ETV Bharat / bharat

ಮನೆಗೆ ನುಗ್ಗಿ ಮೂವರನ್ನು ಹತ್ಯೆಗೈದ ದುಷ್ಕರ್ಮಿಗಳ ತಂಡ.. ಓರ್ವನ ಸ್ಥಿತಿ ಗಂಭೀರ - ಮೂವರ ಹತ್ಯೆ

ಹರಿಯಾಣದ ಫರಿದಾಬಾದ್​ನಲ್ಲಿ ಬುಧವಾರ ತಡರಾತ್ರಿ ಮೂವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಮೂವರನ್ನು ಕೊಲೆ ಮಾಡಿದ್ದಾರೆ.

ಮೂವರ ಹತ್ಯೆ
ಮೂವರ ಹತ್ಯೆ
author img

By

Published : Oct 21, 2021, 5:51 PM IST

ಫರಿದಾಬಾದ್ (ಹರಿಯಾಣ): ಜಿಲ್ಲೆಯ ಮೊಹಬತಾಬಾದ್​ ಗ್ರಾಮದಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಮೂವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯು ಅಕ್ಕಪಕ್ಕದ ಹಳ್ಳಿಗಳಲ್ಲಿ ಭಾರಿ ಸಂಚಲನವನ್ನುಂಟು ಮಾಡಿದೆ.

ಮಾಹಿತಿಯ ಪ್ರಕಾರ, ಎನ್​ಇಟಿ ವಿಧಾನಸಭೆಯ ಧೌಜ್​ ಠಾಣಾ ವ್ಯಾಪ್ತಿಯ ಗೊಟ್ಟಾ ಮೊಹಬತಾಬಾದ್​ ಗ್ರಾಮದಲ್ಲಿ ಒಬ್ಬ ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡಿನ ದಾಳಿಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬುಧವಾರ ರಾತ್ರಿ ಗಗನ್, ಸ್ನೇಹಿತ ರಾಜನ್​ ಅವರನ್ನು ಭೇಟಿ ಮಾಡಲು ಬಂದಿದ್ದರು. ರಾತ್ರಿ ಊಟ ಮಾಡಿದ ನಂತರ ಸುಮನ್ ಮತ್ತು ಆಯೆಷಾ ಮಲಗಿದ್ದರು. ರಾಜನ್ ಮತ್ತು ಗಗನ್ ಮೇಲಿನ ಕೋಣೆಯಲ್ಲಿದ್ದಾಗ, ಅಪರಿಚಿತ ದುಷ್ಕರ್ಮಿಗಳು ಮನೆಗೆ ಪ್ರವೇಶಿಸಿ ಆಯೆಷಾ ಮತ್ತು ಸುಮನ್​ರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಬಳಿಕ ರಾಜನ್ ಮತ್ತು ಗಗನ್ ಮೇಲೂ ಗುಂಡು ಹಾರಿಸಿದ್ದು, ರಾಜನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಗನ್ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: YouTube ನೋಡಿ ಬೆಂಗಳೂರಲ್ಲಿ ಜ್ಯುವೆಲ್ಲರಿ ಶಾಪ್​ ದರೋಡೆ.. ಆರೋಪಿಗಳು ಅರೆಸ್ಟ್

ಪೊಲೀಸರ ಪ್ರಕಾರ, ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಮೇಲೆ ಗುಂಡು ಹಾರಿಸಿದ್ದಾರೆ. ಹಳೆಯ ದ್ವೇಷ ಹಿನ್ನೆಲೆ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಫ್​ಎಸ್​ಎಲ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.