ETV Bharat / bharat

'ಸ್ಪೈಡರ್ ಮ್ಯಾನ್' ಶೈಲಿಯಲ್ಲಿ ಕಳ್ಳನ ಕೈಚಳಕ - ಚಿನ್ನಾಭರಣ ಎಗರಿಸಿ ಪರಾರಿ!

ಖಜುರಿ ಖಾಸ್ ಏರಿಯಾದ ಸುರೇಂದರ್​ ಸಿಂಗ್​ ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ.

thief stole gold from home in Delhi
'ಸ್ಪೈಡರ್ ಮ್ಯಾನ್' ಶೈಲಿಯಲ್ಲಿ ಕಳ್ಳನ ಕೈಚಳಕ
author img

By

Published : Jun 3, 2022, 3:15 PM IST

ನವದೆಹಲಿ: ದೆಹಲಿಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದ್ದು, ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯವೀಗ ಎಲ್ಲೆಡೆ ವೈರಲ್ ಆಗಿದೆ. ಮೇ.31ರ ನಡುರಾತ್ರಿ ಖಜುರಿ ಖಾಸ್ ಏರಿಯಾದ ಸುರೇಂದರ್​ ಸಿಂಗ್​ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನದ ಸರ, ಉಂಗುರ, ಮೊಬೈಲ್​ ಎಗರಿಸಿ ಕಳ್ಳ ಪರಾರಿಯಾಗಿದ್ದಾನೆ.

2 ಗಂಟೆ 17 ನಿಮಿಷದ ಹೊತ್ತಿಗೆ ಮನೆಯ ಗೇಟ್​ ಮೂಲಕ ಕಳ್ಳ ಎಸ್ಕೇಪ್​ ಆಗಿದ್ದನ್ನು ನೋಡಿದೆ ಎಂದು ಮನೆ ಮಾಲೀಕ ಸುರೇಂದರ್​ ಸಿಂಗ್​ ತಿಳಿಸಿದ್ದಾರೆ. ವಿದ್ಯುತ್ ವೈಯರ್​ ಹಿಡಿದು 'ಸ್ಪೈಡರ್ ಮ್ಯಾನ್' ಶೈಲಿಯಲ್ಲಿ ಗೋಡೆ ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ... ರಾಜಕೀಯ ಪಕ್ಷದ ಮುಖಂಡರ ಪುತ್ರ ಭಾಗಿ!?

ಮನೆಯಲ್ಲಿ 8 ಮಂದಿ ಇದ್ದೆವು. ಬೀರುವಿನ ಬೀಗ ಹಾಕಿರಲಿಲ್ಲ. ಕಳ್ಳ ಅರ್ಧ ಗಂಟೆ ಇದ್ದಿರಬಹುದು. ಆತ ಚಿನ್ನದ ಸರ, ಉಂಗುರ, ಮೊಬೈಲ್ ಕಳ್ಳತನ ಮಾಡಿದ್ದಾನೆ. ಆ ರಾತ್ರಿ ನನ್ನ ತಾಯಿ ಕಳ್ಳನನ್ನು ನೋಡಿ ಕೂಗಿಕೊಂಡಿದ್ದಾರೆ. ಕೂಡಲೇ ಕಳ್ಳ ಪರಾರಿಯಾಗಿದ್ದಾನೆ. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ಕೊಟ್ಟೆವು ಎಂದು ಸುರೇಂದರ್​ ಸಿಂಗ್​ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಜುರಿ ಖಾಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.