ಹೈದರಾಬಾದ್: ಕೊರೊನಾ 2ನೇ ಅಲೆ ದೇಶದೆಲ್ಲೆಡೆ ಇನ್ನಿಲ್ಲದ ಪ್ರಾಣ ಹಾನಿಗೆ ಕಾರಣವಾಗಿದೆ. ಚಿತಾಗಾರದ ಮುಂದೆ ಸಾಲುಗಟ್ಟಿ ಆ್ಯಂಬುಲೆನ್ಸ್ಗಳು ನಿಲ್ಲುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಅಂತ್ಯಸಂಸ್ಕಾರಕ್ಕೆ ಜಾಗವೂ ಸಿಗದ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಇದಿಷ್ಟೇ ಅಲ್ಲ ಕೆಲ ನಗರಗಳಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ವಿಧಿಸುವ ಬೆಲೆಯೂ ಸಹ ಹೆಚ್ಚಾಗಿದ್ದ ಕಾರಣ ಜನತೆಯ ಹತಾಸೆಗೆ ಕಾರಣವಾಗಿತ್ತು. ಹೈದರಾಬಾದ್ನಂತಹ ಸಿಟಿಯಲ್ಲಿಯೂ ಈ ದರ ತುಸು ಹೆಚ್ಚಾಗಿತ್ತು. ಈ ನಡುವೆ ಇಲ್ಲಿನ ಕರೀಂನಗರ ಮಹಾನಗರ ಪಾಲಿಕೆಯು ಶವಸಂಸ್ಕಾರಕ್ಕಾಗಿ ಕೇವಲ 1ರೂಪಾಯಿ ಶುಲ್ಕ ವಿಧಿಸಿ ಜನರ ನೆರವಿಗೆ ಬಂದಿದೆ.
ಈ ಬಾರಿ ಕಾರ್ಪೋರೇಷನ್ ಸಿಬ್ಬಂದಿ ಸುಮಾರು 392 ಕೋವಿಡ್ ಶವಗಳ ಅಂತ್ಯ ಸಂಸ್ಕಾರ ಮಾಡಿವೆ. ಜೊತೆಗೆ 1,054 ಇತರ ಶವಗಳಿಗೂ ಮುಕ್ತಿ ನೀಡಲಾಗಿದೆ. ಶವ ಸಂಸ್ಕಾರ ಮಾಡುವ ಉಸ್ತುವಾರಿ ಹೊತ್ತಿರುವವಿಗೆ ಪಾಲಿಕೆಯೂ ಹಣ ಪಾವತಿ ಮಾಡುತ್ತಿದೆ.
ಇಲ್ಲಿನ ಮಾರ್ಕಂಡೇಯ ಕಾಲೋನಿಯ ಸ್ಮಶಾನದಲ್ಲಿ ಗ್ಯಾಸ್ ಬಳಸಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ 2 ಸಾವಿರ ದರ ವಿಧಿಸಿದರೆ, ಇತರರಿಗೆ 3 ಸಾವಿರ ದರ ನಿಗದಿ ಮಾಡಲಾಗಿದೆ.
ಓದಿ: ವಿಶಾಖಪಟ್ಟಣಂ ಹೆಚ್‌ಪಿಸಿಎಲ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