ETV Bharat / bharat

40 ವರ್ಷ ಪೂರ್ಣಗೊಳಿಸಿದ ತೆಲುಗು ದೇಶಂ ಪಾರ್ಟಿ; ರಾಜಕೀಯದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದ ಎನ್‌ಟಿಆರ್‌ ಪಕ್ಷ - ತೆಲುಗು ದೇಶಂ ಪಾರ್ಟಿ

ಆಂಧ್ರ ಪ್ರದೇಶದ ರಾಜಕೀಯದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದ ನಟ ಎನ್‌ಟಿ ರಾಮರಾವ್‌ ಅವರ ಟಿಡಿಪಿ ಪಕ್ಷ ಸ್ಥಾಪನೆಯಾಗಿ ಇಂದಿಗೆ 4 ದಶಕಗಳು ಕಳೆದಿವೆ. ಈ 40 ವರ್ಷಗಳಲ್ಲಿ ತೆಲಗು ದೇಶಂ ಪಕ್ಷದ ಏಳು-ಬೀಳು ಹಾಗೂ ಸಮಾಣ ಕಲ್ಯಾಣ ಯೋಜನೆಗಳ ಮಾಹಿತಿ ಇಲ್ಲಿದೆ.

tdp completes 40 years has set new trends in politics
40 ವರ್ಷ ಪೂರ್ಣಗೊಳಿಸಿದ ತೆಲುಗು ದೇಶಂ ಪಾರ್ಟಿ; ರಾಜಕೀಯದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದ ಎನ್‌ಟಿಆರ್‌ ಪಕ್ಷ
author img

By

Published : Mar 29, 2022, 10:30 AM IST

ಹೈದರಾಬಾದ್‌: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಸೃಷ್ಟಿಯಾಗಿ ಇಂದಿಗೆ ಬರೋಬ್ಬರಿ 40 ವರ್ಷಗಳನ್ನು ಪೂರೈಸುತ್ತಿದೆ. 1982ರ ಮಾರ್ಚ್‌ 29 ರಂದು ಹೈದರಾಬಾದ್‌ನ ನ್ಯೂ ಎಂಎಲ್‌ಎ ಕ್ವಾಟ್ರಸ್‌ನ ಹೊರಗಡೆ ಟಿಡಿಪಿ ಉದಯಿಸಿತ್ತು. ಖ್ಯಾತ ನಟ ಎನ್‌ಟಿಆರ್‌ ಅವರ ಕನಸಿನ ತೆಲುಗು ದೇಶಂ ಪಕ್ಷ ಘೋಷಣೆಯ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸಾಕ್ಷಿಯಾಗಿದ್ದರು.

ನ್ಯೂ ಎಂಎಲ್‌ಎ ಕ್ವಾರ್ಟರ್ಸ್‌ನಲ್ಲಿನ ಶಾಸಕರ ಭವನದಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. 300 ಜನರೊಂದಿಗೆ ನಾಲ್ಕು ಗೋಡೆಗಳ ನಡುವೆ ನಡೆಯಬೇಕಿದ್ದ ಸಭೆಯನ್ನು ಎಂಎಲ್‌ಎ ಕ್ವಾರ್ಟರ್ಸ್ ಕ್ಯಾಂಪಸ್‌ಗೆ ಸ್ಥಳಾಂತರಿಸಬೇಕಾಯಿತು. ಕಾರಣ ಅಲ್ಲಿ ಸೇರಿದ್ದ ಎನ್‌ಟಿಆರ್ ಅಭಿಮಾನಿಗಳು ಹಾಗೂ ಯುವಕರ ದಂಡು.

ಸಭೆಯನ್ನು ಹುಲ್ಲುಹಾಸಿಗೆ ಸ್ಥಳಾಂತರಿಸಿದ ಬಳಿಕ ಮಾತನಾಡಿದ ಎನ್‌ಟಿಆರ್ ಅವರು ರಾಜಕೀಯ ಪಕ್ಷ ಆರಂಭಿಸುವುದಾಗಿ ಘೋಷಿಸಿದರು. ಕೆಲವರು ಪಕ್ಷದ ಹೆಸರು ಹೇಳುವಂತೆ ಒತ್ತಾಯಿಸಿದಾಗ ನಗುತ್ತಾ ಪ್ರತಿಕ್ರಿಯಿಸಿದ ಎನ್‌ಟಿ ರಾಮರಾವ್‌, ನಾನು ತೆಲುಗು ಮನುಷ್ಯ, ನನ್ನ ಪಕ್ಷ ತೆಲುಗು ದೇಶಂ ಪಕ್ಷ ಎಂದು ಘೋಷಿಸಿಕೊಂಡರು. ಆ ಬಳಿಕ ತೆಲುಗು ರಾಷ್ಟ್ರದಲ್ಲಿ ಟಿಡಿಪಿ ದೊಡ್ಡ ಸಂಚಲವನ್ನ ಸೃಷ್ಟಿಸಿದ್ದು ಇತಿಹಾಸ.

