ETV Bharat / bharat

ಕಾಂಗ್ರೆಸ್​ ಯುವ ಪದಾಧಿಕಾರಿಗಳ ಸಭೆಯಲ್ಲಿ ಹಾಡು ಹಾಡಿದ ಸಂಸದೆ.. ಇವರಿಗೆ ವರ ಬೇಕಂತೆ..! - ಸಂಸದೆ ರಮ್ಯಾ ಹರಿದಾಸ ವಿವಾಹ

ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ರಮ್ಯಾ ಹರಿದಾಸ, "ನನ್ನ ಕ್ಷೇತ್ರವು ಒಂದು ಬದಿಗೆ ತಮಿಳುನಾಡಿನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ನಾನು ಎಲ್ಲೇ ಹೋದರೂ ಹಿಂದಿ ಮಾತನಾಡುವುದಿಲ್ಲ. ನಾನು ತಮಿಳು ಭಾಷೆಯಲ್ಲಿ ಮಾತ್ರ ಮಾತನಾಡುವೆ." ಎಂದರು.

ಕಾಂಗ್ರೆಸ್​ ಯುವ ಪದಾಧಿಕಾರಿಗಳ ಸಭೆಯಲ್ಲಿ ಹಾಡು ಹಾಡಿದ ಸಂಸದೆ.. ಈಕೆಗೆ ವರ ಬೇಕಂತೆ..!
The MP who sang a song in the meeting of Congress workers.. She wants a groom..!
author img

By

Published : Aug 1, 2022, 10:43 AM IST

Updated : Aug 1, 2022, 1:35 PM IST

ಈರೋಡ್: ಹೊಸದಾಗಿ ಆಯ್ಕೆಯಾದ ತಮಿಳುನಾಡು ಯುವ ಕಾಂಗ್ರೆಸ್ ವಾರ್ಡ್​ ಸದಸ್ಯರ ತರಬೇತಿ ಸಮಾವೇಶವು ನಿನ್ನೆ (ಜು.31) ಈರೋಡ್​ನಲ್ಲಿ ನಡೆಯಿತು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಲೆನಿನ್ ಪ್ರಸಾದ್ ಸಮಾವೇಶದ ನೇತೃತ್ವ ವಹಿಸಿದ್ದರು. ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಂಗಬಾಲು, ಕರೂರು ಎಂಪಿ ಜ್ಯೋತಿಮಣಿ, ಕೇರಳ ಸಂಸದೆ ರಮ್ಯಾ ಹರಿದಾಸ ಮತ್ತು ಹಲವಾರು ಗಣ್ಯಮಾನ್ಯರು ದೀಪ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ರಮ್ಯಾ ಹರಿದಾಸ, "ನನ್ನ ಕ್ಷೇತ್ರವು ಒಂದು ಬದಿಗೆ ತಮಿಳುನಾಡಿನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ನಾನು ಎಲ್ಲೇ ಹೋದರೂ ಹಿಂದಿ ಮಾತನಾಡುವುದಿಲ್ಲ. ನಾನು ತಮಿಳು ಭಾಷೆಯಲ್ಲಿ ಮಾತ್ರ ಮಾತನಾಡುವೆ" ಎಂದರು.

ಕಾಂಗ್ರೆಸ್​ ಯುವ ಪದಾಧಿಕಾರಿಗಳ ಸಭೆಯಲ್ಲಿ ಹಾಡು ಹಾಡಿದ ಸಂಸದೆ

ಅಲ್ಲದೇ, ಸಭೆಯಲ್ಲಿ ಹಾಡು ಹಾಡಲು ಆರಂಭಿಸಿದ ಅವರು, ಕಮಲ್ ಹಾಸನ್ ಅವರ ಮೂನ್ರಮ್ ಪಿರೈ ಚಿತ್ರದ ಕಣ್ಣೆ ಕಲೈಮಣೆ ಹಾಡಿದರು. ನಂತರ ವಿಜಯಕಾಂತ್ ನಟನೆಯ ಆಸೈ ಮಾಚನ್ ಚಿತ್ರದ ಆಡಿಯಿಲಾ ಸೀದಿ ಸೊಲ್ಲಿ ಹಾಡು ಹಾಡಿದರು. ಸಂಸದೆಯ ಈ ಹಾಡುಗಳನ್ನು ಕೇಳಿ ಯುವ ಪದಾಧಿಕಾರಿಗಳು ರೋಮಾಂಚಿತರಾದರು.

"ನನಗಿನ್ನೂ ಮದುವೆಯಾಗಿಲ್ಲ, ತಮಿಳುನಾಡಿನಿಂದ ವರ ಹುಡುಕುತ್ತಿದ್ದೇನೆ" ಎಂದು ರಮ್ಯಾ ತಮ್ಮ ಮನದಾಸೆ ಬಿಚ್ಚಿಟ್ಟರು.

Last Updated : Aug 1, 2022, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.