ನವದೆಹಲಿ : ಟೆಲಿಗ್ರಾಂನಲ್ಲಿ ಬಹುನಿರೀಕ್ಷಿತ ಗ್ರೂಪ್ ವಿಡಿಯೋ ಕಾಲ್ಗಳ ಆಯ್ಕೆಯನ್ನು ಪರಿಚಯಿಸುತ್ತಿದೆ. ಮೊಬೈಲ್ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಬಳಕೆದಾರರು ತಮ್ಮ ಗ್ರೂಪ್ ಆಡಿಯೋ ಚಾಟ್‌ಗಳನ್ನು ವಿಡಿಯೋ ಕಾನ್ಫರೆನ್ಸ್ ಕರೆಗಳಾಗಿ ಪರಿವರ್ತಿಸಬಹುದಾಗಿದೆ.
ಇವಿಷ್ಟೇ ಅಲ್ಲದೆ, ಟೆಲಿಗ್ರಾಂ ಅಪ್ಲಿಕೇಶನ್ ಇತ್ತೀಚಿನ ಅಪ್ಡೇಟ್ ಮೂಲಕ ಕೆಲವು ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ಪರಿಚಯಿಸಿದೆ. ಆನಿಮೇಟೆಡ್ ಬ್ಯಾಕ್‌ಗ್ರೌಂಡ್, ಹೊಸ ಮೆಸೇಜಿಂಗ್ ಆನಿಮೇಷನ್‌ಗಳು ಮತ್ತು ಹೊಸ ಆನಿಮೇಟೆಡ್ ಎಮೋಜಿಗಳು ಈ ಅಪ್ಡೇಟ್ನಲ್ಲಿ ಸೇರಿದೆ.
ಈ ಮೊದಲು ಗ್ರೂಪ್ ವಿಡಿಯೋ ಕರೆಗಳನ್ನು ಆಡಿಯೋ ವಿಧಾನದಲ್ಲಿ ಮಾತ್ರ ಮಾಡಲು ಅವಕಾಶವಿತ್ತು. ಆದರೆ, ಈಗ ಬಳಕೆದಾರರು ತಮ್ಮ ಗ್ರೂಪ್ ಆಡಿಯೋ ಸಂಭಾಷಣೆಗಳನ್ನು ವಿಡಿಯೋ ಕರೆಗಳಾಗಿ ಪರಿವರ್ತಿಸಬಹುದಾಗಿದೆ. ಬಳಕೆದಾರರು ತಮ್ಮ ವಿಡಿಯೋವನ್ನು ಆನ್ ಮಾಡಲು ಗ್ರೂಪ್ ಆಡಿಯೋ ಕರೆಯಲ್ಲಿ ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಬೇಕಾಗುತ್ತದೆ.
ಒಮ್ಮೆ ವಿಡಿಯೋ ಕಾಲ್ ಸಕ್ರಿಯಗೊಳಿಸಿದ ನಂತರ, ನಿಮ್ಮ ಗ್ರೂಪ್‌ನ ಸದಸ್ಯರಲ್ಲಿ ಒಬ್ಬರ ವಿಡಿಯೋವನ್ನು ನೋಡಲು ನೀವು ಪಿನ್ ಮಾಡಬಹುದು. ಈಗಿರುವ ವಿಡಿಯೋ ಕರೆಗಳ ಆಯ್ಕೆಯಂತೆ ಒಬ್ಬರನ್ನು ಪಿನ್ ಮಾಡಬಹುದು.
ಟೆಲಿಗ್ರಾಂ ಸ್ಕ್ರೀನ್ ಶೇರ್ ಮಾಡುವ ಆಯ್ಕೆಯನ್ನು ಮತ್ತು ನಿಮ್ಮ ಕ್ಯಾಮೆರಾ ಫೀಡ್ ತೋರಿಸುವ ಆಯ್ಕೆ ನೀಡಿದೆ. ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿನ ಬಳಕೆದಾರರು ವಿಡಿಯೋ ಕರೆಗಳ ಸಮಯದಲ್ಲಿ ಸೈಡ್ ಪ್ಯಾನಲ್ ತೆರೆಯಬಹುದು. ವಿಡಿಯೋ ಕಾಲ್ ಪೋರ್ಟ್ರೈಟ್ ಹಾಗೂ ಲ್ಯಾಂಡ್‌ಸ್ಕೇಪ್ ಆಯ್ಕೆ ಎರಡರಲ್ಲೂ ಲಭ್ಯವಿದೆ.