ಅಗರ್ತಲಾ(ತ್ರಿಪುರ): ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತ್ರಿಪುರಾದ ಮುಖ್ಯಮಂತ್ರಿಯಾಗಿ ಎರಡನೇ ಓಟಕ್ಕೆ ಸಜ್ಜಾಗಿದ್ದಾರೆ ಮಾಣಿಕ್ ಸಹಾ. ಹೌದು, ಬಿಜೆಪಿ ನಾಯಕ ಮಾಣಿಕ್ ಸಹಾ ಎರಡನೇ ಬಾರಿ ತ್ರಿಪುರಾದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಅಗರ್ತಲಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಣಿಕ್ ಸಹಾ ಅವರನ್ನು ತ್ರಿಪುರಾದ ಮುಂದಿನ ಸಿಎಂ ಎಂದು ನೇಮಿಸಲಾಗಿದೆ.
ಹಿಂದಿನ ಬಿಪ್ಲಬ್ ದೇಬ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮಾಣಿಕ್ ಸಹಾ ಬಿಜೆಪಿಯ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ನಾಯಕತ್ವವು ದೇಬ್ ಅವರ ಬದಲಿಯಾಗಿ ಸಹಾ ಅವರಿಗೆ ನೀಡಲಾಗಿದೆ. ಸಹಾ ಸೌಮ್ಯ ಸ್ವಭಾವದ ರಾಜಕಾರಣಿ, ವೃತ್ತಿಯಲ್ಲಿ ದಂತ ಶಸ್ತ್ರಚಿಕಿತ್ಸಕ ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು. ಅವರು 2016ರಲ್ಲಿ ಕೇಸರಿ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಾಯಿಸಿದರು. ಅಲ್ಲಿಂದ ಬಿಜೆಪಿಯಲ್ಲಿ 'ಮಿಸ್ಟರ್ ಕ್ಲೀನ್' ಎಂದು ಬಿಂಬಿಸಲಾದ ವ್ಯಕ್ತಿ 2020ರಲ್ಲಿ ರಾಜ್ಯ ಘಟಕದ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದರು. ಆ ಬಳಿಕ ಅವರನ್ನು ರಾಜ್ಯದ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಇದೀಗ ಅವರ ನೇತೃತ್ವದಲ್ಲೇ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಫಲವಾಗಿದೆ.
ಸಾರ್ವಜನಿಕ ಇಮೇಜ್ ಹೆಚ್ಚಿಸಿದ್ದ ಮಾಣಿಕ್ ಸಹಾ: ಕಳೆದ ವರ್ಷ ಏಪ್ರಿಲ್ 3ರಿಂದ ಜುಲೈ 4ರವರೆಗೆ ರಾಜ್ಯಸಭೆಯಲ್ಲಿ ಅಲ್ಪಾವಧಿಯ ಅವಧಿಯನ್ನು ಹೊಂದಿದ್ದ ಸಹಾ, 2022ರಲ್ಲಿ ಅಗರ್ತಲಾ ಬಳಿಯ ನಿರ್ಣಾಯಕ ಟೌನ್ ಬಾರ್ಡೋವಾಲಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಜಯಗಳಿಸುವ ಮೂಲಕ ತ್ರಿಪುರಾ ವಿಧಾನಸಭೆಯ ಸದಸ್ಯರಾದರು. ಹಪಾನಿಯಾದ ತ್ರಿಪುರಾ ಮೆಡಿಕಲ್ ಕಾಲೇಜ್ ಮಾಜಿ ಅಧ್ಯಾಪಕ ಸದಸ್ಯರಾಗಿರುವ ಸಹಾ ಅವರು ತ್ರಿಪುರಾದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಉತ್ತಮ ಆಡಳಿತಗಾರರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 10 ತಿಂಗಳೊಳಗೆ ಬಿಜೆಪಿ ಸರ್ಕಾರದ ಸಾರ್ವಜನಿಕ ಇಮೇಜ್ ಅನ್ನು ಹೆಚ್ಚಿಸಿದ್ದರು.
ಮಾಣಿಕ್ ಸಹಾ ವಿದ್ಯಾಭ್ಯಾಸವೇನು?: 1953ರಲ್ಲಿ ಜನಿಸಿದ ವೈದ್ಯ, ರಾಜಕಾರಣಿ ಆಗಿರುವ ಸಹಾ, 1970ರ ದಶಕದ ಆರಂಭದಲ್ಲಿ ತ್ರಿಪುರಾದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಕೊಂಡರು. ಡಾ.ಸಹಾ ತಮ್ಮ ಬಿಡಿಎಸ್ ಮತ್ತು ಎಂ.ಡಿ.ಎಸ್. ಬಿಹಾರದ ಪಾಟ್ನಾದ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಿಂದ "ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ" ಪದವಿ ಪಡೆದರು. ಅವರು ಸ್ವಪ್ನಾ ಸಹಾ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.
ಮಾರ್ಚ್ 8ಕ್ಕೆ ಸಹಾ ಪ್ರಮಾಣವಚನ ಸ್ವೀಕಾರ: ಸುದ್ದಿಗಾರರೊಂದಿಗೆ ಮಾತನಾಡಿದ ಸಹಾ ಅವರು, ಮಾರ್ಚ್ 8 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಸಮಾರಂಭ ನಡೆಯಲಿದೆ. ನಾಗಾಲ್ಯಾಂಡ್ ಮೇಘಾಲಯದಲ್ಲಿ ನಾಡಾ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳು ಮಾರ್ಚ್ 7 ರಂದು ನಡೆಯಲಿವೆ.
ಇದನ್ನೂ ಓದಿ: ಪದೇ ಪದೇ ದಾಳಿ ಮಾಡೋ ಬದಲು ನಮ್ಮ ಮನೆಯಲ್ಲೇ ಸಿಬಿಐ ಕಚೇರಿ ತೆರೆದರೆ ಉತ್ತಮ: ತೇಜಸ್ವಿ ಯಾದವ್