ETV Bharat / bharat

ಒಂದೇ ಕುಟುಂಬದ ಮೂವರು ಕಾರ್ಮಿಕರು ನೀರಿನಲ್ಲಿ ಮುಳುಗಿ ದಾರುಣ ಸಾವು - ಕಾರ್ಮಿಕರು ನೀರಿನಲ್ಲಿ ಮುಳುಗಿ ಸಾವು

ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಹಿನ್ನೆಲೆ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಘಟನೆ ನಡೆದು 7 ದಿನಗಳು ಕಳೆದರೂ ಯಾವುದೇ ಜನಪ್ರತಿನಿಧಿ ಅಥವಾ ಆಡಳಿತಾಧಿಕಾರಿಗಳು ಮೃತರ ಮನೆಗೆ ಹೋಗಿ ಕನಿಷ್ಟ ಸಾಂತ್ವನ ಸಹ ಹೇಳಿಲ್ಲ..

Three laborers died in Muradnagar gangnahar
ಒಂದೇ ಕುಟುಂಬದ ಮೂವರು ಕಾರ್ಮಿಕರು ಸಾವು
author img

By

Published : Apr 19, 2021, 7:17 PM IST

ಮುರಾದ್‌ನಗರ : ನೂರ್‌ಗಂಜ್ ಕಾಲೋನಿಯ ಒಂದೇ ಕುಟುಂಬಕ್ಕೆ ಸೇರಿದ ಮೂವರು ಕಾರ್ಮಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘೋರ ದುರಂತ ಸಂಭವಿಸಿದೆ.

ಒಂದೇ ಕುಟುಂಬದ ಮೂವರು ಕಾರ್ಮಿಕರು ಸಾವು

ಉದ್ಯೋಗ ಹುಡುಕಿಕೊಂಡು ಮೃತ ಮೂರು ಜನರು ದಾದ್ರಿ ಜಿಲ್ಲೆಯ ಪಯಲಿ ಗ್ರಾಮಕ್ಕೆ ಹೋಗಿದ್ದರು. ಏಪ್ರಿಲ್ 14ರಂದು ಅಲ್ಲಿಂದ ಹಿಂತಿರುಗುವಾಗ, ತೀವ್ರ ಸೆಕೆ ಹಿನ್ನೆಲೆ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ.

ಈ ವೇಳೆ ಓರ್ವ ಕಾರ್ಮಿಕ ನೀರಿನಲ್ಲಿ ಮುಳುಗಿದ್ದು ಅವನನ್ನು ರಕ್ಷಿಸಲು ಹೋಗಿ ಉಳಿದ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 20 ವರ್ಷದ ಇರ್ಫಾನ್, 32 ವರ್ಷದ ಫಿರೋಜ್ ಖಾನ್ ಮತ್ತು 36 ವರ್ಷದ ಮತ್ತೊಬ್ಬ ವ್ಯಕ್ತಿ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಹಿನ್ನೆಲೆ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಘಟನೆ ನಡೆದು 7 ದಿನಗಳು ಕಳೆದರೂ ಯಾವುದೇ ಜನಪ್ರತಿನಿಧಿ ಅಥವಾ ಆಡಳಿತಾಧಿಕಾರಿಗಳು ಮೃತರ ಮನೆಗೆ ಹೋಗಿ ಕನಿಷ್ಟ ಸಾಂತ್ವನ ಸಹ ಹೇಳಿಲ್ಲ.

ಈ ಕುರಿತು ಬೇಸರ ಹೊರ ಹಾಕಿರುವ ಗ್ರಾಮಸ್ಥರು ಮೂರು ತಿಂಗಳ ಹಿಂದಷ್ಟೇ ಈ ಮನೆಯ ಯಜಮಾನ ಸಾವನ್ನಪ್ಪಿದ್ದ. ಈಗ ಇನ್ನು ಮೂರು ಜನ ಸಾವನ್ನಪ್ಪಿದ್ದು ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಹೀಗಾಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈ ಬಡ ಕುಟುಂಬಕ್ಕೆ ಜನಪ್ರತಿನಿಧಿಗಳು ಆರ್ಥಿಕ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.