ಬೀಡ್ (ಮಹಾರಾಷ್ಟ್ರ) : ಜಿಲ್ಲೆಯ ಕೆಜ್ ತಹಸೀಲ್ನಲ್ಲಿ ತಾಯಿ ಟಿವಿ ಆಫ್ ಮಾಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚೈತನ್ಯ ಅನಂತ್ ಕೋಕಿಲ್(18) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಹ್ಮದ್ ನಗರದ ವೇದ ವಿದ್ಯಾಲಯದಲ್ಲಿ ಕಳೆದ ಐದು ವರ್ಷಗಳಿಂದ ವೇದ ಅಧ್ಯಯನ ಮಾಡುತ್ತಿದ್ದ ಈತ ಆನ್‌ಲೈನ್ ಕ್ಲಾಸ್ ಮುಗಿದ ಬಳಿಕ ನೆಲದ ಮೇಲೆ ಮಲಗಿ ಟಿವಿ ನೋಡುತ್ತಿದ್ದ.
ಈ ವೇಳೆ ಕೂತು ಓದುವಂತೆ ತಾಯಿ ಗದರಿಸಿದ್ದಳು. ಆದರೆ, ಯುವಕ ತಾಯಿ ಮಾತು ಕೇಳಿರಲಿಲ್ಲ. ಹಾಗಾಗಿ, ತಾಯಿ ಟಿವಿ ಆಫ್ ಮಾಡಿದ್ದಳು. ಇದರಿಂದ ಕೋಪಗೊಂಡ ಕೋಕಿಲ್ ಬಾತ್ ರೂಂಗೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗ್ತಿದೆ.
ಓದಿ : ಬೆಂಗಳೂರು : ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆ
ಬಾತ್ ರೂಂನಲ್ಲಿ ಯುವಕ ಮೃತದೇಹ ಕಂಡ ಆತನ ತಾಯಿ ಮತ್ತು ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.