ETV Bharat / bharat

ಉಕ್ರೇನ್​​ನಿಂದ ವಾಪಸ್​​ ಆದ 740 ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಕೊಟ್ಟ ಸಿಎಂ ಕೆಸಿಆರ್​​!

author img

By

Published : Mar 15, 2022, 7:25 PM IST

ಉಕ್ರೇನ್​ನಿಂದ ವಾಪಸ್​ ಆಗಿರುವ ತೆಲಂಗಾಣದ 740 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಕೆಸಿಆರ್​​​ ಗುಡ್​ನ್ಯೂಸ್​ ನೀಡಿದ್ದು, ಅವರ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡುವುದಾಗಿ ತಿಳಿಸಿದ್ದಾರೆ..

Ukraine Indian students
Ukraine Indian students

ಹೈದರಾಬಾದ್​(ತೆಲಂಗಾಣ) : ರಷ್ಯಾ-ಉಕ್ರೇನ್​ ಬಿಕ್ಕಟ್ಟಿನಿಂದಾಗಿ ಅಲ್ಲಿ ವ್ಯಾಸಂಗ ಮಾಡ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಇದೀಗ ಭಾರತಕ್ಕೆ ವಾಪಸ್​ ಆಗಿದ್ದು, ಅವರ ಮುಂದಿನ ವಿದ್ಯಾಭ್ಯಾಸ ಡೋಲಾಯಮಾನವಾಗಿದೆ. ಇದರಲ್ಲಿ ತೆಲಂಗಾಣದ ಅನೇಕ ವಿದ್ಯಾರ್ಥಿಗಳು ಸಹ ಇದ್ದು, ಅವರಿಗೆ ಇದೀಗ ಸಿಎಂ ಕೆಸಿಆರ್ ನೇತೃತ್ವದ ರಾಜ್ಯ ಸರ್ಕಾರ ಗುಡ್​ನ್ಯೂಸ್ ನೀಡಿದೆ.

ಉಕ್ರೇನ್​​ನ ವಿವಿಧ ನಗರಗಳಿಂದ ತೆಲಂಗಾಣಕ್ಕೆ ವಾಪಸ್​ ಆಗಿರುವ 740 ವೈದ್ಯಕೀಯ ವಿದ್ಯಾರ್ಥಿಗಳಿಗೆ ತೆಲಂಗಾಣ ಸರ್ಕಾರ ಸಹಾಯಹಸ್ತ ನೀಡಲು ಮುಂದಾಗಿದ್ದು, ಅವರ ಅಧ್ಯಯನಕ್ಕಾಗಿ ಧನಸಹಾಯ ನೀಡುವುದಾಗಿ ಘೋಷಣೆ ಮಾಡಿದೆ.

ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಕೆಸಿಆರ್​, ರಾಜ್ಯದ 740 ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿ ವ್ಯಾಸಂಗ ಮಾಡ್ತಿದ್ದರು. ಇದೀಗ ಅವರೆಲ್ಲರೂ ವಾಪಸ್​​ ಆಗಿದ್ದು, ಅವರಿಗೆ ಧನಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಉಕ್ರೇನ್​​ನಿಂದ ವಾಪಸ್​ ಆಗಿರುವ ವಿದ್ಯಾರ್ಥಿಗಳನ್ನ ನಾವು ಬೆಂಬಲಿಸುತ್ತೇವೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಇದನ್ನೂ ಓದಿರಿ: ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದ ರಾಜನಾಥ್​ ಸಿಂಗ್​

ಉಕ್ರೇನ್​​ನ ಖಾರ್ಕಿವ್​, ಕೀವ್​ ಸೇರಿದಂತೆ ಅನೇಕ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಉಲ್ಭಣಗೊಳ್ಳುತ್ತಿದ್ದಂತೆ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತಲಾಗಿದೆ. ಆದರೆ, ಕರ್ನಾಟಕದ ಫೈನಲ್​ ವರ್ಷದ ವಿದ್ಯಾರ್ಥಿ ನವೀನ್​​ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.