ಥಾಣೆ (ಮಹಾರಾಷ್ಟ್ರ): ಇಲ್ಲಿನ ಗುನ್ಹೆ ಯುನಿಟ್ -1ರ ಸಿಸಿಬಿ ತಂಡವು ಹೈ ಪ್ರೊಫೈಲ್ ಸೆಕ್ಸ್ ದಂಧೆಯನ್ನು ಬಯಲಿಗೆಳೆದಿದ್ದು, ಇಬ್ಬರು ತಮಿಳು ನಟಿಯರು ಸೇರಿದಂತೆ ಐವರನ್ನು ಬಂಧಿಸಿದೆ.
ಇಬ್ಬರು ತಮಿಳು ನಟಿಯರು ಮುಂಬೈನ ಸೆಕ್ಸ್ ರಾಕೆಟ್ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದರು. ಆ ಏಜೆಂಟ್ ಮೂಲಕ ವೇಶ್ಯಾವಾಟಿಕೆಗಾಗಿ ಥಾಣೆಗೆ ಬಂದಿದ್ದರು. ಇಬ್ಬರು ನಟಿಯರು ಏಜೆಂಟರಿಂದ 2 ಲಕ್ಷ ರೂ. ಬೇಡಿಕೆಯಿಟ್ಟಿದ್ದರು. ಕೊನೆಗೆ 1, 80,000 ರೂ.ಗೆ ಡೀಲ್ ಕುದುರಿಸಿದ್ದರು ಎನ್ನಲಾಗಿದೆ.
ಏಜೆಂಟ್ ಜೊತೆ ಡೀಲ್ ಮಾಡಿಕೊಂಡ ಬಳಿಕ ಇಬ್ಬರು ಥಾಣೆಯ ಪಚ್ಪಖಡಿಯಲ್ಲಿರುವ ನಟರಾಜ್ ಸೊಸೈಟಿಯ ಫ್ಲ್ಯಾಟ್ಗೆ ನಿಗದಿತ ಸಮಯಕ್ಕೆ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದು, ಇಬ್ಬರು ನಟಿಯರು, ಫ್ಲ್ಯಾಟ್ ಮಾಲೀಕ, ಓರ್ವ ಪುರುಷ ಮತ್ತು ಓರ್ವ ಮಹಿಳಾ ಏಜೆಂಟರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಇಬ್ಬರು ನಟಿಯರು ಪ್ರಮುಖ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ನ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಟಿವಿ ಧಾರವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಐವರ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಹಲವು ನಟಿಯರ ಫೋಟೋಗಳು ಕಂಡು ಬಂದಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.