ETV Bharat / bharat

ದಶಕದ ಬಳಿಕ ದ್ರಾವಿಡ ನೆಲದಲ್ಲಿ ಸೂರ್ಯೋದಯ: ಸ್ಟಾಲಿನ್‌ ಮುಂದಿರುವ ಗ್ರಹಣದಂಥ ಸವಾಲುಗಳಿವು! - ತಮಿಳುನಾಡಲ್ಲಿ ಶೈಕ್ಷಣಿಕ ಸಮಸ್ಯೆಗಳು

ಸ್ಟಾಲಿನ್​ಗೆ ಸ್ಪಷ್ಟವಾದ ಜನಾದೇಶ ನೀಡಿರುವ ಮತದಾರರು ಶಿಕ್ಷಣ, ಔಷಧ, ಸಾರ್ವಜನಿಕ ಆರೋಗ್ಯ, ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ಹವಾಮಾನ ಸವಾಲುಗಳು ಎದುರಾಗಲಿವೆ. ಜನರ ನಿರೀಕ್ಷೆ ಮುಟ್ಟಲು ಸ್ಟಾಲಿನ್​ ಯಾವರೀತಿ ಸಜ್ಜಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Stalin
Stalin
author img

By

Published : May 4, 2021, 6:09 PM IST

Updated : May 4, 2021, 7:36 PM IST

ಚೆನ್ನೈ: ಏಪ್ರಿಲ್ 6ರಂದು ನಡೆದ 16ನೇ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಒಂದು ದಶಕದ ನಂತರ ಅಧಿಕಾರದ ಗದ್ದುಗೆಯತ್ತ ಬಂದು ನಿಂತಿದೆ. ಗೆಲುವಿನ ನೊಗಹೊತ್ತ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸಲು ಸಜ್ಜಾಗಿದ್ದಾರೆ. ತಮಿಳುನಾಡಿನ ವ್ಯವಹಾರಗಳ ಚುಕ್ಕಾಣಿಯಲ್ಲಿ ಹೊಸದಾಗಿ ಸಿಎಂ ಪೀಠದ ಮೇಲೆ ಬಂದು ಕೂರುವವರಿಗೆ ಎದುರಾಗುವ ಸವಾಲುಗಳ ಅಧ್ಯಯನ ಮಾಡುವ ಸಮಯವಿದು.

ಸ್ಟಾಲಿನ್​ಗೆ ಸ್ಪಷ್ಟವಾದ ಜನಾದೇಶ ನೀಡಿರುವ ಮತದಾರರು ಶಿಕ್ಷಣ, ಔಷಧ, ಸಾರ್ವಜನಿಕ ಆರೋಗ್ಯ, ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ಹವಾಮಾನ ಸವಾಲುಗಳು ಎದುರಾಗಲಿವೆ. ಜನರ ನಿರೀಕ್ಷೆ ಮುಟ್ಟಲು ಸ್ಟಾಲಿನ್​ ಯಾವ ರೀತಿ ಸಜ್ಜಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ಆರೋಗ್ಯ ಕ್ಷೇತ್ರದಲ್ಲಿನ ಸವಾಲುಗಳು

ಮೊದಲ ಅಲೆಯ ಪ್ರಕರಣಗಳು ಕ್ಷೀಣಿಸಿ ದಿನಗಳು ಉರುಳುವ ಮೊದಲೇ ಇಡೀ ರಾಷ್ಟ್ರಕ್ಕೆ ಎರಡನೇ ಅಲೆ ಭೀಕರವಾಗಿದೆ ಅಪ್ಪಳಿಸಿತು. ನಿತ್ಯ ಸುಮಾರು 20,000 ಜನರನ್ನು ಸೋಂಕಿಗೆ ತುತ್ತಾಗುತ್ತಿದ್ದಾರೆ. ನೂರಾರು ಸೋಂಕಿತರ ಸಾವನ್ನಪ್ಪುತ್ತಿದ್ದಾರೆ.

