ETV Bharat / bharat

ಸ್ಟಾಲಿನ್​​ ಸರ್ಕಾರದ ಬಜೆಟ್: ಶಿಕ್ಷಣ, ಪ್ರವಾಹ ತಡೆಗೆ ಆದ್ಯತೆ, ರೈತರ ಸಾಲ ಮನ್ನಾ ಘೋಷಣೆ - ತಮಿಳುನಾಡು ಬಜೆಟ್​ 2022

2022-23ನೇ ಸಾಲಿನ ಆಯವ್ಯಯ ಮಂಡಿಸಿರುವ ತಮಿಳುನಾಡು ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದೆ.

Tamil Nadu Budget 2022
Tamil Nadu Budget 2022
author img

By

Published : Mar 18, 2022, 6:15 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಶಿಕ್ಷಣ, ನಗರ ವಲಯಗಳ ಅಭಿವೃದ್ಧಿ, ಪ್ರವಾಹ ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಿ, ರೈತರ ಸಾಲ ಮನ್ನಾ ಘೋಷಣೆ ಮಾಡಿದೆ.

ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್​ ಬಜೆಟ್​​ ಮಂಡಿಸಿದ್ದು, ಪ್ರವಾಹ ತಡೆಗೆ 2,800 ಕೋಟಿ ರೂ. ಮೀಸಲಿಡುತ್ತಿರುವುದಾಗಿ ತಿಳಿಸಿದ್ದಾರೆ. ಲಂಡನ್​​ ಕ್ಯೂ ಗಾರ್ಡನ್​ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಸಸ್ಯೋದ್ಯಾನ ನಿರ್ಮಾಣ ಮಾಡುವುದಾಗಿ ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ.

ಲಂಡನ್‌ನ ಕ್ಯೂ ಗಾರ್ಡನ್ಸ್ ಸಹಭಾಗಿತ್ವದಲ್ಲಿ ಸರ್ಕಾರವು ಚೆನ್ನೈ ಬಳಿ ರೂ.300 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನವನ್ನು ಸ್ಥಾಪಿಸಲಿದೆ. ಶಿಕ್ಷಣ ಕ್ಷೇತ್ರಕ್ಕಾಗಿ 36,895 ಕೋಟಿ ರೂ. ಮೀಸಲಿಡಲಾಗಿದ್ದು, ಶಾಲಾ ಮಕ್ಕಳ ಶಿಕ್ಷಣಕ್ಕಾಗಿ 5,668 ಕೋಟಿ ರೂ. ಮೀಸಲಿಟ್ಟಿದ್ದು, 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಪಠ್ಯಪುಸ್ತಕ, ನೋಟ್​ಬುಕ್​, ಶಾಲಾ ಕಿಟ್ಸ್​ ನೀಡಲು ನಿರ್ಧರಿಸಲಾಗಿದೆ ಎಂದರು.

ಇದನ್ನೂ ಓದಿ: ದುಬೈನಲ್ಲಿ ಪರ್ವೇಜ್ ಮುಷರಫ್‌ ಭೇಟಿಯಾದ KGF 2 ನಟ ಸಂಜಯ್​ ದತ್​? ಫೋಟೋ ವೈರಲ್‌

ರೈತರ ಸಾಲ ಮನ್ನಾ ಘೋಷಣೆ: ರಾಜ್ಯದಲ್ಲಿನ ರೈತರಿಗೆ ಸ್ಟಾಲಿನ್ ಸರ್ಕಾರದ ಬಜೆಟ್​ನಲ್ಲಿ ಭರ್ಜರಿ ಘೋಷಣೆ ಮಾಡಿದ್ದು, 2,531 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಉಳಿದಂತೆ 1,000 ಕೋಟಿ ಜುವೆಲ್ಲರಿ ಸಾಲ ಮನ್ನಾ ಮಾಡಲಾಗಿದ್ದು, ಸ್ವಸಹಾಯ ಸಂಘಗಳ 600 ಕೋಟಿ ಸಾಲ ಮನ್ನಾ ಮಾಡುವ ಭರವಸೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.