ETV Bharat / bharat

ಹೊಸ ಹೆಲಿಕಾಪ್ಟರ್ ಖರೀದಿಸಿ, ದೇವಸ್ಥಾನಕ್ಕೆ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ! - ಯಾದಾದ್ರಿಯ ಪ್ರಸಿದ್ಧ ಲಕ್ಷ್ಮೀನಾರಾಯಣ ಸ್ವಾಮಿ

ತೆಲಂಗಾಣದ ಉದ್ಯಮಿ ತಮ್ಮ ಹೊಚ್ಚ ಹೊಸ ಹೆಲಿಕಾಪ್ಟರ್ ಅನ್ನು ಯಾದಾದ್ರಿಯ ಪ್ರಸಿದ್ಧ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನಕ್ಕೆ ತಂದು ಪೂಜೆ ಮಾಡಿಸಿದರು.

telangana-businessman-takes-helicopter-to-temple-for-vahan-puja
ವಾಹನ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೆಲಿಕಾಪ್ಟರ್ ತಂದ ಉದ್ಯಮಿ
author img

By

Published : Dec 15, 2022, 7:17 PM IST

Updated : Dec 15, 2022, 7:51 PM IST

ಹೊಸ ಹೆಲಿಕಾಪ್ಟರ್ ಖರೀದಿಸಿ, ದೇವಸ್ಥಾನಕ್ಕೆ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!

ಹೈದರಾಬಾದ್​(ತೆಲಂಗಾಣ): ಹೊಸದಾಗಿ ಖರೀದಿಸಿದ್ದ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ, ತೆಲಂಗಾಣದ ಉದ್ಯಮಿಯೊಬ್ಬರು ತಾವು ಖರೀದಿಸಿದ್ದ ಹೊಸ ಹೆಲಿಕಾಪ್ಟರನ್ನು ದೇವಸ್ಥಾನದವರೆಗೆ ತಂದು ಅದಕ್ಕೆ ವಾಹನ ಪೂಜೆ ನೆರವೇರಿಸಿದ್ದಾರೆ.!

ಪ್ರತಿಮಾ ಗ್ರೂಪ್​ನ ಮಾಲೀಕರಾದ ಬೋಯನಪಲ್ಲಿ ಶ್ರೀನಿವಾಸ್ ರಾವ್ ಏರ್​ಬಸ್​​ ಎಸಿಹೆಚ್​​​ 135 ಹೆಲಿಕಾಪ್ಟರ್​ ಖರೀದಿಸಿದ್ದಾರೆ. ಅದಕ್ಕೆ ವಾಹನ ಪೂಜೆ ಮಾಡಿಸಲೆಂದು ಯಾದಾದ್ರಿಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನಕ್ಕೆ ತಂದು ಮೂವರು ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿದರು. ಕುಟುಂಬಸಮೇತವಾಗಿ ಶ್ರೀನಿವಾಸ್ ರಾವ್ ಹೆಲಿಕಾಪ್ಟರ್​ನಲ್ಲಿಯೇ ದೇವಸ್ಥಾನಕ್ಕೆ ಬಂದಿದ್ದರು.

ಇದನ್ನೂ ಓದಿ: ಸ್ವಂತ ಮನೆಗೆ ಹೋಗಲು ದಾರಿಯಿಲ್ಲ.. ಹೆಲಿಕಾಪ್ಟರ್​ನಲ್ಲಿ ತೆರಳಲು ಅನುಮತಿ ಕೋರಿ ರೈತ ಮನವಿ

ಈ ಹೆಲಿಕಾಪ್ಟರನ್ನು 5.7 ಮಿಲಿಯನ್​ ಯುಎಸ್‌ ಡಾಲರ್​ ಕೊಟ್ಟು ಖರೀದಿಸಿದ್ದಾರೆ. ಇವರು ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ​ ಸಂಬಂಧಿ. ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಅವರೂ ಉಪಸ್ಥಿತರಿದ್ದರು. ಪ್ರತಿಮಾ ಗ್ರೂಪ್​ ಇನ್ಫ್ರಾಸ್ಟ್ರಕ್ಚರ್, ಇಂಧನ, ಟೆಲಿಕಾಂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನೂ ಹೊಂದಿದ್ದಾರೆ.

ಇದನ್ನೂ ಓದಿ: ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ​ ಇನ್ನೋವಾ ಕಾರನ್ನೇ ಕದ್ದ ಖದೀಮರು

Last Updated : Dec 15, 2022, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.