ಹೈದರಾಬಾದ್: ಹಿಂದೂ ಎನ್ನುವುದು ಭೌಗೋಳಿಕ ಅಸ್ಮಿತೆಯಾಗಿದೆ. ಹಿಮಾಲಯದಿಂದ ಹಿಡಿದು ಹಿಂದೂ ಮಹಾಸಾಗರದವರೆಗೆ ಹರಡಿಕೊಂಡಿರುವ ಭೂಮಿಯಲ್ಲಿ ವಾಸಿಸುವ ಎಲ್ಲಾ ಜನರನ್ನು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಕರೆದಿದ್ದಾರೆ. ಹೈದರಾಬಾದ್‌ನಲ್ಲಿ ಭಾರತ್ ನೀತಿ ಸಂಸ್ಥೆ ಆಯೋಜಿಸಿದ್ದ 10 ನೇ ಆವೃತ್ತಿಯ 'ಡಿಜಿಟಲ್ ಹಿಂದೂ ಸಮ್ಮೇಳನದಲ್ಲಿ' ಭಾಗವಹಿಸಿ ಅವರು ಮಾತನಾಡಿದರು.
ಅನೇಕ ವಿದೇಶಿ ವಿದ್ವಾಂಸರು ನಮ್ಮ ದೇಶವನ್ನು ಜ್ಞಾನದ ನಾಡು ಎಂದು ಒಪ್ಪಿಕೊಂಡಿದ್ದಾರೆ. ಭಾರತೀಯರಾಗಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಹಿಂದೂ ಧರ್ಮವು ಒಂದು ಜೀವನ ಪದ್ಧತಿ. ನಾವು ಎಂದಿಗೂ 'ಹಿಂದೂ' ಪದವನ್ನು ಕೆಲವು ಚೌಕಟ್ಟುಗಳಿಗೆ ಸೀಮಿತಗೊಳಿಸಬಾರದು ಎಂದು ಅವರು ಹೇಳಿದ್ದಾರೆ.
ಭಾರತ ಪ್ರಜಾಪ್ರಭುತ್ವಕ್ಕೆ ಉತ್ತಮ ಉದಾಹರಣೆ. ಇದನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ನಾವು ನಮ್ಮ ದೇಶವನ್ನು ತಾಯಿಯಂತೆ ಕಾಣುತ್ತೇವೆ. ಜೊತೆಗೆ, ಭಾರತವನ್ನು 'ಭಾರತ ಮಾತಾ' ಎಂದು ಕರೆಯುತ್ತೇವೆ. ಇದು ನಮ್ಮನ್ನು ಉಳಿದವರಿಂದ ವಿಭಿನ್ನವಾಗಿಸಿದೆ ಎಂದು ಕೇಂದ್ರ ಸಚಿವ ಚೌಬೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ: 25 ದಿನಗಳಿಂದ ಇಂಧನ ದರ ಸ್ಥಿರ: ದೇಶ, ರಾಜ್ಯದ ಇಂದಿನ ತೈಲ ಬೆಲೆಯ ಚಿತ್ರಣ ಇಲ್ಲಿದೆ..