ಮುಂಬೈ(ಮಹಾರಾಷ್ಟ್ರ): ಎಲ್ಲೆಡೆ ವಿನಾಯಕ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಗಣಪತಿ 12 ಹೆಸರುಗಳಿವೆ. ಗಣೇಶನ ಮೊದಲ ಹೆಸರು ವಕ್ರತುಂಡ, ಎರಡನೇಯದು ಏಕದಂತ, ಮೂರನೇಯದು ಕೃಷ್ಣಪಿಂಗಾಕ್ಷ, ನಾಲ್ಕನೇಯದು ಗಜವಕ್ರ, ಐದನೇಯದು ಶ್ರೀ ಲಂಬೋದರ, ಆರನೇಯದು ವಿಕಟ್, ಏಳನೇಯದು ವಿಘ್ನ ರಾಜೇಂದ್ರ, ಎಂಟನೇಯದು ಧುಮ್ರವರ್ಣ, ಒಂಬತ್ತನೇಯದು ಶ್ರೀ ಬಾಲಚಂದ್ರ, ಹತ್ತನೇಯದು ಶ್ರೀ ವಿನಾಯಕ, ಹನ್ನೊಂದನೇಯದು ಗಣಪತಿ ಮತ್ತು ಹನ್ನೆರಡನೇಯದು ಶ್ರೀ ಗಜಾನನ.
ಈ ಹನ್ನೆರಡು ಹೆಸರುಗಳಲ್ಲಿ ಮೂರನೇ ಹೆಸರಾದ ಕೃಷ್ಣಪಿಂಗಾಕ್ಷ ಎಂಬ ಹೆಸರು ಗಣಪತಿಗೆ ಹೇಗೆ ಬಂತು ಎಂಬ ಬಗ್ಗೆ ಸಂಶೋಧಕ ಅಶುತೋಷ್ ದಾಮ್ಲೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.