ETV Bharat / bharat

ಹೈದರಾಬಾದ್​​ ಗ್ಯಾಂಗ್​ರೇಪ್​ ಸಂತ್ರಸ್ತೆಯ ಗುರುತು ಬಹಿರಂಗ: ಬಿಜೆಪಿ ಶಾಸಕನ ವಿರುದ್ಧ ಕೇಸ್ - gangrape victim identity Revealed

ಶಾಸಕ ರಘುನಂದನ್​​ ಸಂತ್ರಸ್ತ ಬಾಲಕಿಯ ಫೋಟೋ ಮತ್ತು ವಿಡಿಯೋ ಬಿಡುಗಡೆ ಮಾಡಿದ್ದರು. ಬಳಿಕ ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

Telangana BJP MLA booked for sharing photo of victim in gangrape case
ಹೈದರಾಬಾದ್​​ ಗ್ಯಾಂಗ್​ರೇಪ್​ ಸಂತ್ರಸ್ತೆಯ ಗುರುತು ಬಹಿರಂಗ: ಬಿಜೆಪಿ ಶಾಸಕನ ವಿರುದ್ಧ ಕೇಸ್
author img

By

Published : Jun 7, 2022, 3:38 PM IST

ಹೈದರಾಬಾದ್​​ (ತೆಲಂಗಾಣ): ಹೈದರಾಬಾದ್​​ನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಎಂ.ರಘುನಂದನ್​​ ರಾವ್​​ ವಿರುದ್ಧ ಪೊಲೀಸ್ ಕೇಸ್​​ ದಾಖಲಾಗಿದೆ.

ಮೇ 28ರಂದು ಪಬ್​ಗೆ ತೆರಳಿದ್ದ ಕಾರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಅಪ್ರಾಪ್ತರು ಸೇರಿ ಐವರು ಭಾಗಿಯಾಗಿದ್ದರು. ಈ ಸಂಬಂಧ ಜೂ.4ರಂದು ಮಾಧ್ಯಮಗೋಷ್ಟಿ ಮಾಡಿದ್ದ ಶಾಸಕ ರಘುನಂದನ್​​ ಸಂತ್ರಸ್ತ ಬಾಲಕಿಯ ಫೋಟೋ ಮತ್ತು ವಿಡಿಯೋ ಬಿಡುಗಡೆ ಮಾಡಿದ್ದರು. ಬಳಿಕ ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಹೀಗಾಗಿ ಐಪಿಸಿ ಸೆಕ್ಷನ್​ 228-ಎ ಅಡಿ ಸೋಮವಾರ ರಾತ್ರಿ ಶಾಸಕರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಇತ್ತ, ಈ ಪ್ರಕರಣದಲ್ಲಿ ಎಐಎಂಐಎಂ ಶಾಸಕರ ಮಗ ಕೂಡ ಭಾಗಿಯಾಗಿದ್ದಾನೆ ಎಂದು ರಘುನಂದನ್​​ ಆರೋಪಿಸಿದ್ದಾರೆ. ಶಾಸಕರ ಮಗ ಈ ಕೃತ್ಯದಲ್ಲಿ ಇದ್ದಾನೆ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಗಳು ಇವೆ. ನಾನು ಬಿಡುಗಡೆ ಮಾಡಿರುವ ವಿಡಿಯೋ ತುಣುಕಿನಲ್ಲಿ ಬಾಲಕಿಯ ಮುಖವಾಗಲಿ ಅಥವಾ ಆಕೆಯ ಗುರುತಾಗಲಿ ಬಹಿರಂಗವಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನೂ ಸಿಗದ ಆರೋಪಿ: ಐವರು ಆರೋಪಿಗಳ ಪೈಕಿ ಇದುವರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮತ್ತೊಬ್ಬ ಆರೋಪಿ ಇನ್ನೂ ಸಿಗದೆ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಚ್ಚಿಬಿದ್ದ ಸಿಎಂ ಯೋಗಿ ನಾಡು: ಉನ್ನಾವೋದಲ್ಲಿ 13ರ ದಲಿತ ಬಾಲಕಿ ಮೇಲೆ ರೇಪ್​​, ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.