ETV Bharat / bharat

34 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಶಾಲಾ ಶುಲ್ಕ ಪಾವತಿ: ಇದು ನಿಶಿತಾ ರಜಪೂತ್ ಸಾಧನೆ - Nishita Rajput latest news

ನಾನು ನನ್ನ ತಂದೆಯಿಂದ ಸ್ಫೂರ್ತಿ ಪಡೆದಿದ್ದೇನೆ. ನನ್ನ ತಂದೆ ನನ್ನ ರೋಲ್ ಮಾಡೆಲ್. ನನ್ನ ಪೋಷಕರು ನಮ್ಮ ಮನೆಗೆ ರಜೆಯ ಸಮಯದಲ್ಲಿ ಅನಾಥಾಶ್ರಮಗಳಿಂದ ಮಕ್ಕಳನ್ನು ಕರೆತರುತ್ತಿದ್ದರು. ನಾವು ಅವರೊಂದಿಗೆ ನಮ್ಮ ಕೋಣೆಗಳನ್ನು ಹಂಚಿಕೊಳ್ಳುತ್ತಿದ್ದೆವು ಎಂದು ನಿಶಿತಾ ರಜಪೂತ್ ಹೇಳಿದ್ದಾರೆ.

The story of nishita rajput, who donated school fees of 34,500 girls in a decade
ದಶಕದಲ್ಲೇ 34 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಶಾಲಾ ಶುಲ್ಕ ಪಾವತಿ: ಇದು ನಿಶಿತಾ ರಜಪೂತ್ ಸಾಧನೆ
author img

By

Published : Nov 3, 2021, 8:58 PM IST

ವಡೋದರ(ಗುಜರಾತ್)​​: ಹೆಣ್ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದವರಲ್ಲಿ ಸಾಮಾಜಿಕ ಕಾರ್ಯಕರ್ತೆ ನಿಶಿತಾ ರಜಪೂತ್ ಕೂಡಾ ಒಬ್ಬರು. ಸುಮಾರು 10 ವರ್ಷಗಳ ಹಿಂದೆ 'ಬೇಟಿ ಬಚಾವೋ, ಬೇಟಿ ಪಡಾವೋ' ಘೋಷಣೆಯೊಂದಿಗೆ 151 ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸಿದ್ದ ನಿಶಿತಾ ರಜಪೂತ್ ಕಳೆದೊಂದು ದಶಕದಿಂದ ಸುಮಾರು 34,500 ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸಿದ್ದಾರೆ.

ನಿಶಿತಾ ರಜಪೂತ್ ಗುಜರಾತ್ ಕಾಂಗ್ರೆಸ್​ನ​ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಗುಲಾಬ್​ ಸಿನ್ಹ್​ ರಜಪೂತ್ ಅವರ ಪುತ್ರಿಯಾಗಿದ್ದಾರೆ. ನಿಶಿತಾ ಅವರ ಉದಾತ್ತ ಕಾರ್ಯಕ್ಕೆ ಪೋಷಕರೂ ಸಹಕಾರ ನೀಡಿದ್ದಾರೆ. ನಿಶಿತಾ ತುಂಬಾ ಸರಳವಾಗಿ ತನ್ನ ಬದುಕನ್ನು ನಡೆಸುತ್ತಿದ್ದು, ವಿವಾಹವಾದ ನಂತರವೂ ಕೂಡಾ ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿದ್ದಾರೆ.

The story of nishita rajput, who donated school fees of 34,500 girls in a decade
ಮಕ್ಕಳೊಂದಿಗೆ ನಿಶಿತಾ

