ನವದೆಹಲಿ: ಅಂತರಾಜ್ಯ ಗಡಿ ಸಮಸ್ಯೆಯನ್ನ ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದ ಅಸ್ಸೋಂ - ಮಿಜೋರಾಂ ಸರ್ಕಾರ ಕೆಲ ಒಪ್ಪಂದ ಮಾಡಿಕೊಂಡಿವೆ. ಈ ನಡುವೆಯೂ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಿದೆ.
ಎರಡೂ ರಾಜ್ಯದ ಅಧಿಕಾರಿಗಳು ಗಡಿಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಪ್ರಮುಖ ಅಂಶಗಳ ಕುರಿತು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಈ ಒಪ್ಪಂದದ ಬಳಿಕವೂ ಕ್ಯಾಚಾರ್ ಜಿಲ್ಲೆಯ ಭಾಗ ಬಜಾರ್ ಪ್ರದೇಶದಲ್ಲಿ ಸ್ಥಳೀಯರ ನಡುವೆ ಮಾರಾಮಾರಿ ನಡೆದಿದೆ.
ಉದ್ವಿಗ್ನರ ಗುಂಪು ಟ್ರಕ್ವೊಂದನ್ನು ತಡೆದು ದಾಳಿ ನಡೆಸಿದೆ. ಶುಕ್ರವಾರ ಸಂಜೆ ಮೊಟ್ಟೆಗಳನ್ನು ಹೊತ್ತ ನಾಲ್ಕು ವಾಹನಗಳು ಮಿಜೋರಾಂಗೆ ಹೊರಟ್ಟಿದ್ದವು. ಟ್ರಕ್‌ಗಳು ಭಾಗಾ ಬಜಾರ್ ಪ್ರದೇಶವನ್ನು ತಲುಪಿದ ತಕ್ಷಣ ಸ್ಥಳೀಯರು ವಾಹನಗಳನ್ನು ತಡೆದು ದಾಳಿ ನಡೆಸಿದ್ದಾರೆ.
ಓದಿ: ಎಚ್ಚರ.. ಎಚ್ಚರ.. ಕಿವಿಯಲ್ಲಿದ್ದ ಬ್ಲ್ಯೂಟೂತ್ ಇಯರ್‌ಫೋನ್ ಸ್ಫೋಟಗೊಂಡು ಯುವಕ ಸಾವು