ETV Bharat / bharat

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​ 24 ಅಲ್ಟ್ರಾ ಸ್ಮಾರ್ಟ್​ ಫೋನ್​ನಲ್ಲಿ ಬರಲಿದೆ ಟೆಲಿಫೋಟೋ ಸೆನ್ಸಾರ್ - Galaxy S23

2023 ಗೆ ಬರಲಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿಯ ಗ್ಯಾಲಕ್ಸಿ ಎಸ್​ 23 ಸಿರೀಸ್ ​- ಹಾಗೆ ಮುಂಬರುವ ಗ್ಯಾಲಕ್ಸಿ ಎಸ್​ 24 ಅಲ್ಟ್ರಾದಲ್ಲಿ ಹೊಸ ಟೆಲಿಫೋಟೋ ಸೆನ್ಸಾರ್​ ಅಳವಡಿಕೆಯಾಗಲಿದೆ.

Samsung Galaxy Smart Phone Series
ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ ಫೋನ್ ಸರಣಿಗಳು
author img

By

Published : Dec 30, 2022, 1:22 PM IST

ಸಿಯೋಲ್​: ಸ್ಯಾಮ್​ಸಂಗ್​ ಮೊಬೈಲ್​ ಪ್ರಿಯರಿಗೆ ಕಂಪನಿ ಹೊಸ ವರ್ಷಕ್ಕೆ ಸಿಹಿ ಸುದ್ದಿಯೊಂದು ನೀಡಿದೆ. ಅದೇನೆಂದರೆ ದಕ್ಷಿಣ ಕೋರಿಯಾದ ಟೆಕ್​ ಸ್ಯಾಮಸಂಗ್​ ತನ್ನ ಮುಂಬರಲಿರುವ ಹೊಸ ಸ್ಮಾರ್ಟ್​ ಫೋನ್​ ಗ್ಯಾಲಕ್ಸಿ ಎಸ್​ 24 ಅಲ್ಟ್ರಾದಲ್ಲಿ ಹೊಸ ಟೆಲಿಫೋಟೋ ಎಂಬ ಸೆನ್ಸಾರ್ ಅ​ನ್ನು ಪರಿಚಯಸಲಿದೆ ಎಂದು ವರದಿಯಾಗಿದೆ.

ಟಿಪ್‌ಸ್ಟರ್ ಐಸ್ ಯೂನಿವರ್ಸ್ ಟ್ವಿಟರ್​​ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಅಲ್ಲದೇ ಈ ಮೊಬೈಲ್​ನ ಮುಖ್ಯ ಕ್ಯಾಮೆರಾ ಒಂದೇ ಆಗಿರಬಹುದು ಅಥವಾ ಅದರಲ್ಲಿ ಕೆಲವು ಬದಲಾವಣೆಯಿಂದ ನವೀಕರಿಸಬಹುದು ಎಂದು ಉಲ್ಲೇಖಿಸಿದೆ. ಜೊತೆಗೆ ಗ್ಯಾಲಕ್ಸಿ S24 ಅಲ್ಟ್ರಾದ ಟೆಲಿಫೋಟೋ ಸೆನ್ಸಾರ್ ಸ್ವಲ್ಪ ಮಟ್ಟಿಗೆ ಬದಲಾಗುವ ಮತ್ತು ಹೊಸ ಪರಿಹಾರವನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ, ದಕ್ಷಿಣ ಕೋರಿಯಾದ ಸ್ಯಾಮಸಂಗ್ ಟೆಕ್ ಗ್ಯಾಲಕ್ಸಿ ಎಸ್​ 23 ಯನ್ನು ಬರಲಿರುವ ಹೊಸ ವರ್ಷ 2023ಯಲ್ಲಿ ಬಿಡುಗಡೆ ಮಾಡಲಿದೆ. ಈ ಸಿರೀಸ್​ನಲ್ಲಿ Exynos ಚಿಪ್‌ಸೆಟ್ ಅನ್ನು ಬಳಸುವ ಸಾಧ್ಯತೆಯಿದೆ. ಇನ್ನು GizmoChina ಪ್ರಕಾರ, ಮುಂಬರುವ Galaxy ಫ್ಲ್ಯಾಗ್‌ಶಿಪ್‌ನಲ್ಲಿ ಇನ್-ಹೌಸ್ Exynos ಚಿಪ್ ಅಥವಾ Qualcomm ನ ಮುಂದಿನ ಜನ್ SoC ಅನ್ನು ಬಳಸಬೇಕೆ? ಎಂಬುದರ ಕುರಿತು Samsung ಒಳಗೆ ಆಂತರಿಕ ಸಂಘರ್ಷ ನಡೆಯುತ್ತಿದೆಯಂತೆ.

