ETV Bharat / bharat

ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋ ತೋರಿಸುತ್ತಿದ್ದ ಶಿಕ್ಷಕರು: ಶಾಲೆಯಲ್ಲೇ ಹಿಡಿದು ಥಳಿಸಿದ ಪೋಷಕರು - mobile phones

ಶಿರಡಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೋರಿಸಿ ಕೆಟ್ಟಾಗಿ ನಡೆದುಕೊಳ್ಳುತ್ತಿದ್ದ ಶಿಕ್ಷಕರಿಬ್ಬರು ಜೈಲು ಪಾಲಾಗಿದ್ದಾರೆ.

teachers-showing-obscene-videos-to-students-on-their-mobile-phones-two-teachers-arrsted
ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೋರಿಸುತ್ತಿದ್ದ ಶಿಕ್ಷಕರು: ಶಾಲೆಯಲ್ಲೇ ಹಿಡಿದು ಥಳಿಸಿದ ಪೋಷಕರು
author img

By

Published : Sep 20, 2022, 6:35 PM IST

Updated : Sep 20, 2022, 6:51 PM IST

ಅಹ್ಮದ್‌ನಗರ (ಮಹಾರಾಷ್ಟ್ರ): ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಇಬ್ಬರು ಶಿಕ್ಷಕರು ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅನುಚಿತವಾಗಿ ವರ್ತಿಸಿದ ಘಟನೆ ಮಹಾರಾಷ್ಟ್ರದ ಶಿರಡಿಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಶಿಕ್ಷಕರಿಗೆ ಗ್ರಾಮಸ್ಥರು ಮತ್ತು ಪೋಷಕರೇ ಶಾಲೆಯಲ್ಲೇ ಹಿಡಿದು ಥಳಿಸಿ ಬುದ್ಧಿ ಕಲಿಸಿದ್ದಾರೆ. ಅಲ್ಲದೇ, ಇಬ್ಬರೂ ಆರೋಪಿಗಳನ್ನು ಪೊಲೀಸರಿಗೆ ಪೋಷಕರು ಒಪ್ಪಿಸಿದ್ದಾರೆ.

ಇಲ್ಲಿನ ಜಿಲ್ಲಾ ಪರಿಷತ್ ಶಾಲೆಯೊಂದರಲ್ಲಿ 7 ಮತ್ತು 8ನೇ ತರಗತಿಯ ಹಲವು ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಅಶ್ಲೀಲವಾಗಿ ವರ್ತಿಸಿದ್ದರು ಎಂದು ಹೇಳಲಾಗಿದೆ. ಈ ವಿಷಯ ತಿಳಿಸಿದ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ನುಗ್ಗಿ ಕೈಗೆ ಸಿಕ್ಕ ಶಿಕ್ಷಕರಿಗೆ ಥಳಿಸಿದ್ದಾರೆ. ಇತ್ತ, ಪೊಲೀಸರು ಕೂಡ ಶಾಲೆಗೆ ಬಂದ ಆರೋಪಿ ಶಿಕ್ಷಕರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೋರಿಸುತ್ತಿದ್ದ ಶಿಕ್ಷಕರು: ಶಾಲೆಯಲ್ಲೇ ಹಿಡಿದು ಥಳಿಸಿದ ಪೋಷಕರು

ವಿಷಯ ಬಾಯ್ಬಿಡದಂತೆ ಬೆದರಿಕೆ: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಶಿಕ್ಷಕರು ತೋರಿಸುವುದಲ್ಲದೇ ನಮ್ಮೊಂದಿಗೆ ಕೆಟ್ಟಾಗಿ ನಡೆದುಕೊಳ್ಳುತ್ತಿದ್ದರು. ಶಿಕ್ಷಕರ ಈ ಕೃತ್ಯಕ್ಕೆ 10ರಿಂದ 12 ಅಪ್ರಾಪ್ತ ಬಾಲಕಿಯರೂ ಬಲಿಯಾಗಿದ್ದಾರೆ. ಇದು ಹಲವು ದಿನಗಳಿಂದ ನಡೆಯುತ್ತಿತ್ತು. ಅಲ್ಲದೇ, ಈ ವಿಷಯ ಎಲ್ಲಿಯೂ ಬಾಯ್ಬಿಡದಂತೆ ಬೆದರಿಕೆ ಹಾಕುತ್ತಿದ್ದರು. ಶಾಲಾ ಪ್ರಮಾಣಪತ್ರ ರದ್ದುಗೊಳಿಸುವುದಾಗಿ ಬೆದರಿಕೆವೊಡ್ಡುತ್ತಿದ್ದರು ಎಂದು ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾರೆ.

