ETV Bharat / bharat

‘ಸಾರಿ ಫ್ರೆಂಡ್​, ಮತ್ತೆ ವಾಪಸ್​ ಕೊಡ್ತೀನಿ’... ಪೊಲೀಸ್​ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟ ಭೂಪ! - ಭಿಂಡ್​ ಸುದ್ದಿ

ಪೊಲೀಸ್​ ಅಧಿಕಾರಿಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿ ‘ಸಾರಿ ಫ್ರೆಂಡ್​, ಮತ್ತೆ ನಿಮ್ಮ ಹಣವನ್ನು ವಾಪಸ್​ ಕೊಡ್ತಿನಿ’ ಅಂತಾ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂಡ್​ ಜಿಲ್ಲೆಯಲ್ಲಿ ನಡೆದಿದೆ.

Thief Leaves Apology Letter, Thief Leaves Apology Letter Behind After theft, Thief Leaves Apology Letter Behind After theft Into Cop Home, Bhind news, ಪೊಲೀಸ್​ ಅಧಿಕಾರಿ ಮನೆಯಲ್ಲಿ ಕಳ್ಳತನ, ಪೊಲೀಸ್​ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟ ಭೂಪ, ಭಿಂಡ್​ ಸುದ್ದಿ,
ಪೊಲೀಸ್​ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟ ಭೂಪ
author img

By

Published : Jul 7, 2021, 1:15 PM IST

Updated : Jul 7, 2021, 1:24 PM IST

ಭಿಂಡ್(ಮಧ್ಯಪ್ರದೇಶ)​: ವ್ಯಕ್ತಿವೋರ್ವ ಪೊಲೀಸ್​ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಪ್ರಕರಣ ನಗರದಲ್ಲಿ ನಡೆದಿದೆ. ನಗರದ ಅಸಿಸ್ಟಂಟ್​ ಸಬ್​ ಇನ್ಸ್​ಪೆಕ್ಟರ್​ ಕಮಲೇಶ್​ ಕಠಾರಿ ಮನೆಯಲ್ಲಿ ಕಳ್ಳತನವಾಗಿದ್ದು, ಆ ಜಾಗದಲ್ಲಿ ಪತ್ರವೊಂದು ದೊರೆತಿದೆ. ಕದ್ದ ಹಣವನ್ನು ಆದಷ್ಟು ಬೇಗ ವಾಪಸ್​ ನೀಡುವುದಾಗಿ ಅಧಿಕಾರಿಗೆ ಕಳ್ಳ ಭರವಸೆ ನೀಡಿದ್ದಾನೆ.

ಪೊಲೀಸ್​ ಅಧಿಕಾರಿ ಕಮಲೇಶ್​ ಕಠಾರಿ ಕಳೆದ ಬುಧವಾರದಂದು ತಮ್ಮ ಹೆಂಡ್ತಿ, ಮಕ್ಕಳನೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಸೋಮವಾರ ರಾತ್ರಿ ತಮ್ಮ ಮನೆಗೆ ಹಿಂದುರಿಗಿದ್ದಾರೆ. ಈ ವೇಳೆ ಬಾಗಿಲು ತೆಗೆದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಠಾರಿ ಮನೆಯ ಬಾಗಿಲು ತೆಗೆದು ನೋಡಿದಾಗ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಪಕ್ಕದಲ್ಲೇ ಪತ್ರವೊಂದು ದೊರೆತಿದೆ. ಪತ್ರ ಓದಿದಾಗ.. ‘ಸಾರಿ ಫ್ರೆಂಡ್​.. ನನ್ನನ್ನು ಕ್ಷಮಿಸು. ಇದೆಲ್ಲ ಪರಿಸ್ಥಿತಿ ಕಾರಣದಿಂದ ಮಾಡಲಾಯಿತು. ನನ್ನ ಸ್ನೇಹಿತನ ಪ್ರಾಣವನ್ನು ಕಾಪಾಡುವ ಸಲುವಾಗಿ ನಾನು ಈ ಕಳ್ಳತನ ಮಾಡಬೇಕಾಯಿತು. ಮತ್ತೆ ನನಗೆ ಹಣ ಬಂದಾಕ್ಷಣ ನಿನ್ನ ಬಳಿ ಕಳ್ಳತನ ಮಾಡಿದ್ದನ್ನು ವಾಪಸ್​ ನೀಡುತ್ತೇನೆ’ ಎಂದು ಬರೆದಿದ್ದಾನೆ. ಈ ಪತ್ರ ನೋಡಿದ ಕಠಾರಿಗೆ ಅಚ್ಚರಿಯಾಗಿದೆ.

ಈ ಕಳ್ಳತನ ಪ್ರಕರಣ ಭಿಂಡ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಕಠಾರಿಯ ಸಮೀಪ ಬಂಧುಗಳೇ ಕಳ್ಳತನ ಮಾಡಿರಬಹುದೆಂದು ಅನುಮಾನಿಸುತ್ತಿದ್ದಾರೆ.

ಸಂತ್ರಸ್ತೆಯ ಪ್ರಕಾರ, ಮನೆಯ ಹೊರಭಾಗವನ್ನು ಲಾಕ್ ಮಾಡಲಾಗಿದೆ. ಆದರೆ ಕೋಣೆಯ ಬೀಗ ಮುರಿದುಹೋಗಿದೆ, ಮತ್ತು ಅವಳ ಸೂಟ್‌ಕೇಸ್‌ನಿಂದ ಎರಡು ಚಿನ್ನದ ಉಂಗುರಗಳು, ಒಂದು ಬಿಸಾರ್, ಬಂದಾನ, ಕಿವಿಯೋಲೆ, ಮತ್ತು 3 ಜೋಡಿ ಬೆಳ್ಳಿ ಕಣಕಾಲುಗಳು, ಕವಚ, 3 ಈ ಜೋಡಿ ಗಿಡ, ಮತ್ತು ಮಕ್ಕಳ ದಾರವನ್ನು ಕಳವು ಮಾಡಲಾಗಿದೆ. ಸಂತ್ರಸ್ತೆ ಕೂಡಲೇ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಎಫ್‌ಐಆರ್ ದಾಖಲಿಸಿದ್ದಾರೆ.

Last Updated : Jul 7, 2021, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.