ಪಕ್ಷ ಸ್ಥಾಪನೆಯಾದ ಒಂಬತ್ತು ತಿಂಗಳಲ್ಲೇ ಎನ್‌ಟಿಆರ್‌ ಆರಂಭಿಸಿದ ತೆಲುಗು ದೇಶಂ ಪಕ್ಷವು ರಾಜ್ಯಕ್ಕೆ ಹೊಸ ರೀತಿಯ ರಾಜಕೀಯವನ್ನು ಪರಿಚಯಿಸಿತು. ಎನ್‌ಟಿಆರ್ ಅವರು ‘ತೆಲುಗುದೇಶಂ ಪಿಲಿಸ್ತೊಂದಿ ರಾ, ಕದಲಿರಾ(ತೆಲುಗು ದೇಶಂ ಕರೆಯುತ್ತಿದೆ ಬಾ... ಎದ್ದು ಬಾ) ಎಂದು ಕರೆದಾಗ ಜನಸಾಗರವೇ ಹರಿದು ಬಂದಿತ್ತು.

ಹೊಸ ಟ್ರೆಂಡ್​ ಸೃಷ್ಟಿಸಿದ್ದ ಎನ್​​ಟಿಆರ್​: ರಾಜಕೀಯ ಪಕ್ಷಗಳ ಸಭೆಗಳಿಗೆ ಜನರನ್ನು ಕರೆತರುವ ಪದ್ಧತಿಯೇ ಬದಲಾಯಿತು. ಚೈತನ್ಯ ರಥದಲ್ಲಿ ಎನ್‌ಟಿಆರ್ ಜನರ ನಡುವೆ ಸಂಚರಿಸಿದರು. ಗ್ರಾಮದಲ್ಲಿ ಎಲ್ಲಿ ಕಂಡರೂ ಸಾರ್ವಜನಿಕ ಸಭೆಗಳು ನಡೆದವು. ಎನ್‌ಟಿಆರ್‌ ಚೈತನ್ಯ ರಥದಲ್ಲಿ ಮಲಗಿ ರಸ್ತೆ ಬದಿಯಲ್ಲಿ ಸ್ನಾನ ಮಾಡುತ್ತಿದ್ದರು. ಹೀಗೆ ಅವರು ಹೊಸ ಟ್ರೆಂಡ್ ಸೃಷ್ಟಿಸಿದರು. ಇದಾದ ಕೆಲವೇ ದಿನಗಳಲ್ಲಿ ಟಿಡಿಪಿ ವಿಜಯ ಪತಾಕೆ ಹಾರಿಸಿತು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಕ್ಷ ಮೊದಲ ಹಿನ್ನಡೆ ಅನುಭವಿಸಿತು. 1984ರ ಆಗಸ್ಟ್‌ನಲ್ಲಿ ಎನ್‌ಟಿಆರ್‌ ಅವರನ್ನೇ ಪಕ್ಷದಿಂದ ಹೊರಹಾಕಲಾಯಿತು.

ಅಮೆರಿಕದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಎನ್‌ಟಿಆರ್ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಮತ್ತೆ ಚಳವಳಿಯ ನೇತೃತ್ವ ವಹಿಸಿದರು. ಒಂದು ತಿಂಗಳ ಕಾಲ ನಡೆಸಿದ ಜನಾಂದೋಲನದಿಂದಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೇ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಎನ್‌ಟಿಆರ್ ಮತ್ತೆ ಟಿಡಿಪಿಯಿಂದ ಮುಖ್ಯಮಂತ್ರಿಯಾದರು.

1983, 1985, 1989 ಮತ್ತು 1994 ರಲ್ಲಿ ಎನ್‌ಟಿಆರ್ ಆಡಳಿತದಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ತೆಲುಗು ದೇಶಂ ಮೂರು ಬಾರಿ ಘನ ಜಯ ಸಾಧಿಸಿತು. ಮೂರು ಬಾರಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ಸಾಧನೆ ರಾಮರಾವ್‌ ಅವರದ್ದು.

