ಗಯಾ( ಬಿಹಾರ): ಆಧುನಿಕತೆ ಭರಾಟೆ, ಪಾಶ್ಚಾತ್ಯ ಶೈಲಿಯ ಅನುಕರಣೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ನೀತಿಗೆ ಶರಣು ಹೋಗಿ, ಕೂಡಿ ಬಾಳುವ ಹಾಗೂ ಸಹ ಜೀವನದ ಪದ್ಧತಿಯನ್ನೇ ಮರೆತು ಹೋಗುತ್ತಿವೆ. ನಾನು- ನನ್ನದು ಎಂಬುದೇ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಸಹ ಜೀವನ ಎಂಬುದು ಮರೀಚಿಕೆ ಆಗುತ್ತಿದೆ. ಅವಿಭಕ್ತ ಕುಟುಂಬಗಳು ಮರೀಚಿಕೆ ಆಗಿ, ವಿಶಾಲ ಮನೋಭಾವಗಳು ಸಂಕುಚಿತತೆ ಪಡೆದು ಯಾವುದೋ ಕಾಲವಾಗಿದೆ. ಆದರೆ, ಇಲ್ಲೊಂದು ಕುಟುಂಬ ತುಂಬು ಜೀವನ ನಡೆಸುತ್ತಿದೆ. ಬರೋಬ್ಬರಿ 62 ಜನರು ಕೂಡಿ ಬಾಳುತ್ತಿದ್ದು, ನಮ್ಮ ಸಂಸಾರ ಆನಂದ ಸಾಗರ ಎನ್ನುತ್ತಿದೆ.
100 ವರ್ಷಗಳಿಂದ ಹಾಕಿದ ಬುನಾದಿ: ಹೌದು ಇಂತಹದ್ದೊಂದು ಕುಟುಂಬ ಬಿಹಾರದ ಗಯಾದಲ್ಲಿದೆ. ಕಲ್ಯಾಣ್ ಸಿಂಗ್ ಎಂಬುವರು 100 ವರ್ಷಗಳ ಹಿಂದೆ ಈ ಕುಟುಂಬಕ್ಕೆ ಅಡಿಪಾಯ ಹಾಕಿದ್ದರು. ಸುಮಾರು ನೂರು ವರ್ಷಗಳ ಹಿಂದೆ ಅಂದರೆ 1920 ರಲ್ಲಿ ಕಲ್ಯಾಣ್ ಸಿಂಗ್ ಇಂತದ್ದೊಂದು ಸಹ ಜೀವನ ಆರಂಭಿಸಿದ್ದರು. ಆ ನಂತರ ಅವರ ಕುಟುಂಬವು ಪೀಳಿಗೆಯಿಂದ ಪೀಳಿಗೆಗೆ ಬೆಳೆಯುತ್ತಲೇ ಇದೆ.
ಕಲ್ಯಾಣ್ ಸಿಂಗ್ ಅವರ ನಿಧನದ ನಂತರವೂ ಎಲ್ಲವೂ ಹಾಗೆಯೇ ಇತ್ತು. ಅವರ ನಂತರ ಮಕ್ಕಳಾದ ಕನ್ಹಯ್ಯಾ ಪ್ರಸಾದ್ ಮತ್ತು ರಾಮ್ ಲಖನ್ ಪ್ರಸಾದ್ ಕುಟುಂಬ ಒಗ್ಗಟ್ಟಿನ ಪರಂಪರೆಯನ್ನು ಕಿಂಚಿತ್ತೂ ಛಿದ್ರಗೊಳಿಸದೇ ಕಾಪಾಡಿಕೊಂಡು ಬಂದರು. ಈಗ ಕುಟುಂಬ ಕಳೆದ 6 ತಲೆಮಾರುಗಳಿಂದ ಕೌಟುಂಬಿಕ ಐಕ್ಯತೆಗೆ ಮಾದರಿಯಾಗಿದೆ.