ಶಿಕ್ಷಕರ ಕೃತ್ಯ ಹೊರ ಬಿದ್ದಿದ್ದು ಹೇಗೆ?: ಆರೋಪಿ ಶಿಕ್ಷಕರು ಶಾಲಾ ಪ್ರಮಾಣಪತ್ರ ರದ್ದುಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರಿಂದ ವಿದ್ಯಾರ್ಥಿಗಳು ಇದೇ ಭಯದಿಂದ ಕೃತ್ಯವನ್ನು ಸಹಿಸಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಒಬ್ಬ ಹುಡುಗಿ ಶಾಲೆ ಹೋಗುವುದನ್ನೇ ಬಿಟ್ಟಿದ್ದಳು. ಆಗ ಆ ಬಾಲಕಿಗೆ ಶಾಲೆಗೆ ಹೋಗದಿರುವ ಬಗ್ಗೆ ತಾಯಿ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: 13ರ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಮಾವ

ಇದರಿಂದ ಬಾಲಕಿ ಕಣ್ಣೀರು ಹಾಕುತ್ತಾ ಎಲ್ಲ ಸತ್ಯವನ್ನು ಹೇಳಿದ್ದಾಳೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆ ಬಾಲಕಿಯ ತಾಯಿ ಇತರ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾರೆ. ಆಗ ಇತರ ಪೋಷಕರು ಕೂಡ ಈ ಬಗ್ಗೆ ತಮ್ಮ ಮಕ್ಕಳನ್ನು ವಿಚಾರಿಸಿದ್ದು, ಅನೇಕ ಬಾಲಕಿಯರು ಸಹ ಶಿಕ್ಷಕರು ನಮಗೆ ಅಂತಹ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೋರಿಸುತ್ತಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಹೀಗಾಗಿಯೇ ಸಿಟ್ಟಿಗೆದ್ದ ಪೋಷಕರು ನೇರವಾಗಿ ಶಾಲೆಗೆ ತೆರಳಿ ಆರೋಪಿ ಶಿಕ್ಷಕರನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ: ಚಂಡೀಗಢ ವಿವಿ ವಿಡಿಯೋ ಲೀಕ್: ಆರೋಪಿಗಳು 7 ದಿನ ಪೊಲೀಸ್​ ಕಸ್ಟಡಿಗೆ

ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪೋಸ್ಕೋ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ ಸೇರಿ ವಿವಿಧ ಕಾಯ್ದೆಗಳಡಿ ಆರೋಪಿಗಳಾದ ಸಂಜಯ್ ಸಖಹರಿ ಥೋರಟ್ ಮತ್ತು ರಾಜೇಂದ್ರ ಮಾಧವ್ ಥೋರಟ್ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸತವ್ ತಿಳಿಸಿದ್ದಾರೆ.

ಶಾಲೆಗೆ 150 ವರ್ಷಗಳ ಇತಿಹಾಸ: ಈ ಜಿಲ್ಲಾ ಪರಿಷತ್ ಶಾಲೆಗೆ 150 ವರ್ಷಕ್ಕೂ ಅಧಿಕ ಇತಿಹಾಸ ಇದೆ. ಈ ಶಾಲೆಯನ್ನು 1881ರಲ್ಲಿ ಸ್ಥಾಪಿಸಲಾಗಿದ್ದು, ಶಿರಡಿಯ ಅನೇಕ ಪ್ರಮುಖರು ಇದೇ ಶಾಲೆಯಲ್ಲಿ ಶಿಕ್ಷಣ ಪಡಿಸಿದ್ದಾರೆ. ಹಾಗಾಗಿ ಈ ಶಾಲೆಗೂ, ಗ್ರಾಮಸ್ಥರಿಗೂ ಅವಿನಾಭಾವ ಸಂಬಂಧವಿದೆ. ಆದರೆ, ಈ ಶಾಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ಇಂತಹ ಶಿಕ್ಷರ ನೀಚ ಕೃತ್ಯ ಬಯಲಾಗಿದೆ. ಆದ್ದರಿಂದ ಆರೋಪಿ ಶಿಕ್ಷಕರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಶಾಶ್ವತವಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಕಬಡ್ಡಿ ಪ್ಲೇಯರ್ಸ್​ಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ: ಕ್ರೀಡಾಧಿಕಾರಿ ಅಮಾನತು

Last Updated : Sep 20, 2022, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.