ಅಂದಹಾಗೆ ಇವರ ವಿವಾಹವೂ ಕೂಡಾ ಅತ್ಯಂತ ಸರಳವಾಗಿ ನಡೆದಿತ್ತು. ಕೊರೊನಾ ಮಾರ್ಗಸೂಚಿ ಪಾಲನೆ ಕೇವಲ 100 ಮಂದಿಗೆ ಮದುವೆಗೆ ಆಹ್ವಾನ ನೀಡಲಾಗಿತ್ತು. ಸರಳ ವಿವಾಹದಿಂದ ಉಳಿದ ಹಣದಲ್ಲಿ 21 ವಿದ್ಯಾರ್ಥಿನಿಯರ ಉಳಿತಾಯ ಖಾತೆಗೆ ತಲಾ 5 ಸಾವಿರ ರೂಪಾಯಿಗಳನ್ನು ನಿಶ್ಚಿತ ಠೇವಣಿ (Fixed Deposit) ಮಾಡಿರುವುದು ಮಾತ್ರವಲ್ಲದೇ 251 ವಿದ್ಯಾರ್ಥಿನಿಯರ ಶಾಲಾ ಶುಲ್ಕವನ್ನು ಕಟ್ಟಿದ್ದಾರೆ.

ನಿಶಿತಾ ರಜಪೂತ್

ಕಳೆದ ವರ್ಷ ಹೆಣ್ಣುಮಕ್ಕಳಿಗೆ ಶಾಲಾ ಶುಲ್ಕ 55 ಲಕ್ಷ ರೂಪಾಯಿಯನ್ನು ನಿಶಿತಾ ರಜಪೂತ್ ಪಾವತಿಸಿದ್ದಾರೆ. ಕೊರೊನಾ ವೇಳೆ ಸಂಕಷ್ಟದಲ್ಲಿದ್ದ ಅನೇಕರಿಗೆ ಪಡಿತರ ಕಿಟ್‌ಗಳನ್ನೂ ಅವರು ನೀಡಿದ್ದಾರೆ. ಹೆಣ್ಮಕ್ಕಳಿಗೆ ಶಾಲಾ ಶುಲ್ಕದ ಜೊತೆಗೆ, ಶಾಲಾ ಬ್ಯಾಗ್, ವಾಟರ್ ಬ್ಯಾಗ್, ಪುಸ್ತಕ, ಬಟ್ಟೆ ಇತ್ಯಾದಿಗಳಿಗೂ ನಿಶಿತಾ ಅವರು ಸಹಾಯ ಮಾಡುತ್ತಿದ್ದಾರೆ.

ಪಾರದರ್ಶಕವಾಗಿದ್ದೇವೆ..

ಸಾಕಷ್ಟು ಮಂದಿ ನಿಶಿತಾ ಅವರನ್ನು ನಂಬಿ ಕೋಟ್ಯಂತರ ರೂಪಾಯಿಯನ್ನು ಅವರ ಕೈಗೆ ನೀಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯನ್ನು ನಿಶಿತಾ ಅವರು ಕಾಯ್ದುಕೊಂಡಿದ್ದಾರೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ನಿಶಿತಾ ರಜಪೂತ್ 'ನಾವು ಅತ್ಯಂತ ಪಾರದರ್ಶಕವಾಗಿದ್ದೇವೆ. ವಿದ್ಯಾರ್ಥಿಗಳ ಶಾಲಾ ಶುಲ್ಕಕ್ಕಾಗಿ ದಾನಿಗಳಿಂದ ಹಣವನ್ನು ಸ್ವೀಕರಿಸುತ್ತೇವೆ. ಶಾಲಾ ಶುಲ್ಕ ಪಾವತಿಸಿದ ನಂತರ ವಿದ್ಯಾರ್ಥಿಯ ಫೋಟೋ, ಮತ್ತು ವಿವರಗಳನ್ನು ದಾನಿಗಳಿಗೆ ನೀಡಲಾಗುತ್ತದೆ' ಎಂದಿದ್ದಾರೆ.

