ಕಣ್ಣೂರು(ಕೇರಳ) : ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳನ್ನು ಸಾಕುವುದು ಸಾಮಾನ್ಯ. ಆದರೆ ಕೇರಳದಲ್ಲಿ ಕಾಲೇಜು ವಿದ್ಯಾರ್ಥಿಯೋರ್ವ ಆಫ್ರಿಕನ್ ಹೆಬ್ಬಾವುಗಳನ್ನು ಸಾಕುವುದರ ಜೊತೆಗೆ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾನೆ.
ಕಣ್ಣೂರು ಜಿಲ್ಲೆಯ ಪಯಂಗಡಿ ನಿವಾಸಿ ಮಹಮ್ಮದ್ ಹಿಶಾಮ್ ತನ್ನ ಮನೆಯಲ್ಲಿ ಇಂತಹ ಹಾವುಗಳಿಂದ ಆದಾಯ ಗಳಿಸುತ್ತಿದ್ದಾನೆ. ಇವನ ಬಳಿ ಸುಮಾರು 25,000 ರೂ.ಗಳಿಂದ 4 ಲಕ್ಷ ರೂ.ವರೆಗೆ ಬೆಲೆಬಾಳುವ ಹಾವುಗಳ ಸಂಗ್ರಹವಿದೆ.
ವಿವಿಧ ಪ್ರಬೇಧಗಳ ಹಾವಿನ ಸಂಗ್ರಹ : ಈತನ ಬಳಿ ಕಿಂಗ್ ಕೋನ್, ಮಿಲ್ಕ್ ಸ್ನೇಕ್, ಬ್ಲಡ್ ಹೆಬ್ಬಾವು, ಕಾರ್ಪೆಟ್ ಹೆಬ್ಬಾವು, ಗ್ರೀನ್ ಟ್ರೀ ಹೆಬ್ಬಾವು ಮತ್ತು ಕೀನ್ಯಾದ ಸ್ಯಾಂಡ್ ಬೋವಾ ಮೊದಲಾದ ವಿಭಿನ್ನ ಪ್ರಭೇದದ ಹಾವುಗಳಿವೆ. ಹಿಶಾಮ್ ಈ ಹಾವುಗಳಿಗೆ ಆಹಾರವಾಗಿ ನೀಡಲು ಇಲಿಗಳನ್ನು ಪ್ರತ್ಯೇಕವಾಗಿ ಸಾಕಿದ್ದಾರೆ. ಅಲ್ಲದೆ ಹಿಶಾಮ್ ವಿವಿಧ ಬಗೆಯ ಪಕ್ಷಿಗಳು ಮತ್ತು ಆಸ್ಟ್ರೇಲಿಯನ್ ಗ್ಲೈಡರ್‌ಗಳನ್ನೂ ಸಾಕಿದ್ದಾನೆ.
ಸರ್ಕಾರವು ಇವುಗಳನ್ನು ಸಾಕುವ ಬಗ್ಗೆ ಯಾವುದೇ ನೋಂದಣಿಗೆ ಅವಕಾಶ ನೀಡಿಲ್ಲವಾದರೂ, ನಾನು ಪರಿವೇಶ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ ಇವುಗಳನ್ನು ಸಾಕಬಹುದು. ಈ ಹಾವುಗಳನ್ನು ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿದ ಬಳಿಕವೇ ತರುತ್ತೇನೆ ಎಂದು ಹಿಶಾಮ್ ಹೇಳುತ್ತಾನೆ.
ಹೆಬ್ಬಾವುಗಳನ್ನು ನಿರ್ವಹಣೆಗೆ ಸುಲಭವಾಗಿದ್ದು, ಇವುಗಳು ವಿಷರಹಿತವಾಗಿವೆ. ನಾನು ಇವುಗಳನ್ನು ದೆಹಲಿಯಿಂದ ತಂದು ಸಾಕುತ್ತೇನೆ. ಇದರಲ್ಲಿ ಕೆಲವನ್ನು ಮಾರಾಟ ಮಾಡುತ್ತೇನೆ. ನನಗಿದು ಹವ್ಯಾಸ ಮತ್ತು ಆದಾಯದ ಭಾಗವಾಗಿದೆ ಎಂದು ಹಿಶಾಮ್ ಹೇಳುತ್ತಾನೆ. ಹಿಶಾಮ್ ಮಂಗಳೂರಿನ ಪಿಎ ಕಾಲೇಜಿನಲ್ಲಿ ಬಿಎಸ್ಸಿ ಆಹಾರ ತಂತ್ರಜ್ಞಾನ ವಿದ್ಯಾರ್ಥಿಯಾಗಿದ್ದಾನೆ.
ಇದನ್ನೂ ಓದಿ : ಸಾಕ್ಷರ ಗ್ರಾಮ ಮೆಟ್ಲ ತಿಮ್ಮಾಪುರ: ಈ ಗ್ರಾಮದ ವೈಶಿಷ್ಟ್ಯ ಹಲವಾರು