ETV Bharat / bharat

ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ತೀವ್ರ ಕಳಪೆ - ರಾಜಧಾನಿಯ ಅತ್ಯಂತ ಕಲುಷಿತ ಸ್ಥಳ

ಆನಂದ್ ವಿಹಾರ್ ಮತ್ತು ಜಹಾಂಗೀರ್‌ಪುರಿ ರಾಜಧಾನಿಯ ಅತ್ಯಂತ ಕಲುಷಿತ ಸ್ಥಳಗಳಾಗಿದ್ದು, ಇಲ್ಲಿ AQI 460 ಆಗಿದೆ. ತೀವ್ರ ಕಳಪೆ AQI ದಾಖಲಾಗಿರುವ ಪ್ರದೇಶಗಳೆಂದರೆ ಅಲಿಪುರ್ (439), ಅಶೋಕ್ ವಿಹಾರ್ (444), ಬವಾನಾ (456), ಬುರಾರಿ (443), ಮಥುರಾ ರಸ್ತೆ (412), DTU (436), ದ್ವಾರಕಾ (408), ITO (435), ಮುಂಡ್ಕಾ (438), ನರೇಲಾ (447), ನೆಹರು ನಗರ (433), ಪತ್ಪರ್ಗಂಜ್ (441), ರೋಹಿಣಿ (453), ಸೋನಿಯಾ ವಿಹಾರ್ (444), ವಿವೇಕ್ ವಿಹಾರ್ (444) ಮತ್ತು ವಜೀರ್ಪುರ್ (444).

ತೀವ್ರ ಕಳಪೆ ಮಟ್ಟದಲ್ಲಿ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ
Delhis air quality in severe zone
author img

By

Published : Nov 3, 2022, 5:54 PM IST

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳ ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟ ಗುರುವಾರವೂ ತೀವ್ರ ಕಳಪೆ ಮಟ್ಟದಲ್ಲಿ ಮುಂದುವರೆದಿದೆ. ಬಲವಾದ ಗಾಳಿ ಬೀಸುವ ಸಂಭವದ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚಕರು ಬುಧವಾರ ಊಹಿಸಿದ್ದರು.

ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (AQI) ಗುರುವಾರ ಬೆಳಗ್ಗೆ 9 ಗಂಟೆ 10 ನಿಮಿಷಕ್ಕೆ 426 ರಷ್ಟಿತ್ತು. 400 ಕ್ಕಿಂತ ಹೆಚ್ಚಿನ AQI ಅನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರಬಹುದು ಮತ್ತು ಈಗಾಗಲೇ ಕಾಯಿಲೆಗಳಿರುವವರ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಆನಂದ್ ವಿಹಾರ್ ಮತ್ತು ಜಹಾಂಗೀರ್‌ಪುರಿ ರಾಜಧಾನಿಯ ಅತ್ಯಂತ ಕಲುಷಿತ ಸ್ಥಳಗಳಾಗಿದ್ದು, ಇಲ್ಲಿ AQI 460 ಆಗಿದೆ. ತೀವ್ರ ಕಳಪೆ AQI ದಾಖಲಾಗಿರುವ ಪ್ರದೇಶಗಳೆಂದರೆ ಅಲಿಪುರ್ (439), ಅಶೋಕ್ ವಿಹಾರ್ (444), ಬವಾನಾ (456), ಬುರಾರಿ (443), ಮಥುರಾ ರಸ್ತೆ (412), DTU (436), ದ್ವಾರಕಾ (408), ITO (435), ಮುಂಡ್ಕಾ (438), ನರೇಲಾ (447), ನೆಹರು ನಗರ (433), ಪತ್ಪರ್ಗಂಜ್ (441), ರೋಹಿಣಿ (453), ಸೋನಿಯಾ ವಿಹಾರ್ (444), ವಿವೇಕ್ ವಿಹಾರ್ (444) ಮತ್ತು ವಜೀರ್ಪುರ್ (444).

ಘಾಜಿಯಾಬಾದ್ (391), ನೋಯ್ಡಾ (388), ಗ್ರೇಟರ್ ನೋಯ್ಡಾ (390), ಗುರುಗ್ರಾಮ್ (391) ಮತ್ತು ಫರಿದಾಬಾದ್ (347) ನಲ್ಲಿ ಎಕ್ಯೂಐ 'ಅತ್ಯಂತ ಕಳಪೆ' ವಿಭಾಗದಲ್ಲಿದೆ ಎಂದು CPCB ಡೇಟಾ ಹೇಳಿದೆ.

ಶೂನ್ಯ ಮತ್ತು 50 ರ ನಡುವಿನ AQI ಅನ್ನು ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ ಮತ್ತು 401 ಮತ್ತು 500 ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಅತ್ಯಂತ ಕಳಪೆ ದೆಹಲಿಯ ವಾಯು ಗುಣಮಟ್ಟ: ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.