ETV Bharat / bharat

ಕರ್ನಾಟಕ ಮೂಲದ ಕಳ್ಳ ಸೇರಿದಂತೆ 6 ಜನರ ಬಂಧನ : 35 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಆರು ಸದಸ್ಯರ ಅಂತರರಾಜ್ಯ ತಂಡವನ್ನು ಶುಕ್ರವಾರ ಬಂಧಿಸಲಾಗಿದೆ. ಇವರು 26 ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಾಹಿತಿ ನೀಡಿದ್ದಾರೆ.

author img

By

Published : Jan 17, 2021, 5:26 AM IST

ಕರ್ನಾಟಕ ಮೂಲದ ಕಳ್ಳ ಸೇರಿದಂತೆ 6 ಜನರ ಬಂಧನ
ಕರ್ನಾಟಕ ಮೂಲದ ಕಳ್ಳ ಸೇರಿದಂತೆ 6 ಜನರ ಬಂಧನ

ಹೈದರಾಬಾದ್​: ಅಂತರರಾಜ್ಯ ಮನೆ ಕಳ್ಳರನ್ನು ಹೈದರಾಬಾದ್​ ಪೊಲೀಸರು ಬಂಧಿಸಿದ್ದು, ಇವರಿಂದ 35 ಲಕ್ಷ ರೂ. ಮೌಲ್ಯದ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರು ಸದಸ್ಯರ ಅಂತರರಾಜ್ಯ ತಂಡವನ್ನು ಶುಕ್ರವಾರ ಬಂಧಿಸಲಾಗಿದೆ. ಇವರು 26 ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ 23 ಬೈಕ್​, ಚಿನ್ನದ ಆಭರಣ,ಉಂಗುರ, ಬೆಳ್ಳಿ ಆಭರಣಗಳು, ಲ್ಯಾಪ್‌ಟಾಪ್ ಮತ್ತು ಮೂರು ಮೊಬೈಲ್ ಫೋನ್‌ಗಳು ಸೇರಿವೆ ಎಂದು ಕುಮಾರ್ ಹೇಳಿದ್ದಾರೆ.

ಪ್ರಮುಖ ಆರೋಪಿ ಅಬ್ದುಲ್ ಸಮೀರ್ (25) ಈ ಹಿಂದೆ ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿ ವಾಜೀದ್ ಕರ್ನಾಟಕ ಮೂಲದವನಾಗಿದ್ದು, 2019 ರಲ್ಲಿ ಉದ್ಯೋಗಕ್ಕಾಗಿ ಹೈದರಾಬಾದ್‌ಗೆ ಬಂದು ನಂತರ ಖಾಸಗಿ ಕಂಪನಿಯಲ್ಲಿ ಕೆಲವು ತಿಂಗಳು ಕೆಲಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ತಮ್ಮ ಅಪರಾಧ ಕೃತ್ಯಗಳಿಗೆ ನಗರದ ಹೊರವಲಯದಲ್ಲಿನ ಕಡಿಮೆ ಜನ ಸಾಂದ್ರತೆಯಿರುವ ಪ್ರದೇಶಗಳಲ್ಲಿನ ಬೀಗ ಹಾಕಿದ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ. ಕಳ್ಳತನ ಮಾಡಿದ ನಂತರ, ಕದ್ದ ಬೈಕ್‌ಗಳು ಮತ್ತು ಆಸ್ತಿಯನ್ನು ಬೀದರ್, ಕರೀಂನಗರ ಮತ್ತು ನಿಜಾಮಾಬಾದ್‌ಗೆ ರವಾನಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.