ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ ಚಿನ್ನದ ವ್ಯಾಪಾರಿ ದಂಪತಿ ಮತ್ತು ಅವರ ಮಗಳ ಕೊಳೆತ ಶವಗಳು ಭಾನುವಾರ ಪತ್ತೆಯಾಗಿವೆ. ಫ್ಲಾಟ್‌ನಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಪಕ್ಕದ ಫ್ಲಾಟ್‌ನವರು ಅಪಾರ್ಟ್ಮೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೂರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
7 ತಿಂಗಳ ಹಿಂದೆ ಅಪಾರ್ಟ್ಮೆಂಟ್ಗೆ ಸ್ಥಳಾಂತರವಾಗಿದ್ದ ಕುಟುಂಬ: ಪ್ರಾಥಮಿಕ ತನಿಖೆ ನಂತರ ಪೊಲೀಸರು, ಈ ಮೂವರು ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಬೇರೇನಾದರು ನಡೆದಿರಬಹುದೇ ಎಂದು ತನಿಖೆ ನಡೆಸುತ್ತಿದ್ದಾರೆ. ಇನ್ನು, ಅಪಾರ್ಟ್ಮೆಂಟ್ ಮಾಲೀಕ ಈ ಕುಟುಂಬದವರು ಏಳು ತಿಂಗಳಿನ ಹಿಂದೆ ಶಿಫ್ಟಾಗಿದ್ದರು. ಇವರಿಗೆ ಆರ್ಥಿಕ ಸಂಕಷ್ಟವಿತ್ತು. ಅವರಿಗೆ, ಬಾಡಿಗೆ ಮತ್ತು ವಿದ್ಯುತ್ ಬಿಲ್ ಕೂಡ ಪಾವತಿಸಲು ಅಸಾಧ್ಯವಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಕರೆ ಸ್ವೀಕರಿಸದೇ ಇದ್ದದ್ದು ಕಂಡು ಅನುಮಾನ: ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿ, ಶನಿವಾರ ರಾತ್ರಿ ಫ್ಲಾಟ್ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆ ನಿವಾಸಿಗಳು ಸಂಬಂಧಪಟ್ಟ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಹೀಗಾಗಿ ಮಾಲೀಕ ಜಯಂತ್ ಮೊಂಡಲ್ ಆ ಕುಟುಂಬದವರ ಫ್ಲಾಟ್ಗೆ ಹೋಗಿ ಅವರಿಗೆ ಕರೆ ಮಾಡಿದ್ದಾರೆ. ಆದರೆ ಯಾರು ಕರೆ ಸ್ವೀಕರಿಸದ ಹಿನ್ನೆಲೆ ಜಯಂತ್ ರಿಜೆಂಟ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಾಗಿಲು ಒಡೆದು ದಂಪತಿಯ ಶವವನ್ನು ಊಟದ ಕೋಣೆಯಿಂದ ಮತ್ತು ಮಗಳ ಮೃತದೇಹವನ್ನು ಮಲಗುವ ಕೋಣೆಯಿಂದ ಹೊರತೆಗೆದರು ಎಂದು ಹೇಳಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ: ಈ ಘಟನಾ ಸ್ಥಳಕ್ಕೆ ಕೋಲ್ಕತ್ತಾದ ಪೊಲೀಸ್ ವಿಭಾಗದ ಅಧಿಕಾರಿಗಳು ಕೂಡ ಬಂದರು. ಇನ್ನು ಮೃತರು ಚಿನ್ನದ ವ್ಯಾಪಾರಿ ವಿಜಯ್ ಚಟ್ಟೋಪಾಧ್ಯಾಯ ಅವರ ಪತ್ನಿ ರಾನು ಚಟ್ಟೋಪಾಧ್ಯಾಯ ಮತ್ತು 21 ವರ್ಷದ ಮಗಳು ಓಂದ್ರಿಲಾ ಚಟ್ಟೋಪಾಧ್ಯಾಯ ಎಂದು ಗುರುತಿಸಲಾಗಿದೆ. ಇನ್ನು, ಮೃತ ದೇಹಗಳೆಲ್ಲ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರ‍್ಯಾಗಿಂಗ್ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ: ತೆಲಂಗಾಣ ರಾಜ್ಯದ ವೈದಕೀಯ ಕಾಲೇಜಿನಲ್ಲಿ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಹಿರಿಯ ವಿದ್ಯಾರ್ಥಿಯ ರ‍್ಯಾಗಿಂಗ್ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಆಕೆಯನ್ನು ಹೈದರಾಬಾದ್ನ ನಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆಯ ಆರೋಗ್ಯ ಗಂಭೀರ ಹಂತದಲ್ಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿದ್ದಾರೆ. ವಿದ್ಯಾರ್ಥಿನಿ ಸಾವಿನ ಬಳಿಕ ರ‍್ಯಾಗಿಂಗ್ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಪ್ರಾರಂಭಿಸಿದ್ದು, ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ; ಕೊಳದ ಮಧ್ಯೆ ಪಲ್ಟಿಯಾದ ಬೋಟ್.. ನಾಲ್ಕು ಜನ ನಾಪತ್ತೆ, ಇಬ್ಬರ ದೇಹ ಪತ್ತೆ.. ಈಜಿ ದಡ ಸೇರಿದ ನಾಲ್ವರು