ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ನಿನ್ನೆ 6,876 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 59 ಜನ ಸೋಂಕಿಗೆ ಬಲಿಯಾಗಿದ್ದಾರೆ. 7,432 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇದುವರೆಗೆ 4,63,361 ಪ್ರಕರಣಗಳು ವರದಿಯಾಗಿವೆ. 79,520 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಈವರೆಗೆ 2,476 ಜನ ಸಾವನ್ನಪ್ಪಿದ್ದಾರೆ. ಇಲ್ಲಿಯತನಕ 3,81,365 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.53 ರಷ್ಟಿದ್ದು, ರಾಷ್ಟ್ರಮಟ್ಟದಲ್ಲಿ ಶೇ 1.1 ದಾಖಲಾಗಿದೆ. ತೆಲಂಗಾಣದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 82.30 ರಷ್ಟಿದ್ದು, ದೇಶದಲ್ಲಿ ಶೇ 81.08 ಇದೆ.
ಕೊರೊನಾ ಹತ್ತಿಕ್ಕಲು ಈ ಹಿಂದೆ ಹೇರಲಾಗಿದ್ದ ನೈಟ್ ಕರ್ಫ್ಯೂವನ್ನು ಮೇ8 ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ತೆಲಂಗಾಣ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಡ್ರೋನ್ ಬಳಕೆ ಮಾಡಲು ಯೋಜಿಸಿದ್ದು, ರಾಜ್ಯದ ಹಲವು ಭಾಗಗಳಿಗೆ ಡ್ರೋನ್ ಮೂಲಕ ಲಸಿಕೆ ರವಾನೆಯಾಗಲಿದೆ. ಈ ಮೂಲಕ ರಾಜ್ಯದಲ್ಲಿ ಸರಾಗವಾಗಿ ಲಸಿಕೆ ಹಂಚಲು ತೆಲಂಗಾಣ ಮುಂದಾಗಿದೆ.
ಇದನ್ನೂ ಓದಿ: ಹೈಕೋರ್ಟ್ ಎಚ್ಚರಿಕೆಗೆ ಮಣಿದು ರಾಜ್ಯವ್ಯಾಪಿ ಲಾಕ್ಡೌನ್ ವಿಧಿಸಿದ ಬಿಹಾರ ಸರ್ಕಾರ