ETV Bharat / bharat

ಪತ್ನಿ ಕೆಂಪು ಮಗಳು ಕಪ್ಪು.. ಶಂಕಿಸಿ ಹೆಂಡ್ತಿ ಕೊಂದ ಪತಿ.. ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು! - ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು

ತಮ್ಮ ಮಗಳು ಸಹಜವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ ಪೋಷಕರಿಗೆ ಮೊಮ್ಮಗಳು ಕೊಟ್ಟು ಸುಳಿವಿನಿಂದ ನಿಜವಾದ ಸತ್ಯ ಗೊತ್ತಾಗಿದೆ.

ಪತ್ನಿ ಕೊಂದ ಪತಿ  wife killed
ಪತ್ನಿ ಕೊಂದ ಪತಿ
author img

By

Published : Sep 25, 2022, 6:49 PM IST

Updated : Sep 26, 2022, 5:01 PM IST

ಕಾಕಿನಾಡ (ಆಂಧ್ರಪ್ರದೇಶ): ತಮ್ಮ ಮಗಳು ಕಪ್ಪಾಗಿ ಹುಟ್ಟಿರುವ ಕುರಿತ ಶಂಕೆ ಮೇರೆಗೆ ಪತಿಯೋರ್ವ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದು ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೊದಲಿಗೆ ಈ ಮಹಿಳೆಯದ್ದು ಸಹಜ ಸಾವು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಎರಡೂವರೆ ವರ್ಷದ ಮಗುವಿನ ಮಾತುಗಳಿಂದಲೇ ಈ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಒಡಿಶಾದ ಉಮ್ಮರ್‌ಕೋಟ್​ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಎಂಬಾತ ಏಳು ವರ್ಷಗಳ ಹಿಂದೆ ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್ (22) ಎಂಬುವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಮಾಹಿ ಎಂಬ ಹೆಣ್ಣು ಮಗು ಹುಟ್ಟಿತ್ತು.

ಆದರೆ, ತಮ್ಮ ಮಗಳು ಕಪ್ಪಾಗಿದ್ದಾಳೆ ಎಂದು ಪತ್ನಿ ಲಿಪಿಕಾ ಮೇಲೆ ಆರಂಭದಿಂದಲೂ ಮಾಣಿಕ್‌ ಅನುಮಾನ ಪಡುತ್ತಿದ್ದನಂತೆ. ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಈ ವರ್ಷದ ಆರಂಭದಲ್ಲಿ ಮತ್ತೆ ಜಗಳವಾಗಿದ್ದರಿಂದ ಲಿಪಿಕಾ ತನ್ನ ತವರು ಮನೆಗೆ ಬಂದಿದ್ದರು. ಇದಾದ ನಂತರ ಜೂನ್‌ನಲ್ಲಿ ರಾಜಿ ಮಾಡಿ ಲಿಪಿಕಾ ಅವರನ್ನು ಪತಿಯೊಂದಿಗೆ ಕಾಕಿನಾಡಕ್ಕೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.

ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು
ತಾಯಿ ಕೊಲೆಯ ರಹಸ್ಯ ವಿವರಿಸಿದ ಮಗು

ಏಕಾಏಕಿ ಲಿಪಿಕಾ ಸಾವು: ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಬಂದಿದ್ದಾರೆ ಎಂದು ಮಾಣಿಕ್ ಸ್ನೇಹಿತರ ಸಹಾಯದಿಂದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇಷ್ಟರಲ್ಲೇ ಲಿಪಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆದರೆ, ಲಿಪಿಕಾ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಪತ್ತೆಯಾಗಿವೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕಾಕಿನಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಬಳಿಕ ಲಿಪಿಕಾರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ನಂತರ ಲಿಪಿಕಾ ಪೋಷಕರು ಮಂಗಳವಾರ ಕಾಕಿನಾಡಕ್ಕೆ ಬಂದು ಮಗು ಮಾಹಿಯನ್ನು ತಮ್ಮೂರಿಗೆ ಕರೆದುಕೊಂಡು ಹೋಗಿದ್ದಾರೆ. ಆಗಲೇ ಲಿಪಿಕಾ ಸಾವಿನ ಸತ್ಯ ಬಹಿರಂಗವಾಗಿದೆ.

ತಾಯಿಯ ಸಾವಿನ ಕ್ಷಣ ವಿವರಿಸಿದ ಮಗಳು: ಲಿಪಿಕಾ ಪೋಷಕರೊಂದಿಗೆ ಬಂದ ಆ ಮಗು ತನ್ನ ತಾಯಿಯ ಸಾವಿನ ಕ್ಷಣವನ್ನು ಅಜ್ಜನಿಗೆ ವಿವರಿಸಿದೆ. 'ಅಜ್ಜ.. ನನ್ನ ತಂದೆ ಅಮ್ಮನ ಗಂಟಲನ್ನು ಎರಡೂ ಕೈಗಳಿಂದ ಹೀಗೆ ಹಿಡಿದು.. ಗಟ್ಟಿಯಾಗಿ ಒತ್ತಿ. ಅಮ್ಮನ ಕೈ ಕಾಲುಗಳು ಬಹಳ ಹೊತ್ತು ನಡುಗುತ್ತಿದ್ದವು. ಸ್ವಲ್ಪ ಹೊತ್ತಿನ ನಂತರ ಕದಲದೆ ಮಲಗಿದಳು ಎಂದು ಪುಟ್ಟ ಮಗು ತನ್ನದೇ ಆದ ಮಾತುಗಳಲ್ಲಿ ಹೇಳಿದೆ.

ಮೊಮ್ಮಗಳು ತನ್ನ ಗಂಟಲಿನ ಮೇಲೆ ಕೈಗಳನ್ನು ಇಟ್ಟು ಹಾಗೂ ಇತರ ಸನ್ನೆಗಳೊಂದಿಗೆ ತೋರಿಸಿದಾಗ ಅಜ್ಜನಿಗೆ ಅನುಮಾನ ಬಂದಿದೆ. ಅಲ್ಲಿಯವರೆಗೂ ಮಗಳು ಪ್ರಜ್ಞೆ ತಪ್ಪಿ ಸತ್ತಿದ್ದಾಳೆ ಎಂದುಕೊಂಡಿದ್ದ ಅವರಿಗೆ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂಬುದು ಮೊಮ್ಮಗಳ ಮಾತಿನ ಮೂಲಕ ಅರ್ಥವಾಗಿದೆ. ಅಂತೆಯೇ, ಶನಿವಾರ ಮಗುವನ್ನು ಕರೆದುಕೊಂಡು ಉಮ್ಮರ್‌ಕೋಟ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಆಗ ಉಮ್ಮರ್‌ಕೋಟ್ ಠಾಣೆ ಪೊಲೀಸರು ಕಾಕಿನಾಡ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಮಾಣಿಕ್ ಘೋಷ್​ನನ್ನು ಬಂಧಿಸಿದ್ದಾರೆ. ಅಲ್ಲದೇ, ಮಗು ಕಪ್ಪಾಗಿ ಹುಟ್ಟಿದೆ ಎಂದು ಕಾರಣಕ್ಕೆ ಪತ್ನಿಯನ್ನು ಕೊಂದಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ: ಅಂಕಿತಾ ಭಂಡಾರಿ ನೀರಿನಲ್ಲಿ ಮುಳುಗಿ ಸಾವು.. ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿಗೆ ಪೋಷಕರ ಆಕ್ಷೇಪ

Last Updated : Sep 26, 2022, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.