಮೇಲೆ ಕತ್ತಿ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ. ಅವರಿಗೆ ಏನಾಯಿತು ಎಂದು ತಿಳಿಯುವ ಮೊದಲೇ ತಂದೆ ನಾಗೇಶ್ವರ ರಾವ್ ಮತ್ತು ಅವರ ಹಿರಿಯ ಮಗ ರಾಮ್ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಮೇಶ್ರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಕಿರಿಯ ಮಗ ರಾಜೇಶ್ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆರು ಜನ ದುಷ್ಕೃತ್ಯದಲ್ಲಿ ಭಾಗಿ: ಆರಕ್ಕೂ ಹೆಚ್ಚು ಜನರು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಟ-ಮಂತ್ರದ ಶಂಕೆ: ಎರುಕಳವಾಡದ ತಮ್ಮ ಸಮುದಾಯದ ಹಿರಿಯ ನಾಗೇಶ್ವರ ರಾವ್ ಸೇರಿದಂತೆ ಅವರ ಕುಟುಂಬದವರು ಮಾಟಮಂತ್ರ ಮಾಡುತ್ತಿದ್ದಾರೆ ಎಂದು ಕೆಲವರು ಶಂಕಿಸಿದ್ದಾರೆ. ತಿಂಗಳ ಹಿಂದೆ ಸಿರಿಸಿಲ್ಲ ಜಿಲ್ಲೆಯ ಅಗ್ರಹಾರದ ಬಳಿಯ ಸ್ಮಶಾನದಲ್ಲಿ ನಾಗೇಶ್ವರ ರಾವ್ ಮೇಲೆ ಈ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು. ಪ್ರಕರಣವೂ ದಾಖಲಾಗಿತ್ತು.
ವಾರದ ಹಿಂದೆ ಎರುಕಲವಾಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಸಾವಿಗೆ ನಾಗೇಶ್ವರರಾವ್ ಕಾರಣ ಎಂದು ಮಹಿಳೆ ಸಂಬಂಧಿಕರು ತಿಳಿದಿದ್ದಾರೆ. ಈ ಹಿನ್ನೆಲೆ ನಾಗೇಶ್ವರಾವ್ ಮತ್ತು ಆತನ ಮಕ್ಕಳ ಸಾವಿಗೆ ಆ ಹಿಳೆಯ ಸಂಬಂಧಿಕರು ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಓದಿ: ಸಾಹಿತಿ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ: ಬುಲೆಟಿನ್ ಬಿಡುಗಡೆ
ಕೊಲೆಯಾದ ನಾಗೇಶ್ವರ ರಾವ್ ರಿಯಾಲ್ಟರ್ ಮತ್ತು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಅವರಿಗೆ ಸುಖಮ್ಮ ಮತ್ತು ಕನಕಮ್ಮ ಎಂದು ಇಬ್ಬರು ಪತ್ನಿಯರಿದ್ದಾರೆ. ನಾಗೇಶ್ವರ ರಾವ್ ಹಿರಿಯ ಮಗ ರಾಮ್ ಬಾಬುಗೆ ಪತ್ನಿ ಸಾರಮ್ಮ ಮತ್ತು ಇಬ್ಬರು ಗಂಡು, ಇಬ್ಬರು ಪುತ್ರಿಯರಿದ್ದಾರೆ. ಎರಡನೇ ಮಗ ರಮೇಶ್‌ಗೆ ಪತ್ನಿ ಸೌಜನ್ಯ ಇದ್ದಾರೆ.
ಆದರೆ ಈ ದಂಪತಿಗೆ ಇನ್ನು ಮಕ್ಕಳಾಗಿಲ್ಲ. ಮೃತ ಸಹೋದರರು ಸೆಪ್ಟಿಕ್ ಟ್ಯಾಂಕರ್‌ಗಳನ್ನು ಚಲಾಯಿಸುವ ಮೂಲಕ ತಮ್ಮ ಕುಟುಂಬಗಳನ್ನು ಪೋಷಿಸುತ್ತಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