ETV Bharat / bharat

ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಬದಲು ಟೀ ಕಪ್ ಬಳಕೆ: ಕ್ರಮ ಕೈಗೊಳ್ಳುವುದಾಗಿ ಸಚಿವರ ಭರವಸೆ

ಟೀ ಕಪ್ ಅನ್ನು ಆಕ್ಸಿಜನ್ ಮಾಸ್ಕ್ ಆಗಿ ಬಳಸಿ ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Tea cup used instead of oxygen mask
ಆಕ್ಸಿಜನ್ ಮಾಸ್ಕ್ ಬದಲು ಟೀ ಕಪ್ ಬಳಕೆ
author img

By

Published : Aug 4, 2023, 8:38 AM IST

Updated : Aug 4, 2023, 8:22 PM IST

ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಬದಲು ಟೀ ಕಪ್ ಬಳಕೆ

ಕಾಂಚಿಪುರಂ (ತಮಿಳುನಾಡು) : ಸರ್ಕಾರಿ ಆಸ್ಪತ್ರೆ ಎಂದರೆ ಜನರಲ್ಲಿ ಅಸಡ್ಡೆ. ಉತ್ತಮವಾದ ವಾತಾವರಣ, ಚಿಕಿತ್ಸೆ, ಗುಣಮಟ್ಟದ ಔಷಧ ಬೇಕು ಎಂದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ಮನೋಭಾವ ಸಾಮನ್ಯವಾಗಿ ಜನರಲ್ಲಿ ಮೂಡಿದೆ. ಈ ಬೆನ್ನಲ್ಲೇ ಕಾಂಚಿಪುರಂ ಜಿಲ್ಲೆಯ ಉತ್ತರಮೇರೂರು ಬಳಿಯ ಸರ್ಕಾರಿ ಆಸ್ಪತ್ರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಟೀ ಕಪ್ ಅನ್ನು ಆಕ್ಸಿಜನ್ ಮಾಸ್ಕ್ ಆಗಿ ಬಳಸಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಂಚಿಪುರಂ ಜಿಲ್ಲೆಯ ಉತ್ರಮೇರೂರ್ ಬಳಿ ವಾಸಿಸುತ್ತಿರುವ ಶಾಲಾ ವಿದ್ಯಾರ್ಥಿಯೊಬ್ಬ ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಇದರಿಂದ ವಿದ್ಯಾರ್ಥಿಯ ತಂದೆ ಉತ್ತರ ಮೇರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರು ಉಸಿರಾಟದ ಕೊಳವೆಯ ಮೂಲಕ ಆಮ್ಲಜನಕವನ್ನು ನೀಡುವಂತೆ ಸಲಹೆ ನೀಡಿದರು. ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಉಸಿರಾಟದ ಕೊಳವೆಯ ಮೂಲಕ ಆಮ್ಲಜನಕ ನೀಡಲು ಮಾಸ್ಕ್ ಇಲ್ಲದ ಕಾರಣ ಟೀ ಅಂಗಡಿಯಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟಗಳನ್ನು ಖರೀದಿಸಿ, ವಿದ್ಯಾರ್ಥಿಯ ಮೂಗಿನ ಮೂಲಕ ಆಮ್ಲಜನಕವನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಆಕ್ಸಿಜನ್​ ದುರಂತ : ಅಪ್ಪನ ನೆನೆದು ಭಾವುಕಳಾದ ಬಾಲಕಿ.. ಕಂದನ ಮಾತಿಗೆ ಕಣ್ಣೀರಿಟ್ಟ ಜನ

ಹೀಗೆ ವಿಭಿನ್ನ ರೀತಿಯಲ್ಲಿ ಆಮ್ಲಜನಕ ನೀಡುವ ದೃಶ್ಯವನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರಿಂದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಬಡ ಜನರು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಸೂಕ್ತ ಚಿಕಿತ್ಸೆ ನೀಡಲು ಸಣ್ಣ ಪ್ರಮಾಣದ ವೈದ್ಯಕೀಯ ಉಪಕರಣಗಳೂ ಇಲ್ಲವೇ? ಎಂದು ಹಲವರು ಅಂತರ್ಜಾಲದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಉಳ್ಳಾಲಕ್ಕೆ ಬಂದ ಸೋನು ಸೂದ್ ಫೌಂಡೇಶನ್ ಆಕ್ಸಿಜನ್​ ಪ್ಲಾಂಟ್ ​​: ಜಿಲ್ಲಾಡಳಿತದ ಸ್ವಾಗತ

ಇನ್ನೊಂದೆಡೆ, ಮೂಲ ಆರೋಗ್ಯ ಸಲಕರಣೆಗಳ ಕೊರತೆ ಇದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಈ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ 120 ಕೋಟಿ ರೂಪಾಯಿ ಮೌಲ್ಯದ ಔಷಧ ಮತ್ತು ಉಪಕರಣಗಳನ್ನು ಇಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಆ್ಯಂಬುಲೆನ್ಸ್​ನಲ್ಲಿ ಪ್ರಾಣವಾಯುವಿಲ್ಲದೆ ಉಸಿರು ಚೆಲ್ಲಿದ ಶಿಶು... ಬಸವಪಟ್ಟಣ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

ಘಟನೆಗೆ ಸಂಬಂಧಿಸಿದಂತೆ ವಿವರಣೆ ನೀಡಿರುವ ವೈದ್ಯಕೀಯ ವ್ಯವಹಾರಗಳ ಸಚಿವ ಎಂ.ಸುಬ್ರಮಣಿಯನ್, "ಇದು ಕಳೆದ ತಿಂಗಳ 27 ರಂದು ನಡೆದ ಘಟನೆ ಎಂದು ಉಲ್ಲೇಖಿಸಿದ್ದಾರೆ. ಆಕ್ಸಿಜನ್ ಮಾಸ್ಕ್ ತರಲು ತಡವಾಗಿದ್ದರಿಂದ ಬಾಲಕನ ತಂದೆ ಪೇಪರ್ ಕಪ್ ಖರೀದಿಸಿದ್ದಾರೆ. ಈ ಬಗ್ಗೆ ಇಲಾಖಾ ವಿಚಾರಣೆ ನಡೆಯುತ್ತಿದೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಆಕ್ಸಿಜನ್ ಕಿಟ್ ಧರಿಸಿಕೊಂಡೇ ಮತಗಟ್ಟೆಗೆ ಬಂದು ಮತ ಹಾಕಿದ ಗ್ರಾ. ಪಂ. ಸದಸ್ಯ!

Last Updated : Aug 4, 2023, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.