ETV Bharat / bharat

ಕಾರು - ಆಟೋ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ - four died in car rickshaw

ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಕಾರು-ಆಟೋ
ಕಾರು-ಆಟೋ
author img

By

Published : Sep 13, 2021, 8:10 AM IST

ಥಾಣೆ(ಮಹಾರಾಷ್ಟ್ರ): ಕಾರು - ಆಟೋ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಅಂಬರ್​ನಾಥ ತಾಲೂಕಿನ ಪಾಲೇಗಾಂವ್​ನ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ವರ್ಷ ವಾಲೆಚಾ (51), ಆರತಿ ವಾಲೆಚಾ (41), ರಾಜ್ ವಾಲೆಚಾ (12) ಮತ್ತು ರಿಕ್ಷಾ ಚಾಲಕ ವಿಠ್ಠಲ್​ ಶಿಂಧೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕೆನಡಾ ಆಸ್ಪತ್ರೆಯಲ್ಲಿ ಹುದ್ದೆ ಆಮಿಷವೊಡ್ಡಿ ದೋಖಾ: ಬೆಂಗಳೂರಿನ ಮಹಿಳೆಗೆ 18 ಲಕ್ಷ ರೂ. ವಂಚನೆ

ಸ್ಥಳಕ್ಕೆ ಶಿವಾಜಿನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಮೃತದೇಹಗಳನ್ನು ಉಲ್ಲಾಸ್ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಎದುರಿಗೆ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.