ಕೋಲ್ಕತ್ತಾ: ಪ. ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರವಾದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮೊದಲೆರಡು ಸುತ್ತಿನ ಮತ ಎಣಿಕೆ ಕಾರ್ಯದಲ್ಲಿ ಹಿನ್ನಡೆಯಾಗಿದೆ.
ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಮಮತಾ ಅವರಿಗೆ 8,206 ಮತಗಳ ಹಿನ್ನಡೆಯಾಗಿದೆ.
ಚುನಾವಣೆಗೆ ಮುಂಚಿತವಾಗಿ, ನಂದಿಗ್ರಾಮ್ನ ಪ್ರಬಲ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿ ಮಮತಾರನ್ನು 50,000 ಮತಗಳಿಂದ ಸೋಲಿಸುವ ಪ್ರತಿಜ್ಞೆ ಮಾಡಿದ್ದರು. ಒಂದು ವೇಳೆ ವಿಫಲವಾದರೆ ರಾಜಕೀಯ ತೊರೆಯುವುದಾಗಿ ಹೇಳಿದ್ದರು.