ಕಲ್ಯಾಣ ಯೋಜನೆಗಳು: ಎನ್‌ಟಿಆರ್ ಅವರು 2 ರೂಪಾಯಿಗೆ ಅಕ್ಕಿ, ಬಡವರಿಗೆ ಪಕ್ಕಾ ಮನೆ, 50 ರೂಪಾಯಿಗೆ ವಿದ್ಯುತ್, ಕೃಷಿ ಪಂಪ್ ಸೆಟ್ ಇತ್ಯಾದಿ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದರು. ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಪಟೇಲ್ ನಿರ್ಮೂಲನೆ ಮುಂತಾದ ಆಡಳಿತ ಸುಧಾರಣೆಗಳನ್ನು ಪ್ರಾರಂಭಿಸಿದರು. ಪಟ್ವಾರಿ ಪದ್ಧತಿ, ವಲಯ ಮಂಡಳಿಗಳನ್ನು ರಚನೆ ಮಾಡಿದ್ದರು.

1994ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ನಂತರ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳು ನಾಯಕತ್ವ ಬದಲಾವಣೆಗೆ ಕಾರಣವಾಯಿತು. ಎನ್‌ಟಿಆರ್‌ ಅವರ ಅಳಿಯ ಚಂದ್ರಬಾಬು ಅವರು 1995ರ ಸೆಪ್ಟೆಂಬರ್ 1 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು 180 ಸ್ಥಾನಗಳನ್ನು ಗೆದ್ದು ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು.

ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶಕ್ಕೆ ರಾಜಧಾನಿಯೂ ಇಲ್ಲದ ಪರಿಸ್ಥಿತಿಯಲ್ಲಿ ರಾಜ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ 2014ರ ಚುನಾವಣೆಯಲ್ಲಿ ರಾಜ್ಯದ ಜನತೆ ಮತ್ತೆ ಚಂದ್ರಬಾಬು ಅವರನ್ನು ಗೆಲ್ಲಿಸಿಕೊಂಡರು. ಆ ಚುನಾವಣೆಯಲ್ಲಿ ಗೆದ್ದ ನಂತರ ಚಂದ್ರಬಾಬು ಮೂರನೇ ಬಾರಿಗೆ ಮುಖ್ಯಮಂತ್ರಿಯಾದರು.

ಚಂದ್ರಬಾಬು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅಭಿವೃದ್ಧಿ ಹಾಗೂ ಸುಧಾರಣೆಗೆ ಆದ್ಯತೆ ನೀಡಿದ್ದರು. ಹೈದರಾಬಾದ್ ಐಟಿ ಮತ್ತು ಬಯೋಟೆಕ್ ಉದ್ಯಮಗಳಿಗೆ ಕೇಂದ್ರವಾಗಿ ಮಾಡಿದರು. ಜಂಟಿ ಆಂಧ್ರಪ್ರದೇಶದಲ್ಲಿ ಅವರ ಉಪಕ್ರಮದ ಅಡಿ ಅನೇಕ ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾದವು.

ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ತಯಾರಿಸಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಪೋಲಾವರಂ ಯೋಜನೆಯ ನಿರ್ಮಾಣವನ್ನು ನಿರ್ಣಾಯಕ ಹಂತಕ್ಕೆ ತರಲಾಯಿತು. ಕಿಯಾ, ಅಪೊಲೊ ಟೈರ್ಸ್, ಏಷ್ಯನ್ ಪೇಂಟ್ಸ್ ಮುಂತಾದ ಕೈಗಾರಿಕೆಗಳನ್ನು ರಾಜ್ಯಕ್ಕೆ ತಂದರು. ಅನೇಕ ಮೊಬೈಲ್‌ ಕಂಪನಿಗಳನ್ನು ತಿರುಪತಿಗೆ ಬರುವಂತೆ ನೋಡಿಕೊಂಡರು.

2019ರಲ್ಲಿ ನಡೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಂದೆ ಟಿಡಿಪಿ ಮಕಾಡೆ ಮಲಗಿತು. ಕಾಂಗ್ರೆಸ್‌ ತೊರೆದು ಹೊಸ ಪಕ್ಷದ ಕಟ್ಟಿ ಹೋರಾಟ ಮಾಡಿದ್ದ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಆಂಧ್ರದ ಸಿಎಂ ಆಗಿ ಆಡಳಿತ ನಡೆಸುತ್ತಿದ್ದು, ಚಂದ್ರಬಾಬು ನಾಯ್ಡು ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಸದನದ ಬಾವಿಗಿಳಿದು ಪ್ರತಿಭಟನೆ.. 5 ಟಿಡಿಪಿ ಶಾಸಕರ ಅಮಾನತು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.