ನಿಶಿತಾ ರಜಪೂತ್ ಸಾಧನೆಗೆ ಮೆಚ್ಚುಗೆ

ನಾನು ನನ್ನ ತಂದೆಯಿಂದ ಸ್ಫೂರ್ತಿ ಪಡೆದಿದ್ದೇನೆ. ನನ್ನ ತಂದೆ ನನ್ನ ರೋಲ್ ಮಾಡೆಲ್. ನನ್ನ ಪೋಷಕರು ನಮ್ಮ ಮನೆಗೆ ರಜೆಯ ಸಮಯದಲ್ಲಿ ಅನಾಥಾಶ್ರಮಗಳಿಂದ ಮಕ್ಕಳನ್ನು ಕರೆತರುತ್ತಿದ್ದರು. ನಾವು ಅವರೊಂದಿಗೆ ನಮ್ಮ ಕೋಣೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಅವರನ್ನೂ ನಮ್ಮಂತೆಯೇ ನಡೆಸಿಕೊಳ್ಳಲಾಗುತ್ತಿತ್ತು. ಈ ಸಮಯದಿಂದಲೇ ಅಂದರೆ 11 ವರ್ಷಗಳ ಹಿಂದೆ ನನಗೆ ಹೆಣ್ಣುಮಕ್ಕಳಿಗೆ ಸಹಾಯ ಮಾಡಬೇಕೆಂದು ಅನ್ನಿಸಿತ್ತು ಎಂದು ನಿಶಿತಾ ರಜಪೂತ್ ಹೇಳಿದ್ದಾರೆ.

ನಿಶಿತಾ ರಜಪೂತ್ ಸಾಧನೆಗೆ ಗೌರವ

ಹೆಣ್ಣುಮಕ್ಕಳು ಓದಿದರೆ ಸ್ವಾವಲಂಬಿಗಳಾಗುತ್ತಾರೆ ಎಂದು ನಾನು ಭಾವಿಸಿದ್ದು, ಮೊದಲಿಗೆ 151 ವಿದ್ಯಾರ್ಥಿನಿಯರಿಗೆ ಶುಲ್ಕ ಪಾವತಿಸುವ ಮೂಲಕ ನನ್ನ ಕೆಲಸ ಆರಂಭಿಸಿದ್ದೆ. ನಾನೀಗ ಮಧ್ಯವರ್ತಿ ಮಾತ್ರ ಎಂದು ನಿಶಿತಾ ಹೇಳಿದ್ದಾರೆ. ನಮ್ಮಲ್ಲಿ ಸ್ವಯಂಸೇವಕರು ಇಲ್ಲ, ವಡೋದರಾದ ಅನೇಕ ಹಿರಿಯ ನಾಗರಿಕರು ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತಾರೆ. ಇದೇ ಉದ್ದೇಶದೊಂದಿಗೆ ಅನೇಕ ಸಣ್ಣ ಎನ್​ಜಿಓಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಆನ್​ಲೈನ್ ಶಿಕ್ಷಣಕ್ಕೆ ಮೊಬೈಲ್ ವಿತರಣೆ

ನಿಶಿತಾ ಅವರು ಕೊರೊನಾ ವೇಳೆ ಆನ್​​ಲೈನ್ ಶಿಕ್ಷಣಕ್ಕಾಗಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಮೊಬೈಲ್ ಫೋನ್​ಗಳನ್ನು ನೀಡಿದ್ದರು. ಅದಷ್ಟೇ ಅಲ್ಲದೇ ಕೋವಿಡ್ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳ ಹೆಸರಿನಲ್ಲಿ ಐದು ಸಾವಿರ ರೂಪಾಯಿ ಸ್ಥಿರ ಠೇವಣಿ ಇರಿಸಲಾಗಿತ್ತು. ಕೆಲವು ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರಿಗೆ ಉಚಿತ ಟಿಫಿನ್ ನೀಡುವ ಸೇವೆಯನ್ನು ಕೂಡಾ ನಿಶಿತಾ ಅವರು ನೀಡಿದ್ದಾರೆ.

ಮಕ್ಕಳಿಗೆ ಸಹಾಯ

ಇದನ್ನೂ ಓದಿ: ಕಾಕತಾಳೀಯವೋ, 'ಸತಿ'ಯ ಶಾಪವೋ: ಈ ಗ್ರಾಮದಲ್ಲಿ ದೀಪಾವಳಿಯೇ ಆಚರಿಸಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.