ಸಮಾಜಕ್ಕೆ ಮಾದರಿ ಈ ಪರಿವಾರ: ಈ ಕುಟುಂಬದಲ್ಲಿನ ಒಗ್ಗಟ್ಟು ಎಷ್ಟಿದೆ ಎಂದರೆ, ಒಬ್ಬ ಸದಸ್ಯನಿಗೆ ನೋವಾದರೆ ಇಡೀ ಕುಟುಂಬವೇ ಅದನ್ನು ಅರಿತುಕೊಳ್ಳುತ್ತದೆ. ಈ ಆಧುನಿಕ ಯುಗದಲ್ಲಿ ಇಂತಹ ಸಹ ಜೀವನ ಹಾಗೂ ಹೊಂದಿಕೊಂಡು ಅರಿತು ಬಾಳುವ ನಿದರ್ಶನಗಳೇ ವಿರಳ. ಆದರೆ ಈ ಕುಟುಂಬ ಅಂತಹ ಬಿರುಕುಗಳಿವೆ ಅವಕಾಶ ನೀಡಿಲ್ಲ. ಅಂದ ಹಾಗೇ ಕಲ್ಯಾಣ್ ಪರಿವಾರ ಇರುವುದು ಬಿಹಾರದ ಬೋಧಗಯಾದಲ್ಲಿ.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಕುಟುಂಬ ಇಲ್ಲಿನ ಜನರಿಗೆ ಸ್ಫೂರ್ತಿಯ ಮೂಲವಾಗಿದೆ. ಪ್ರಸ್ತುತ ಸಮಾಜದಲ್ಲಿ ಸಣ್ಣಪುಟ್ಟದ್ದಕ್ಕೆ ಜಗಳ ಮಾಡಿ ಮನೆ ಒಡೆದುಕೊಳ್ಳುವುದು ನಮ್ಮ ಮುಂದೆಯೇ ಇದೆ. ಆದರೆ ಇಂತಹ ಸಣ್ಣಪುಟ್ಟ ಮನಸ್ಥಾಪಗಳು ಈ ಮನೆಯ ಒಗ್ಗಟ್ಟನ್ನು ಹಾಳು ಮಾಡಿಲ್ಲ. ಈ ಮೂಲಕ ಕಲ್ಯಾಣ ಸಿಂಗ್ ಕುಟುಂಬದ ಒಗ್ಗಟ್ಟಿನ ಮೂಲಕ ಇಲ್ಲಿನ ಜನತೆಗೆ ಹಾಗೂ ಸಮಾಜಕ್ಕೆ ದೊಡ್ಡ ಪಾಠವನ್ನೇ ಕಲಿಸುತ್ತಿದೆ.
ಮನೆ ಹಿರಿಯನಿಗೆ 85, ಒಟ್ಟು ಸದಸ್ಯರು 62: ಕಲ್ಯಾಣ್ ಕುಟುಂಬದ ಹಿರಿಯ ಕೃಷ್ಣ ಕನ್ಹಯ್ಯಾ ಪ್ರಸಾದ್, ಅವರಿಗೆ 85 ವರ್ಷ. ಅವರ ಪತ್ನಿ ರಾಧಿಕಾ ದೇವಿಗೆ ಈಗ 80 ವರ್ಷ. ಕುಟುಂಬವನ್ನು ಒಗ್ಗೂಡಿಸುವಲ್ಲಿ ಇಬ್ಬರದ್ದು ಬಹು ದೊಡ್ಡ ಪಾತ್ರ. ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ 62. ಬೋಧಗಯಾದ ಟಿಕಾ ಬಿಘಾ ಗ್ರಾಮದಲ್ಲಿ ಸುಮಾರು ಒಂದೂವರೆ ಎಕರೆ ಭೂಮಿಯಲ್ಲಿ ಇವರ ಮನೆ ಇದೆ. ಈ ಮನೆಯಲ್ಲಿ ಸುಮಾರು 57 ಕೊಠಡಿಗಳಿವೆ. ಎಲ್ಲಾ ಕುಟುಂಬ ಸದಸ್ಯರಿಗೂ ಪ್ರತ್ಯೇಕ ಕೋಣೆಗಳಿರುವುದು ವಿಶೇಷ.
