ETV Bharat / bharat

ರಾಜಸ್ಥಾನ ಹಿಂದು ವ್ಯಕ್ತಿ ಹತ್ಯೆಗೆ ಪಾಕಿಸ್ತಾನ ನಂಟು.. 45 ದಿನ ತರಬೇತಿ ಪಡೆದಿದ್ದನಂತೆ ಹಂತಕ

Udaipur tailor killing case.. ಉದಯ​ಪುರದ ಹಿಂದು ವ್ಯಕ್ತಿ ಹತ್ಯೆ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದಕ್ಕೆ ಸುಳಿವು ಲಭ್ಯವಾಗಿವೆ. ಹಂತಕನೊಬ್ಬ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದು, ಅರಬ್​ ದೇಶಗಳ ಜತೆಗೂ ಈತ ನಂಟು ಹೊಂದಿದ್ದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ರಾಜಸ್ಥಾನ ಹಿಂದು ವ್ಯಕ್ತಿ ಹತ್ಯೆಗೆ ಪಾಕಿಸ್ತಾನ ನಂಟು

author img

By

Published : Jun 29, 2022, 5:42 PM IST

Updated : Jun 29, 2022, 5:59 PM IST

ಜೈಪುರ(ರಾಜಸ್ಥಾನ್): ಉದಯಪುರದಲ್ಲಿ ಧರ್ಮದ ಹೆಸರಿನಲ್ಲಿ ಹಿಂದು ವ್ಯಕ್ತಿಯ ಭೀಕರ ಹತ್ಯೆ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡ ಇರುವ ಬಗ್ಗೆ ಸುಳಿವು ಸಿಕ್ಕಿದೆ. ಹತ್ಯೆಕೋರರಲ್ಲಿ ಒಬ್ಬನಾದ ಗೌಸ್​ ಮಹಮದ್​ 45 ದಿನ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದ. ಅಲ್ಲದೇ, ಹಂತಕ ಅರಬ್​ ದೇಶಗಳು, ನೇಪಾಳಕ್ಕೂ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ.

ಹಂತಕ ಗೌಸ್ ಮಹಮ್ಮದ್​ ಪಾಕಿಸ್ತಾನದೊಂದಿಗೆ ನೇರ ಸಂಪರ್ಕ ಹೊಂದಿದ್ದ. ಈತನೊಂದಿಗೆ ರಿಯಾಜ್ ಜಬ್ಬಾರ್ ಕೂಡ ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇಬ್ಬರೂ ಸೇರಿ ಪಾಕಿಸ್ತಾನದ 8-10 ಸಂಪರ್ಕ ಸಂಖ್ಯೆಗಳೊಂದಿಗೆ ಮಾತನಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ರಾಜಸ್ಥಾನ ಗೃಹ ಸಚಿವ ರಾಜೇಂದ್ರ ಯಾದವ್ ಮಾತು

ಈ ಬಗ್ಗೆ ರಾಜಸ್ಥಾನದ ಗೃಹ ಸಚಿವ ರಾಜೇಂದ್ರ ಯಾದವ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದು, ಹಂತಕ ಗೌಸ್ ಮಹಮ್ಮದ್​ 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳಿ 45 ದಿನ ತರಬೇತಿ ಪಡೆದು ಬಂದಿದ್ದಾನೆ. ಅಷ್ಟೇ ಅಲ್ಲದೇ, 2018-19 ರಲ್ಲಿ ಈತ ಅರಬ್ ದೇಶಗಳಿಗೂ ಹೋಗಿದ್ದ. ಕಳೆದ ವರ್ಷ ನೇಪಾಳದಲ್ಲೂ ಈತನಿದ್ದ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಜನರಿರುವ ಶಂಕೆ: ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್​ಐಎ ವಹಿಸಿಕೊಂಡಿದೆ. ರಾಜ್ಯ ಸರ್ಕಾರವೂ ಕೂಡ ಎಸ್​ಐಟಿ ರಚಿಸಿದೆ. ಹತ್ಯೆಯ ಹಿಂದೆ ಇನ್ನಷ್ಟು ಜನರು ಇರುವ ಶಂಕೆ ಇದೆ. ಅವರು ರಾಜಸ್ಥಾನದಲ್ಲೇ ಉಳಿದಿದ್ದಾರೆ ಎನ್ನಲಾಗ್ತಿದೆ. ಹಂತಕರು ಇವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖಾ ಸಂಸ್ಥೆಗಳು ಇವರ ಜಾಡು ಹಿಡಿದು ಹೊರಟಿವೆ ಎಂದು ಹೇಳಿದರು.