ಕೋವಿಡ್ -19 ನಿಯಂತ್ರಣ ಸಾಧಿಸಲು ಈ ಹಂತದಲ್ಲಿ ಹೆಚ್ಚಿನ ಮಾನವಶಕ್ತಿ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ವೈದ್ಯರು, ದಾದಿಯರು ಮತ್ತು ಲ್ಯಾಬ್ ತಂತ್ರಜ್ಞರ ಸಂಖ್ಯೆ ಹೆಚ್ಚಿಸಬೇಕಾಗಿದೆ. ಆರೋಗ್ಯ ಕ್ಷೇತ್ರದ ಮುಂಚೂಣಿ ಯೋಧರಿಗೆ ಪಾವತಿಸುವ ಸೋಲಾಟಿಯಂ ಮೊತ್ತವು ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇರುವ ದೊಡ್ಡ ಇನ್​ಸ್ಟಿಟ್ಯೂಟ್​ ಮತ್ತು ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ಎಲ್ಲ ಜನರಿಗೆ ಲಸಿಕೆ ನೀಡಲು ಸಮರೋಪಾದಿಯಲ್ಲಿ ಕೆಲಸ

ಹೆಚ್ಚುತ್ತಿರುವ ಪ್ರಕರಣಗಳನ್ನು ನಿಗ್ರಹಿಸಲು ಕನಿಷ್ಠ 14 ದಿನಗಳ ಲಾಕ್‌ಡೌನ್ ಜಾರಿ ಮಾಡಬೇಕು ಎಂಬುದು ವೈದ್ಯರ ಸಲಹೆ. ಅವರೊಂದಿಗೆ ಸಮಾಲೋಚಿಸಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ನೀಟ್ ರದ್ದುಗೊಳಿಸುವ ಚುನಾವಣಾ ಭರವಸೆ ಗೌರವಿಸಿ ಆಡಳಿತ ಪಕ್ಷದ ಟ್ಯಾಗ್ ಧರಿಸಲು ಸಿದ್ಧವಾಗಿರುವ ಡಿಎಂಕೆಗೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎಂಬುದನ್ನು ತಜ್ಞರು ಆಶ್ಚರ್ಯದಿಂದ ಎದುರು ನೋಡುತ್ತಿದ್ದಾರೆ. ಈ ಹಾದಿಯಲ್ಲಿ ಹೊಸ ಡಿಎಂಕೆ ಸರ್ಕಾರಕ್ಕೆ ಕಠಿಣ ಸವಾಲುಗಳಿವೆ.

ಶಿಕ್ಷಣ ಕ್ಷೇತ್ರ

ಕೊರೊನಾ ಸೋಂಕಿನಿಂದಾಗಿ ಶಿಕ್ಷಣ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಶಾಲೆಯ ದಾಖಲಾತಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆನ್‌ಲೈನ್ ಶಿಕ್ಷಣವು ವಿವಿಧ ವರ್ಗದ ವಿದ್ಯಾರ್ಥಿಗಳಲ್ಲಿ ಅಸಮಾನತೆಯ ಪರಿಸ್ಥಿತಿ ಸೃಷ್ಟಿಸಿದೆ. ಗಣ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಸುಲಭ ಪ್ರವೇಶವಿದ್ದರೂ ಕಡಿಮೆ ಸವಲತ್ತು ಮತ್ತು ಕನಿಷ್ಠ ಸೌಲಭ್ಯದ ಮೇಲಿನ ಹಿಡಿತ ಬಿಗಿಗೊಳಿಸಲು ಹೆಣಗಾಡುತ್ತಿದ್ದಾರೆ.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹೆಣಗಾಡುತ್ತಿರುವ ಈಗಿನ ಪರಿಸ್ಥಿತಿಯ ಬೇಡಿಕೆಗಳನ್ನು ಪೂರೈಸಲು ಪಠ್ಯಕ್ರಮವನ್ನು ತಕ್ಕಂತೆ ನಿರ್ಮಿಸುವ ಅವಶ್ಯಕತೆಯಿದೆ. ಪ್ರಸ್ತುತ ಆನ್‌ಲೈನ್ ಕಲಿಕೆಯ ವ್ಯವಸ್ಥೆಯಲ್ಲಿ ಹಲವು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಕೇವಲ 30 ಪ್ರತಿಶತದಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ.

ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಪುನಃ ಪರಿಚಯಿಸಬೇಕು. ಇದಲ್ಲದೇ, ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕ್ರಮಗಳ ಸಮಯದ ಅವಶ್ಯಕತೆಯಾಗಿದೆ.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ಆಡಳಿತ ಸುಧಾರಣೆ

ತಮಿಳುನಾಡು ಸರ್ಕಾರವು ನಾಲ್ಕು ಲಕ್ಷ ಕೋಟಿಗಿಂತ ಹೆಚ್ಚಿನ ಸಾಲದ ಹೊಣೆಗಾರಿಕೆ ಹೊತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 3 ರೂ. ಮತ್ತು 2 ರೂ. ತಗ್ಗಿಸುವ ಆಶ್ವಾಸನೆ ನೀಡಿದೆ. ಇದರ ಸ್ಥಾನದಲ್ಲಿ ಬದಲಿ ಸಂಪನ್ಮೂಲಗಳನ್ನು ಹೆಚ್ಚಿಸುವ ಕಾರ್ಯವನ್ನು ಎದುರಿಸಬೇಕಾಗುತ್ತದೆ.

