ETV Bharat / bharat

ಛೇ ಹೀಗಾಗಬಾರದಿತ್ತು..ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಸಾಲ!

'ಸಾಲಬಾಧೆಯಿಂದ ಜೀವನ ಕಷ್ಟವಾಗುತ್ತಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ' ಎಂದು ತಮ್ಮ ಸಂಬಂಧಿಯೊಬ್ಬರಿಗೆ ವಾಯ್ಸ್​ ಸಂದೇಶ ಕಳುಹಿಸಿದ್ದರು..

vijayawada
ಆತ್ಮಹತ್ಯೆ
author img

By

Published : Jan 8, 2022, 3:15 PM IST

Updated : Jan 9, 2022, 10:48 AM IST

ವಿಜಯವಾಡ(ಆಂಧ್ರಪ್ರದೇಶ) : ಸಾಲಬಾಧೆಯಿಂದಾಗಿ ತೆಲಂಗಾಣದ ಕುಟುಂಬವೊಂದರ ನಾಲ್ವರು ಸದಸ್ಯರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಲತಾ(54), ಆಶಿಷ್​(22), ಸುರೇಶ್​ (56) ಹಾಗೂ ಅಖಿಲ್​(28) ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ತೆಲಂಗಾಣದ ಈ ಕುಟುಂಬ ಆಂಧ್ರಪ್ರದೇಶದ ವಿಜಯವಾಡದಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿತ್ತು. ಇಲ್ಲಿನ ಹೋಟೆಲ್​ ಒಂದರಲ್ಲಿ ರೂಮ್ ​ಬಾಡಿಗೆಗೆ ಪಡೆದುಕೊಂಡಿದ್ದರು. ಕೆಲ ದಿನಗಳಿಂದ ಇಲ್ಲೇ ಇದ್ದ ಕುಟುಂಬಸ್ಥರು, 'ಸಾಲಬಾಧೆಯಿಂದ ಜೀವನ ಕಷ್ಟವಾಗುತ್ತಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ' ಎಂದು ತಮ್ಮ ಸಂಬಂಧಿಯೊಬ್ಬರಿಗೆ ವಾಯ್ಸ್​ ಸಂದೇಶ ಕಳುಹಿಸಿದ್ದರು.

ಇದರಿಂದ ಗಾಬರಿಯಾದ ಸಂಬಂಧಿಕರು ಹೋಟೆಲ್​ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸಿಬ್ಬಂದಿ ಅವರಿದ್ದ ರೂಮ್​ಗೆ ಬಂದು ಪರಿಶೀಲಿಸಿದಾಗ ತಾಯಿ ಶ್ರೀಲತಾ ಮತ್ತು ಪುತ್ರ ಆಶಿಷ್​ ವಿಷ ಸೇವನೆಯಿಂದ ಸಾವನ್ನಪ್ಪಿದ್ದು ದೃಢಪಟ್ಟಿದೆ.

ವಿಷಯ ತಿಳಿದ ಪೊಲೀಸರು ರೂಮ್​ ತಪಾಸಣೆ ನಡೆಸಿದಾಗ 20ಕ್ಕೂ ಅಧಿಕ ಇನ್ಸುಲಿನ್​ ಬಾಟಲ್​ಗಳು ಪತ್ತೆಯಾಗಿವೆ. ಮೃತಪಟ್ಟ ಆಶಿಷ್​ ಬಿ-ಫಾರ್ಮ್​ ವಿದ್ಯಾರ್ಥಿಯಾಗಿದ್ದು, ಇವುಗಳ ಬಗ್ಗೆ ಅರಿವಿದ್ದ ಕಾರಣ ಹೆಚ್ಚಾಗಿ ಇನ್ಸುಲಿನ್​ ಇಂಜೆಕ್ಟ್​ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇದೇ ವೇಳೆ ತಂದೆ ಸುರೇಶ್​ ಮತ್ತು ಇನ್ನೊಬ್ಬ ಪುತ್ರ ಅಖಿಲ್​ ಕೃಷ್ಣಾ ನದಿಯಲ್ಲಿ ಧುಮುಕಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಾಮರಾಜನಗರ ಗಡಿಯಲ್ಲಿ ತುರ್ತು ಭೂಸ್ಪರ್ಶ!

Last Updated : Jan 9, 2022, 10:48 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.