ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ರಜನಿಕಾಂತ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ನಟ ರಜನಿಕಾಂತ್ ಅವರನ್ನು ಅಕ್ಟೋಬರ್ 28ರಂದು ಚೆನ್ನೈನ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ವರದಿ ಮಾಡಿದಂತೆ ರಜನಿಕಾಂತ್ ಅವರು ಒಂದೆರಡು ದಿನಗಳ ಹಿಂದೆ ಶೀರ್ಷಧಮನಿ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.