ದಿಯು: 1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ಜಲಾಂತರ್ಗಾಮಿ ದಾಳಿಯಿಂದ ಭಾರತೀಯ ಸೇನೆಯ ಐಎನ್‌ಎಸ್ ಖುಕ್ರಿ ಯುದ್ಧನೌಕೆ ಮುಳುಗಡೆಯಾಗಿತ್ತು. ಬಳಿಕ ಅದನ್ನು ಪತ್ತೆ ಹಚ್ಚಿದ್ದ ನೌಕಾದಳ ಬಳಿಕ ಅದನ್ನು ದುರಸ್ತಿ ಮಾಡಿತ್ತು. ಇದೀಗ ಆ ನೌಕೆಯನ್ನು ಸ್ಮಾರಕ ರೂಪದಲ್ಲಿ ಇರಿಸಲು ನಿರ್ಧರಿಸಿದೆ. ಈ ಮೂಲಕ ಜನರು ಹಡಗಿನ ಅದ್ಭುತ ಇತಿಹಾಸ ಹಾಗೂ ಈ ಯುದ್ಧ ನೌಕೆಯ ವೀರ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಪುನರ್ ನಿರ್ಮಾಣಗೊಂಡಿರುವ ಐಎನ್‌ಎಸ್ ಖುಕ್ರಿ ಯುದ್ಧನೌಕೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಈ ಐತಿಹಾಸಿಕ ಯುದ್ಧ ಹಡಗು ಇದೀಗ ವಿಶಾಖಪಟ್ಟಣದಿಂದ ದಿಯು ತಲುಪಿದೆ. ದಿಯು ಚಕ್ರತೀರ್ಥ ಕಡಲತೀರದಲ್ಲಿ ಈ ಯುದ್ಧನೌಕೆಯನ್ನು ಇರಿಸಲಾಗುವುದು. ಜನವರಿ 26 ರಂದು ದಿಯು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಲೋನಿ ರೈ ತಿಳಿಸಿದ್ದಾರೆ.
ಓದಿ: ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು
1971ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ 2 INS ಖುಕ್ರಿ ನೌಕೆಗಳು ಯುದ್ಧದಲ್ಲಿ ಭಾಗವಹಿಸಲು ಮುಂಬೈ ಮತ್ತು ವಿಶಾಖಪಟ್ಟಣಂನಿಂದ ದಿಯುಗೆ ತೆರಳುತ್ತಿದ್ದವು. ಇವುಗಳಲ್ಲಿ ಮುಂಬೈನಿಂದ ದಿಯುಗೆ ಬರುತ್ತಿದ್ದ ಖುಕ್ರಿ ಯುದ್ಧನೌಕೆಯನ್ನು ಪಾಕಿಸ್ತಾನ ಜಲಾಂತರ್ಗಾಮಿಯಿಂದ ಉಡಾಯಿಸಿತ್ತು. ಇದರಲ್ಲಿ 171 ಕ್ಕೂ ಹೆಚ್ಚು ಜನರು ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದರು.
ಹೀಗೆ ದೇಶದ ರಕ್ಷಣೆಗಾಗಿ ಹೋರಾಡಿದ್ದ ಐಎನ್‌ಎಸ್ ಖುಕ್ರಿಯನ್ನು ಈಗ ಸ್ಮಾರಕವನ್ನಾಗಿಸಲಾಗಿದೆ. ಈ ಸ್ಮಾರಕವನ್ನು ಜನವರಿ 26 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಇದರಿಂದ ದಿಯುಗೆ ಭೇಟಿ ನೀಡುವ ಪ್ರವಾಸಿಗರು 171 ಅಧಿಕಾರಿಗಳು ಮತ್ತು ಧೀರ ಸೈನಿಕರೊಂದಿಗೆ ಯುದ್ಧನೌಕೆ ಖುಕ್ರಿಯ ಶೌರ್ಯ ಮತ್ತು ನಿರ್ಭೀತ ಕಥೆ ವೀಕ್ಷಿಸಬಹುದಾಗಿದೆ.