ಜಿಎಸ್​ಟಿ ಜಾರಿಯ ಆದಾಯ ಕೊರತೆಯಲ್ಲಿ ರಾಜ್ಯವು ತನ್ನ ಪಾಲು ಪಡೆಯಲು ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಗಳು ಸಂಪೂರ್ಣವಾಗಿ ನಡೆಯದ ಕಾರಣ, ಸ್ಥಳೀಯ ಆಡಳಿತ ನಿಧಿ ಪಡೆಯುವಲ್ಲಿ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಬೇಕು. ಇದಲ್ಲದೇ, ಸರಾಸರಿ ವೈಯಕ್ತಿಕ ಆದಾಯ ಹೆಚ್ಚಿಸಲು ಮತ್ತು ಖನಿಜಗಳಿಗಾಗಿ ವಿಶೇಷ ವಿಭಾಗ ರಚಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಎಂಕೆ  ಸ್ಟಾಲಿನ್‌
ಎಂಕೆ ಸ್ಟಾಲಿನ್‌

ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಮನೆ ತಯಾರಕರಿಗೆ ತಿಂಗಳಿಗೆ 1,000 ರೂ. ನೀಡಲು ಡಿಎಂಕೆ ಸರ್ಕಾರ ಘನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರ್ಥಿಕ ಸ್ಥಿತಿಯು ಕೊರೊನಾ ಆಘಾತದಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

  • ಸ್ವ-ಸಹಾಯ ಗುಂಪುಗಳ ಮೂಲಕ ಸ್ವ- ಉದ್ಯೋಗಾವಕಾಶಗಳ ಸೃಷ್ಟಿಸಿ
  • ಯುವಕರಿಗೆ ಹೊಸ ಉದ್ಯೋಗಗಳು ಸೃಜನ
  • ಖಾಸಗಿ ವಲಯದಲ್ಲಿ ಸ್ಥಳೀಯ ತಮಿಳರಿಗೆ ಶೇ 75ರಷ್ಟು ಉದ್ಯೋಗ ಮೀಸಲಾತಿ ನಿರ್ಧಾರ
  • ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ವ್ಯವಸ್ಥೆ
  • ಹವಾಮಾನ ಸಮಸ್ಯೆಗಳಿಗೆ ಮಾರ್ಗೋಪಾಯ
    ಎಂಕೆ  ಸ್ಟಾಲಿನ್‌
    ಎಂಕೆ ಸ್ಟಾಲಿನ್‌

ದೀರ್ಘಕಾಲದ ಬಾಕಿ ಇರುವ ಕೂಮ್ ಪುನಃ ಸ್ಥಾಪನೆ ಯೋಜನೆ ಮತ್ತೆ ಕೈಗೆತ್ತಿಕೊಳ್ಳಬೇಕು. ದೀರ್ಘಕಾಲದವರೆಗೆ ಅಪೂರ್ಣವಾಗಿ ಉಳಿದಿರುವ ಸೇತುವೆ ಮತ್ತು ಫ್ಲೈಓವರ್‌ಗಳನ್ನು ಪೂರ್ಣಗೊಳಿಸಬೇಕು. ರಸ್ತೆ ಅಪಘಾತಗಳು ಹೆಚ್ಚಳ ತಗ್ಗಿಸುವಿಕೆ. ವನ್ಯಜೀವಿ ಮತ್ತು ಮಾನವನ ನಡುವಿನ ಘರ್ಷಣೆಗಳಿಗೆ ಅಂತ್ಯವಾಡಲು ತಜ್ಞರ ನೆರವಿನಿಂದ ವಿಶೇಷ ಇಲಾಖೆ ಸ್ಥಾಪಿಸಬೇಕು. ತಮಿಳುನಾಡಿನ ಪರಿಸರ ವ್ಯವಸ್ಥೆ ಹದಗೆಡುತ್ತಿರುವ ಕಾರಣ, ಹೊಸ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ತರವಾದ ಕಾರ್ಯ ಕೈಗೊಳ್ಳಬೇಕಿದೆ.

Last Updated : May 4, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.