ಹೈದರಾಬಾದ್ : ಪಂಜಶೀರ್ ಕಣಿವೆಯ ಮೇಲೆ ದಾಳಿ ನಡೆಸಲು ತಾಲಿಬಾನ್ ಸಜ್ಜಾಗಿದೆ. ಇನ್ನು, ಪಂಜಶೀರ್‌ನಲ್ಲಿನ ತಾಲಿಬಾನ್ ವಿರೋಧಿ ಮೈತ್ರಿಕೂಟವು ಶರಣಾಗಲು ನಾಲ್ಕು ಗಂಟೆಗಳ ಗಡುವನ್ನು ನೀಡಿದೆ, ವಿಫಲವಾದರೆ ಕ್ರೂರ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಭಾರತದ ಅಫ್ಘಾನ್ ರಾಜಕೀಯ ಮತ್ತು ನಾಗರಿಕ ಕಾರ್ಯಕರ್ತ ನಿಸಾರ್ ಅಹ್ಮದ್ ಶೆರ್ಜೈ ಮಾಹಿತಿ ನೀಡಿದ್ದಾರೆ. ತಾಲಿಬಾನ್ ವಿರುದ್ಧ ಹೋರಾಡಲು ಅಲ್ಲಿನ ತಾಲಿಬಾನ್ ವಿರೋಧಿ ಒಕ್ಕೂಟದ ಸದಸ್ಯರು ಮತ್ತು ಇತರ ತಾಲಿಬಾನ್ ವಿರೋಧಿ ನಾಯಕರು ಒಟ್ಟುಗೂಡುತ್ತಿದ್ದಾರೆ.
ತಾಲಿಬಾನ್ ಇದರಲ್ಲಿ ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಪಂಜಶೀರ್ ಕಷ್ಟಕರವಾದ ಭೂಗೋಳ ಮತ್ತು ಅದರ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಕೂಡ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ತಾಲಿಬಾನ್ ಈ ಹಿಂದೆಯೂ ಕೂಡ ಪಂಜಶೀರ್ ಮೇಲೆ 1990ರಲ್ಲಿ ದಾಳಿ ಮಾಡಲು ಮತ್ತು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ವಿಫಲರಾದರು. ಈ ಹಿನ್ನೆಲೆ ಈ ಬಾರಿ ಕೂಡ ಅವರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಇದೂ ಒಂದು ಮತ್ತು ಕಾಬೂಲ್‌ನ ಉತ್ತರಕ್ಕೆ ಕೇವಲ 70 ಮೈಲುಗಳಷ್ಟು ದೂರದಲ್ಲಿದೆ. ಕಡಿದಾದ ಮತ್ತು ಎತ್ತರದ ಪರ್ವತಗಳಿಂದ ಸುತ್ತುವರಿದ, ಆಳವಾದ ಕಮರಿಗಳು ಇದರಲ್ಲಿವೆ. ಹಿಮದಿಂದ ಆವೃತವಾದ ಶಿಖರಗಳ ಸರ್ವವ್ಯಾಪಿ ನೋಟದೊಂದಿಗೆ ಕಾಣುವ ಪಂಜಶೀರ್ ಕಣಿವೆಯು ಮಿಲಿಟರಿ ದೃಷ್ಟಿಕೋನದಿಂದ ಅಜೇಯ ಕೋಟೆಯಾಗಿ ಪರಿಗಣಿಸಲ್ಪಟ್ಟಿದೆ.
ಹಾಗೆ ಗೆರಿಲ್ಲಾ ಯುದ್ಧತಂತ್ರಕ್ಕೆ ಹೇಳಿಮಾಡಿಸಿದಂತಿದೆ. ಈ ಕಾರಣಕ್ಕೆ ಈವರೆಗೂ ಇಲ್ಲಿಗೆ ಉಗ್ರರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿಯೂ ಕೂಡ ಇಲ್ಲಿ ಆಕ್ರಮಣ ಮಾಡಲು ಬಂದಾಗ ಹಲವಾರು ಉಗ್ರರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಆದರೆ, ಈಗ ತಾಲಿಬಾನ್ ವಿರೋಧಿ ಕೂಟವಾದ ನಾರ್ದನ್ ಅಲೆಯನ್ಸ್ಗೆ ಎಚ್ಚರಿಕೆ ನೀಡಿದೆ. ಇನ್ನು, ಈ ಭೂಪ್ರದೇಶವು 'ಹಿಟ್-ಅಂಡ್-ರನ್' ತಂತ್ರಗಳನ್ನು ನಡೆಸಲು, ಹೊಂಚುದಾಳಿಯನ್ನು ನಡೆಸಲು ಮತ್ತು ಶತ್ರುಗಳಿಂದ ಮರೆಯಾಗಲು ಮಾಡಲು ಸೂಕ್ತ ಸ್ತಳವಾಗಿದೆ.