ನವದೆಹಲಿ : ಹುಟ್ಟುತ್ತಲೇ ಅತ್ಯಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಗೆ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಡ್ರಾಪ್ಡ್ ಹೆಡ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಅಪರೂಪದ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 13 ವರ್ಷಗಳಿಂದ ಡ್ರಾಪ್ಡ್ ಹೆಡ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಇತ್ತೀಚೆಗೆ ಗಂಭೀರವಾದ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ಏನಿದು ಡ್ರಾಪ್ಡ್ ಹೆಡ್ ಸಿಂಡ್ರೋಮ್? : ಈ ಕಾಯಿಲೆ ಇರುವವರ ಕುತ್ತಿಗೆಯಲ್ಲಿ ಬಲಹೀನತೆ ಇದ್ದು, ಕುತ್ತಿಗೆ ಸುಮಾರು ಗರಿಷ್ಠ 90 ಡಿಗ್ರಿ ಕೆಳಗೆ ಬಾಗಿರುತ್ತದೆ. ಅಂದರೆ ವ್ಯಕ್ತಿಯ ಗಲ್ಲ ಎದೆಗೆ ಸ್ಪರ್ಶವಾಗುವ ರೀತಿಯಲ್ಲಿರುತ್ತದೆ. ತಲೆಯನ್ನು ಎತ್ತಿ ನಡೆಯುವುದು ಕಷ್ಟವಾಗಿರುತ್ತದೆ. ಕುತ್ತಿಗೆಯ ಮಾಂಸಖಂಡಗಳು ಬಲವಾಗಿ ತಲೆಯನ್ನು ಹಿಡಿದಿರುವುದಿಲ್ಲ. ಇದನ್ನೇ ಡ್ರಾಪ್ಡ್ ಹೆಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದೇ ರೀತಿಯ ಕಾಯಿಲೆಯಿಂದ ಬಾಲಕಿಗೆ ದೆಹಲಿಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರಗೊಳಿಸುವ ಮೂಲಕ ಶಿಶುಗಳ ಮಿದುಳಿನ ಹಾನಿ ತಡೆಯಬಹುದು: ಅಧ್ಯಯನ
ಈಗ ಚಿಕಿತ್ಸೆಗೆ ಒಳಗಾದ ಬಾಲಕಿಯಲ್ಲಿ ಮೊದಲಿನಿಂದಲೂ ಈ ಕಾಯಿಲೆ ಇತ್ತು. ಆದರೆ, ಇತ್ತೀಚೆಗೆ ಸಮಸ್ಯೆ ಹೆಚ್ಚಾದ ಕಾರಣದಿಂದ ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಉಸಿರಾಟಕ್ಕೆ ತೊಂದರೆಯಾಗುತ್ತಿತ್ತು. ಅದರೊಂದಿಗೆ ಮಾತನಾಡಲು ಮತ್ತು ಕೇಳಿಸಿಕೊಳ್ಳಲೂ ಸಮಸ್ಯೆ ಎದುರಾಗಿತ್ತು. ಮೊದಲಿನಿಂದ ನಿರ್ಲಕ್ಷ್ಯವಹಿಸಿದ ಕಾರಣದಿಂದಾಗಿಯೂ ಸಮಸ್ಯೆ ಸ್ವಲ್ಪ ಮಟ್ಟಿಗೆ ಗಂಭೀರವಾಗಿತ್ತು. ಆಕೆಗೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ ಮೂಳೆಚಿಕಿತ್ಸೆ, ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ.ರಾಜಗೋಪಾಲನ್ ಕೃಷ್ಣನ್ ಮತ್ತು ಮುಂತಾದವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.