ETV Bharat / bharat

ತಾಲಿಬಾನ್‌ಗಳ ಮುಂದಿನ ಟಾರ್ಗೆಟ್‌ ಕಾಬೂಲ್‌!; ಅಫ್ಘಾನ್‌ನಲ್ಲಿರುವ ಭಾರತೀಯ ಜರ್ನಲಿಸ್ಟ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಅಕ್ಷರಶಃ ಯುದ್ಧ ಭೂಮಿಯಂತಾಗಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರು ಸರ್ಕಾರ ನೀಡಿರುವ ಭದ್ರತಾ ಸಲಹೆಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರಲ್ಲೂ ವಿಶೇಷವಾಗಿ ಭಾರತೀಯ ಪತ್ರಕರ್ತರು ಭದ್ರತಾ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸಬೇಕೆಂದು ಸೂಚನೆ ನೀಡಿದೆ.

Taliban advance towards Kabul; Govt issues security advisory for Indian journalists in Afghanistan
ತಾಲಿಬಾನ್‌ಗಳ ಮುಂದಿನ ಟಾರ್ಗೆಟ್‌ ಕಾಬೂಲ್‌!; ಅಫ್ಘಾನ್‌ನಲ್ಲಿರುವ ಭಾರತೀಯ ಜರ್ನಲಿಸ್ಟ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
author img

By

Published : Aug 13, 2021, 3:48 AM IST

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್‌ ಸಂಘಟನೆ ಪ್ರಮುಖ ನಗರವಾದ ಹೆರತ್‌ ಸೇರಿದಂತೆ ಮತ್ತೆ ಮೂರು ಪ್ರಾಂತ್ಯಗಳ ರಾಜಧಾನಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಹೆರತ್‌ ಅಫ್ಘಾನ್‌ನಲ್ಲೇ 3ನೇ ಅತಿ ದೊಡ್ಡ ನಗರವಾಗಿದೆ. ಇದೀಗ ಈ ನಗರವೂ ತಾಲಿಬಾಲಿಗಳ ಕೈವಶವಾಗಿದೆ.

ಸದ್ಯ ಯುದ್ಧಭೂಮಿಯಂತಾಗಿರುವ ನೆರೆಯ ದೇಶದಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಭದ್ರತಾ ಸಲಹೆಗಳನ್ನು ನೀಡಿದೆ. ವಿಶೇಷವಾಗಿ ಭಾರತದ ಪತ್ರಕರ್ತರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಭದ್ರತಾ ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಸಿದೆ.

ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಇತ್ತೀಚೆಗಷ್ಟೇ ಮಾಹಿತಿ ನೀಡಿ, ಇಲ್ಲಿರುವ ಭಾರತದ ಕೆಲವ ಪ್ರಜೆಗಳು ರಾಯಭಾರಿ ಕಚೇರಿಯ ಭದ್ರತಾ ಸಲಹೆಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ. ಪ್ರಾಣಾಪಾಯ ಇರುವ ಪ್ರದೇಶಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುಬೇಕು ಎಂದು ಸೂಚನೆ ನೀಡಿದ್ದರು. ರಾಯಭಾರಿ ಅವರ ಈ ಹೇಳಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಭದ್ರತಾ ಸಲಹೆಗಳನ್ನು ಪಾಲಿಸುವಂತೆ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.