ಹೈದರಾಬಾದ್ : ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಡುವೆಯೇ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮಾತನಾಡಿ, ದೇಶದಲ್ಲಿ ಸ್ಕಾರ್ಫ್ ಧರಿಸಲು ಯಾವುದೇ ನಿಷೇಧವಿಲ್ಲ ಮತ್ತು ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳು ಸಮಾನವಾಗಿವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರು, ಈ ವಿಷಯ ನ್ಯಾಯಾಲಯದಲ್ಲಿದೆ. ಭಾರತದಲ್ಲಿ ಹಿಜಾಬ್‌ಗೆ ಯಾವುದೇ ನಿಷೇಧವಿಲ್ಲ. ಕೆಲವು ಸಂಸ್ಥೆಗಳು ತಮ್ಮ ಶಿಸ್ತುಪಾಲನೆ ಹಿನ್ನೆಲೆ ಉಡುಗೆಯನ್ನು ಹೊಂದಿವೆ ಎಂದಿರುವ ಅವರು, ನಾವು ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವುದರ ಜೊತೆ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು ಎಂದರು.
ಇದನ್ನೂ ಓದಿ: ಯುಪಿ ಮತದಾನದ ವೇಳೆ ಶಂಕಿತ ವಸ್ತು ಸ್ಫೋಟ.. ಓರ್ವ ಸಾವು
ಇದಕ್ಕೂ ಮೊದಲು, ನಖ್ವಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಅವರು 37ನೇ “ಹುನಾರ್ ಹಾತ್” ಅನ್ನು ಉದ್ಘಾಟಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕದ ಕರಾವಳಿ ಜಿಲ್ಲಾ ಕೇಂದ್ರ ಪಟ್ಟಣವಾದ ಉಡುಪಿಯಲ್ಲಿರುವ ಪಿಯುಸಿ ಬಾಲಕಿಯರ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದಕ್ಕಾಗಿ ಆರು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಅಂದಿನಿಂದ ಹಿಜಾಬ್ ಗಲಾಟೆ ಪ್ರಾರಂಭವಾಗಿದೆ ಎಂದು ಸಚಿವ ಜಿ ಕಿಶನ್ ರೆಡ್ಡಿ ಮಾಹಿತಿ ನೀಡಿದರು.