ಒಂದೇ ಅಡುಗೆ ಮನೆಯಲ್ಲಿ ಊಟ: ಕುಟುಂಬದ 62 ಸದಸ್ಯರ ಅಡುಗೆ ಮನೆ ಒಂದೇ. ಎಲ್ಲ 62 ಸದಸ್ಯರಿಗೂ ಒಂದೇ ಅಡುಗೆಮನೆಯಲ್ಲಿ ಊಟವನ್ನು ತಯಾರಿಸಲಾಗುತ್ತದೆ. ಊಟ ಸಿದ್ಧವಾದ ನಂತರ ಮನೆಯವರೆಲ್ಲ ಸೇರಿ ಊಟ ಮಾಡುತ್ತಾರೆ. ನಮ್ಮ ಚಿಕ್ಕಪ್ಪ ರಾಮ್ ಲಖನ್ ಸಿಂಗ್ ಮತ್ತು ಚಿಕ್ಕಮ್ಮ ಗಂಗಾದೇವಿ ಅವರು ಇಡೀ ಕುಟುಂಬವನ್ನು ಒಗ್ಗೂಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಸೋದರ ಸಂಬಂಧಿಗಳಲ್ಲಿ ಹಿರಿಯರಾದ ಅಜಯ್ ಸಿಂಗ್ ಕಲ್ಯಾಣ್ ಹೇಳಿದ್ದಾರೆ.
ಆರು ತಲೆಮಾರುಗಳಲ್ಲಿ ಇನ್ನೂ ನಾಲ್ಕು ತಲೆಮಾರುಗಳಿವೆ. ಕುಟುಂಬದ ಹಿರಿಯ ಸದಸ್ಯ ಕೃಷ್ಣ ಕನ್ಹಯ್ಯಾ ಪ್ರಸಾದ್ ಮತ್ತು ಕುಟುಂಬದ ಕಿರಿಯ ಸದಸ್ಯರಾದರೆ, 10 ತಿಂಗಳ ಬಾಲಕಿ ಚಿಮಿ ಕಲ್ಯಾಣ್ ಅತ್ಯಂತ ಚಿಕ್ಕ ವಯಸ್ಸಿನವಳಾಗಿದ್ದಾಳೆ. ಮತ್ತೊಂದೆಡೆ, ನಮ್ಮಲ್ಲಿ ಸಂಬಂಧಿಕರು ಸೇರಿದಂತೆ ಒಟ್ಟು 9 ಜನ ಸಹೋದರರಿದ್ದೇವೆ ಎಂದು ಕಲ್ಯಾಣ್ ಪರಿವಾರದ ವಿವೇಕ್ ಕಲ್ಯಾಣ್ ಮನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಕಲ್ಯಾಣ್ ಕುಟುಂಬದ 9 ಸಹೋದರರು ಸ್ವಂತ ವ್ಯಾಪಾರ ಹೊಂದಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೈಲ್ಸ್ ಮಾರ್ಬಲ್ ಅಂಗಡಿಗಳು, ಎನ್‌ಜಿಒ, ಎಲೆಕ್ಟ್ರಾನಿಕ್ ಅಂಗಡಿ ಸೇರಿದಂತೆ ಇತರ ವ್ಯಾಪಾರವನ್ನು ಈ ಕುಟುಂಬ ಮಾಡುತ್ತಿದೆ. ಎನ್‌ಜಿಒಗಳ ಮೂಲಕ ಬಡ ಮತ್ತು ಅಸಹಾಯಕರಿಗೆ ಕಲ್ಯಾಣ ಕುಟುಂಬ ಸಹಾಯ ಮಾಡುತ್ತದೆ.
ಇದನ್ನು ಓದಿ: ಶಾಕಿಂಗ್...! ತಾನೇ ಎದುರು ನಿಂತು ಸ್ನೇಹಿತರಿಗೆ ಹೆಂಡತಿ ಹಂಚಿಕೊಳ್ಳಲು ಯತ್ನಿಸಿದ ಭೂಪ: ದೂರು ದಾಖಲು