ETV Bharat / bharat

ಕೊಯಮತ್ತೂರು: ಅಜ್ಜಿಯಿಂದಲೇ ಮೊಮ್ಮಗನ ಹತ್ಯೆ..ಮೊಮ್ಮಗಳ ಹತ್ಯೆಗೂ ಯತ್ನ - ಅಜ್ಜಿಯಿಂದಲೇ ಮೊಮ್ಮಗನ ಹತ್ಯೆ

ಅಜ್ಜಿಯೇ ಮೊಮ್ಮಗನನ್ನು ಹತ್ಯೆಗೈದು, ಮೊಮ್ಮಗಳ ಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

grandmother
grandmother
author img

By

Published : Oct 22, 2021, 6:41 PM IST

ಕೊಯಮತ್ತೂರು(ತಮಿಳುನಾಡು): ಅಜ್ಜಿಯೇ ತನ್ನ ಮೂರು ತಿಂಗಳ ಮೊಮ್ಮಗನನ್ನು ಕೊಂದು, ಶೌಚಾಲಯದಲ್ಲಿ ಮೊಮ್ಮಗಳ ಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಭಾಸ್ಕರನ್ - ಐಶ್ವರ್ಯ ದಂಪತಿ ಕುಂದಂಪಾಳ್ಯಂ ಮೂಲದವರಾಗಿದ್ದು, ಮೂರು ತಿಂಗಳ ಹಿಂದೆ ಐಶ್ವರ್ಯಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಧುರೈಗೆ ಕರೆ ತಂದಿದ್ದರು.

ಆದರೆ, ಅಕ್ಟೋಬರ್​ 21 ರಂದು ಐಶ್ವರ್ಯ ಅಂಗಡಿಗೆ ಹೋಗಿದ್ದ ಸಮಯದಲ್ಲಿ, ಐಶ್ವರ್ಯ ತಾಯಿ ಶಾಂತಿ ಮೂರು ತಿಂಗಳ ಮಗುವನ್ನು ವಿರೂಪಗೊಳಿಸಿ, ಹತ್ಯೆಗೈದಿದ್ದಾರೆ. ಅಲ್ಲದೇ, ಹೆಣ್ಣು ಮಗುವನ್ನು ಶೌಚಾಲಯದಲ್ಲಿ ಹತ್ಯೆಗೈಯ್ಯಲು ಯತ್ನಿಸಿದ್ದಾಳೆ. ಯಾರೋ ಬಾಗಿಲು ಬಡಿದಂತಾಗಿ ಶಾಂತಿ ಮನೆಯಿಂದ ಓಡಿ ಹೋಗಿದ್ದಾಳೆ.

ಇದನ್ನೂ ಓದಿ: ಕೊಲೆ ಮಾಡಿ ಅದನ್ನ ಆತ್ಮಹತ್ಯೆ ಅಂತಾ ಬಿಂಬಿಸಿದ್ದರು.. ಆದ್ರೀಗ ಐವರನ್ನ ಬಂಧಿಸಿದ ಪೊಲೀಸರು.. ಅದ್ಹೇಗೆ?

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹೆಣ್ಣುಮಗುವನ್ನು ರಕ್ಷಿಸಿದ್ದಾರೆ. ಗಂಡು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶಾಂತಿಯು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.