ETV Bharat / bharat

ಕ್ರಿಶ್ಚಿಯನ್ನರು ಇಲ್ಲದಿದ್ರೆ ತಮಿಳುನಾಡು ಬಿಹಾರವಾಗ್ತಿತ್ತು: ಡಿಎಂಕೆ ನಾಯಕನ ಹೇಳಿಕೆ ವಿವಾದ - ಈಟಿವಿ ಭಾರತ ಕನ್ನಡ ನ್ಯೂಸ್​

ಡಿಎಂಕೆ ಜಾತ್ಯತೀತ ತತ್ವದ ಪಕ್ಷ. ಅದರ ಮುಖಂಡ, ವಿಧಾನಸಭಾಧ್ಯಕ್ಷ ಅಪ್ಪಾವು ಅವರ ಕ್ರಿಶ್ಚಿಯನ್​ ಓಲೈಕೆಯ ಹೇಳಿಕೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.

tamil-nadu-state-speaker
ವಿಧಾನಸಭಾಧ್ಯಕ್ಷ ಅಪ್ಪಾವು
author img

By

Published : Jul 26, 2022, 9:32 AM IST

ಚೆನ್ನೈ: ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರು ತಿಂಗಳ ಹಿಂದೆ ಮಾಡಿದ್ದ ಕ್ರಿಶ್ಚಿಯನ್ನರ ಓಲೈಕೆಯ ಭಾಷಣ ಇದೀಗ ವೈರಲ್​ ಆಗಿದ್ದು, ವಿವಾದವೆಬ್ಬಿಸಿದೆ. ತಮಿಳುನಾಡಿನ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕರು ಇಲ್ಲದಿದ್ದರೆ ರಾಜ್ಯ ಬಿಹಾರವಾಗುತ್ತಿತ್ತು ಎಂದು ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಳೆದ ತಿಂಗಳು ಜೂನ್ 28 ರಂದು ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಅಪ್ಪಾವು ಅವರು ಭಾಗವಹಿಸಿ ಮಾತನಾಡಿದ್ದರು. ಈ ವೇಳೆ, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು. ಸರ್ಕಾರವೇ ನಿಮ್ಮದು. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವೇ ಈ ಸರ್ಕಾರ ರಚನೆಗೆ ಕಾರಣ ಎಂದೆಲ್ಲಾ ಹಾಡಿಹೊಗಳಿದ್ದಾರೆ.

ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ. ನಿಮ್ಮದೇನೇ ಸಮಸ್ಯೆಗಳಸಿದ್ದರೂ ಅವುಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ನೀಡಿ. ಅವರು ಏನನ್ನೂ ನಿರಾಕರಿಸುವುದಿಲ್ಲ. ಕಾರಣ ಈ ಸರ್ಕಾರ ಉಳಿಯಲು ನೀವೇ ಕಾರಣ ಎಂದು ಮುಖ್ಯಮಂತ್ರಿಗೆ ತಿಳಿದಿದೆ. ತಮಿಳುನಾಡಿನಿಂದ ಕ್ರಿಶ್ಚಿಯನ್ನರನ್ನು ತೊಲಗಿಸಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರೇ ಮುಖ್ಯ ಕಾರಣ. ತಮಿಳುನಾಡು ಉಳಿದಿರುವುದೇ ನಿಮ್ಮಿಂದ ಎಂದು ಹೇಳಿದ್ದರು.

ಹಿಂದು ವಿರೋಧಿ ಹೇಳಿಕೆ- ಬಿಜೆಪಿ: ಅಪ್ಪಾವು ಅವರ ಈ ಕ್ರಿಶ್ಚಿಯನ್​ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಬಿಜೆಪಿ ಮತ್ತು ಡಿಎಂಕೆ ಮಧ್ಯೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ವಿಧಾನಸಭಾ ಸ್ಪೀಕರ್ ಅವರ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಜಾತ್ಯತೀತ ಪಕ್ಷ ಎಂದು ಹೇಳುವ ಡಿಎಂಕೆ ಕ್ರಿಶ್ಚಿಯನ್ನರ ಅಡಿಯಾಳಾಗಿದೆ. ಹಿಂದು ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸುಖಾಸುಮ್ಮನೆ ರಾಜಕೀಯ: ಇದಕ್ಕೆ ಸ್ಪಷ್ಟನೆ ನೀಡಿರುವ ವಿಧಾನಸಭಾಧ್ಯಕ್ಷ ಅಪ್ಪಾವು, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾಷಣದ ತುಣುಕನ್ನು ಸಂಕಲನ(ಎಡಿಟ್​) ಮಾಡಲಾಗಿದೆ. ಟ್ರಿಮ್​ ಮಾಡಿದ ಭಾಷಣವನ್ನು ಮಾತ್ರ ಹರಿಬಿಡಲಾಗಿದೆ. ಇದಲ್ಲದೇ ನಾನು ಬೇರೆ ವಿಚಾರಗಳನ್ನೂ ಪ್ರಸ್ತಾಪಿಸಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: "ಮದ್ಯ ಬದಲು ಗಾಂಜಾ ನೀಡಿ, ಅಪರಾಧ ನಿಲ್ಲುತ್ತೆ": ಬಿಜೆಪಿ ಶಾಸಕನ ವಿವಾದಾತ್ಮಕ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.