ಹಾಗೆಯೇ ಸ್ಯಾಮ್‌ಸಂಗ್‌ನ MX (ಮೊಬೈಲ್ ಅನುಭವ) ವಿಭಾಗವು Galaxy S22 ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯ Exynos ಚಿಪ್‌ಸೆಟ್‌ನ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರಿಗೆ ಹೆಚ್ಚಿನ ತೃಪ್ತಿಯನ್ನು ನೀಡಿಲ್ಲವಂತೆ ಮತ್ತು ಮುಂಬರುವ Galaxy S23 ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ SoC ಯೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ ಎಂದು ಐಸ್ ಯೂನಿವರ್ಸ್ ವೈಬೋ ಮೂಲಕ ಬಹಿರಂಗಪಡಿಸಿದೆ.

ಡಿಸೆಂಬರ್ 28 ರಂದು, ಸ್ಯಾಮ್‌ಸಂಗ್ ತನ್ನ ಸಿ - ಲ್ಯಾಬ್ ಪ್ರೋಗ್ರಾಂ (ಕ್ರಿಯೇಟಿವ್ ಲ್ಯಾಬ್ ಪ್ರೋಗ್ರಾಂ) ಮೂಲಕ ಅಭಿವೃದ್ಧಿಪಡಿಸಿದ ಹೊಸ ನವೀನ ಯೋಜನೆಗಳನ್ನು ಎಲೆಕ್ಟ್ರಾನಿಕ್ಸ್ ಶೋ (CES 2023) 2023 ನಲ್ಲಿ ಪ್ರದರ್ಶಿಸುವುದಾಗಿ ಘೋಷಿಸಿತು. ಇದರ ಮಧ್ಯೆ ಸ್ಯಾಮ್​ಸಂಗ್​ ಹೊಸ ವರ್ಷ 2023ರಲ್ಲಿ ಭಾರತದಲ್ಲಿ ಕೈಗೆಟುಕುವ ಬೆಲೆಯ Galaxy F04 ನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆಯಂತೆ.

ಕಂಪನಿ 2023 ರ ಆರಂಭದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಸರಣಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಉದ್ಯಮದ ಮೂಲಗಳು ಮಾಹಿತಿ ನೀಡಿವೆ. ಯುವ ಬಳಕೆದಾರರು ಬಯಸುತ್ತಿರುವ ಸೊಗಸಾದ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಮತ್ತು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಗಳಲ್ಲಿ ದೊರೆಯಲಿವೆಯಂತೆ.

Samsung Galaxy F04 ಬೆಲೆ ಸುಮಾರು 8000 ರೂಪಾಯಿ ಇರಲಿದ್ದು, ಕಡಿಮೆ ಬೆಲೆಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಇದಾಗಿದೆ. 4G Galaxy F04 ದೊಡ್ಡದಾದ 6.5-ಇಂಚಿನ ಸ್ಕ್ರೀನ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಇನ್ನು ಮೂಲಗಳ ಪ್ರಕಾರ, Samsung Galaxy F04 ನೊಂದಿಗೆ, ಗ್ರಾಹಕರು ಸುಗಮ ಕಾರ್ಯಕ್ಷಮತೆ ಖಚಿತಪಡಿಸಿಕೊಳ್ಳಲು Samsung ನ ನವೀನ RAM ಪ್ಲಸ್ ವೈಶಿಷ್ಟ್ಯದೊಂದಿಗೆ 8GB ವರೆಗೆ ವರ್ಚುಯಲ್ RAM ಅನ್ನು ಪಡೆಯುವ ಸಾಧ್ಯತೆಯಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ ಸರಣಿಯು ಗ್ಯಾಲಕ್ಸಿ ಸರಣಿಯ ಪ್ರತಿಯೊಬ್ಬರು ಖರೀದಿಸಬಹುದಾದ ಮಿಡ್​ ರೇಂಜ್​ನ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ನ ಸ್ಮಾರ್ಟ್‌ಫೋನ್‌ಗಳಾಗಿದೆ.

ಇದನ್ನೂ ಓದಿ: ಬಳಕೆದಾರರನ್ನು ಗುರಿಯಾಗಿಸಲು ಗೂಗಲ್​ ಆ್ಯಡ್​ ದುರ್ಬಳಕೆ; ಆನ್​ಲೈನ್​ನಲ್ಲಿ ಹೀಗೂ ನಡೆಯತ್ತೆ ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.