ETV Bharat / bharat

ಯುವತಿಯೊಂದಿಗೆ ಇರುವಾಗ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ! ವಿಡಿಯೋ ವೈರಲ್ - ಕಾಂಗ್ರೆಸ್ ಮುಖಂಡ ಭರತ್ ಸಿಂಗ್ ಸೋಲಂಕಿ ಸುದ್ದಿ

ಗುಜರಾತ್​ನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲ ಪಕ್ಷಗಳು ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿವೆ. ಆದ್ರೆ, ಗುಜರಾತ್ ಕಾಂಗ್ರೆಸ್ ರಾಜಕಾರಣಿವೊಬ್ಬರು ವಿವಾದವೊಂದಕ್ಕೆ ಸಿಲುಕಿದ್ದಾರೆ..

congress leader was caught red handed by his wife  Congress leader Bharatsinh Solanki news  Bharatsinh Solanki video viral  ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ  ಕಾಂಗ್ರೆಸ್ ಮುಖಂಡ ಭರತ್ ಸಿಂಗ್ ಸೋಲಂಕಿ ಸುದ್ದಿ  ಭರತ್ ಸಿಂಗ್ ಸೋಲಂಕಿ ವಿಡಿಯೋ ವೈರಲ್
ವಿಡಿಯೋ ವೈರಲ್
author img

By

Published : Jun 3, 2022, 8:05 AM IST

Updated : Jun 3, 2022, 9:26 AM IST

ಅಹಮದಾಬಾದ್ : ಗುಜರಾತ್ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಇನ್ನೊಬ್ಬ ಯುವತಿ ಜೊತೆ ಇರುವಾಗ ತಮ್ಮ ಪತ್ನಿ ರೇಷ್ಮಾ ಸೋಲಂಕಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಭರತ್‌ ಸಿಂಗ್​ ಮತ್ತು ಅವರ ಪತ್ನಿ ನಡುವಿನ ಕಿತ್ತಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಕಾಂಗ್ರೆಸ್​ ನಾಯಕನ ವಿಡಿಯೋ ವೈರಲ್

ಸೋಲಂಕಿ ಗುಜರಾತ್​ನಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದಾರೆ. ಭರತ್ ಸಿಂಗ್ ಸೋಲಂಕಿ ಹಲವು ರಾಜ್ಯಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದು, ಗುಜರಾತ್​ನ ಮಾಜಿ ಸಿಎಂ ಮಾಧವ್ ಸಿಂಗ್ ಸೋಲಂಕಿಯ ಪುತ್ರ ಆಗಿದ್ದಾರೆ. ಆದ್ರೆ, ಸೋಲಂಕಿ ವಿಡಿಯೋ ಕಾಂಗ್ರೆಸ್​ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸೋಲಂಕಿ ಯುವತಿಯೊಬ್ಬಳ ಜೊತೆ ಇದ್ದಾಗ ರೆಡ್​ ಹ್ಯಾಂಡ್ ಆಗಿ ತಮ್ಮ ಪತ್ನಿ ರೇಷ್ಮಾ ಕೈಗೆ ಸಿಕ್ಕಿಬಿದ್ದಿದ್ದಾರೆ. ಸೋಲಂಕಿ ಮತ್ತು ಯುವತಿ ವಾಸಿಸುತ್ತಿದ್ದ ಬಂಗಲೆಗೆ ಪತ್ನಿ ರೇಷ್ಮಾ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಯುವತಿಯನ್ನು ಕಂಡು ರೇಷ್ಮಾ ರೇಗಾಡಿದ್ದಾರೆ. ಸೋಲಂಕಿ ಸಹ ತಮ್ಮ ಪತ್ನಿ ವಿರುದ್ಧ ಎಗರಾಡಿ ಹಲ್ಲೆ ಮಾಡಿದ್ದಾರೆ. ಈ ಸನ್ನಿವೇಶವೆಲ್ಲವೂ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಓದಿ: ತಮ್ಮ ರಾಸಲೀಲೆ ನೋಡಿದನೆಂದು ರಾಡ್​​​ನಿಂದ ಹಲ್ಲೆ: ಇಬ್ಬರ ಬಂಧನ

ರೇಷ್ಮಾ ತನ್ನ ಪತಿಗೆ ‘ಮುಂದೊಂದು ದಿನ ನನ್ನಂತಹ ಪರಿಸ್ಥಿತಿಗೆ ನೀವು ಬರುತ್ತೀರಿ’ ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ರೇಷ್ಮಾ ಸೋಲಂಕಿ, ಭರತ್ ಸಿಂಗ್ ಅವರ ದುರ್ನಡತೆಯ ಬಗ್ಗೆ ಹಲವಾರು ಬಾರಿ ಕಾಂಗ್ರೆಸ್‌ನ ಉನ್ನತ ನಾಯಕರಿಗೆ ದೂರುಗಳನ್ನು ನೀಡಿದ್ದಾರಂತೆ. ಆದ್ರೂ ಸಹ ಯಾವುದೇ ಪ್ರಯೋಜನೆವಾಗಿಲ್ಲ ಎಂದು ತಿಳಿದು ಬಂದಿದೆ.

ವಿಡಿಯೋದಲ್ಲಿ ಯುವತಿ ತನ್ನ ಮುಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ. ಬಳಿಕ ರೇಷ್ಮಾ ಯುವತಿಯ ಹತ್ತಿರ ಹೋಗಿ ಕಪಾಳಮೋಕ್ಷ ಮಾಡಿದ್ದಾರೆ. ಇದೇನು ಹೊಸ ಪ್ರಕರಣವಲ್ಲ. ರೇಷ್ಮಾ ಮತ್ತು ಭರತ್ ಸಿಂಗ್ ಅವರ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಒಬ್ಬರಿಗೊಬ್ಬರು ನೋಟಿಸ್ ಕಳುಹಿಸಿದ್ದಾರೆ.

ಇದಕ್ಕೂ ಮುನ್ನ ಪತಿ-ಪತ್ನಿ ಪರಸ್ಪರ ಹಲ್ಲೆ ಆರೋಪ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ಭರತ್ ಸಿಂಗ್ ಸೋಲಂಕಿ ಮೇಲೆ ಪತ್ನಿ ರೇಷ್ಮಾ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಭರತ್ ಸಿಂಗ್ ಸೋಲಂಕಿ ಅವರ ವೈರಲ್ ವಿಡಿಯೋದಿಂದ ರಾಜ್ಯದ ರಾಜಕೀಯ ಬಿಸಿಯಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿವೆ. ಸ್ಥಳೀಯ ಮಟ್ಟದಲ್ಲಿ ಇಂತಹ ವಿಚಾರಗಳು ಜನರಲ್ಲಿ ಕುತೂಹಲ ಕೆರಳಿಸುತ್ತವೆ.

Last Updated : Jun 3, 2022, 9:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.