  • इस घटना में मुकदमा UAPA के तहत दर्ज किया गया है इसलिए अब आगे की जांच NIA द्वारा की जाएगी जिसमें राजस्थान ATS पूर्ण सहयोग करेगी। पुलिस एवं प्रशासन पूरे राज्य में कानून व्यवस्था सुनिश्चित करें एवं उपद्रव करने के प्रयासों पर सख्ती से कार्रवाई करें।

    — Ashok Gehlot (@ashokgehlot51) June 29, 2022 " class="align-text-top noRightClick twitterSection" data=" ">

ಮರಣದಂಡನೆ ಶಿಕ್ಷೆ: ಭೀಕರ ಹತ್ಯೆ ಮಾಡಿದ ಈ ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿದರೂ ಕಡಿಮೆಯಾಗುತ್ತದೆ. ಇದು ರಾಜಸ್ಥಾನದ ಮಣ್ಣಿಗೆ ಅಂಟಿಕೊಂಡ ಕಳಂಕವಾಗಿದೆ. ಹತ್ಯೆಯ ಬಳಿಕ ಹಿಂದು-ಮುಸ್ಲಿಮರ ಮಧ್ಯೆ ಗಲಭೆಗಳನ್ನು ಸೃಷ್ಟಿಸುವ ಯೋಜನೆ ಹಾಕಲಾಗಿತ್ತು. ಪೊಲೀಸರು ಹಂತಕರನ್ನು ಬಂಧಿಸಿ ಇದನ್ನು ತಡೆದಿದ್ದಾರೆ. ಇದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಮಾಹಿತಿ ನೀಡಿದರು.

ಗುಪ್ತಚರ ವೈಫಲ್ಯವಲ್ಲ: ಈ ಘಟನೆ ಪೂರ್ವಯೋಜಿತವಾದರೂ, ದಿಢೀರ್ ಆಗಿ ನಡೆದಿದೆ. ಗುಪ್ತಚರ ವೈಫಲ್ಯವೆಂದು ಹೇಳಲಾಗದು. ಹಂತಕರನ್ನು ಹಿಡಿದ ಐವರು ಪೊಲೀಸರಿಗೆ ಶೌರ್ಯ ಪ್ರಶಸ್ತಿ ನೀಡಲಾಗುವುದು. ಈಗಾಗಲೇ ಅವರಿಗೆ ಬಡ್ತಿ ನೀಡಲಾಗಿದೆ ಎಂದು ಸಚಿವ ರಾಜೇಂದ್ರ ಯಾದವ್ ತಿಳಿಸಿದರು.

ಸರ್ವಪಕ್ಷ ಸಭೆ ಕರೆದ ಸಿಎಂ: ಹತ್ಯೆ ಬಳಿಕ ಉಂಟಾದ ಕ್ಷೋಭೆಯನ್ನು ನಿಯಂತ್ರಿಸಲು ಸರ್ಕಾರ ಇಂದು ಸಂಜೆ 6 ಗಂಟೆಗೆ ಸರ್ವಪಕ್ಷಗಳ ಸಭೆ ಕರೆದಿದೆ. ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದಲ್ಲಿ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯಲಿದೆ.

ಪ್ರತಿಭಟನೆಯಲ್ಲಿ ಪೊಲೀಸರಿಗೆ ಗಾಯ: ಹಿಂದು ವ್ಯಕ್ತಿ ಶಿರಚ್ಛೇದ ಖಂಡಿಸಿ ಇಂದು ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ಹಲವಾರು ಮಂದಿ ಪೊಲೀಸರು ಸಹ ಗಾಯಗೊಂಡಿದ್ದಾರೆ.

ಓದಿ; ದರ್ಜಿ ಹಂತಕರ ಬೆನ್ನಟ್ಟಿ ಹಿಡಿದ ಪೊಲೀಸ್; ಎನ್​ಐಎಗೆ ಪೂರ್ಣ ತನಿಖೆ ಹೊಣೆ, ಕೇಸಲ್ಲಿ ಉಗ್ರರ ಕರಿನೆರಳು ಶಂಕೆ

Last Updated : Jun 29, 2022, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.