ಜಮ್ಮು ಮತ್ತು ಕಾಶ್ಮೀರ (ಶ್ರೀನಗರ): ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.
"ಮತ್ತೊಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ (ಒಟ್ಟು ಇಬ್ಬರು). ಒಬ್ಬನ ಗುರುತು ಪತ್ತೆಯಾಗುತ್ತಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಭಾರತೀಯ ಸೇನೆ ಸಂಘಟಿತವಾಗಿ ಎನ್‌ಕೌಂಟರ್ ನಡೆಸುತ್ತಿದ್ದಾರೆ.
ಓದಿ: ₹20 ಲಕ್ಷ ಚಿನ್ನಾಭರಣ ಕಳ್ಳತನ ದೂರು ನೀಡಿದಾಕೆಗೇ ಕೌನ್ಸೆಲಿಂಗ್ ಮಾಡಿದ ಪೊಲೀಸರು!