ಗ್ವಾಲಿಯರ್(ಮಧ್ಯಪ್ರದೇಶ): ಪಬ್ಜಿ ಗೇಮ್ನಲ್ಲಿ ಪರಿಚಯವಾದ ಭಾರತದ ಸಚಿನ್ ಮೀನಾ ಎಂಬಾತನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಸೀಮಾ ಗುಲಾಮ್ ಹೈದರ್ ಎಂಬ ಮಹಿಳೆ ಆಗಮಿಸಿದ್ದರು. ಅದೇ ರೀತಿ, ತನ್ನ ಫೇಸ್ಬುಕ್ ಗೆಳಯನನ್ನು ಭೇಟಿ ಮಾಡಲು ಅಂಜು ಎಂಬ ಮಹಿಳೆ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಸದ್ಯ ಇಂಟೆಲಿಜೆನ್ಸ್ ಏಜೆನ್ಸಿಗಳು ಗ್ವಾಲಿಯರ್ ಜಿಲ್ಲೆಯ ತೇಕನ್‌ಪುರದ ಕುಬ್ಜ ಗ್ರಾಮದಲ್ಲಿರುವ ಅಂಜು ಕುಟುಂಬದ ಮೇಲೆ ನಿಗಾ ವಹಿಸಿವೆ ಎಂದು ವರಿದಿಯಾಗಿದೆ.
ಭದ್ರತಾ ಏಜೆನ್ಸಿಗಳ ನಿಗಾದಲ್ಲಿ ಅಂಜು ಕುಟುಂಬ: ಪಾಕಿಸ್ತಾನಕ್ಕೆ ತೆರಳಿರುವ ಅಂಜು ಗ್ವಾಲಿಯರ್ ಜಿಲ್ಲೆಯ ಕುಬ್ಜ ಗ್ರಾಮದಲ್ಲಿ ವಾಸವಾಗಿದೆ. ಈ ಗ್ರಾಮದ ಬಳಿ ಬಿಎಸ್ಎಫ್ ಅಕಾಡೆಮಿ ಇದೆ. ಹೀಗಾಗಿ ಈ ಗ್ರಾಮದಲ್ಲಿ ಬಿಎಸ್ಎಫ್ ಮತ್ತು ಆರ್ಮಿ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ತೆರಳುವ ಅಂಜು ಇದೇ ಗ್ರಾಮದಲ್ಲಿ ನೆಲೆಸಿದ್ದರು ಎಂದು ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳಿಗೆ ತಿಳಿದ ತಕ್ಷಣ, ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಅಂಜು ತಂದೆ ತಮ್ಮ ಮನೆಯಿಂದ ಪರಾರಿಯಾಗಿದ್ದಾರೆ. ಇದರೊಂದಿಗೆ ಈಗ ಇಡೀ ಗ್ರಾಮವು ಭದ್ರತಾ ಏಜೆನ್ಸಿಗಳ ನಿಗಾದಲ್ಲಿದೆ. ಈ ಗ್ರಾಮದ ಮಾಹಿತಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗುಪ್ತಚರ ಸಂಸ್ಥೆ ಈ ಕುರಿತು ತನಿಖೆಯನ್ನು ಪ್ರಾರಂಭಿಸಿದೆ. ಅಂಜು ಅವರ ಅಜ್ಜ ಕೂಡ ಬಿಎಸ್‌ಎಫ್‌ನಲ್ಲಿದ್ದು ನಿವೃತ್ತರಾಗಿದ್ದರು ಮತ್ತು ಪ್ರಸ್ತುತ ಅವರ ಚಿಕ್ಕಪ್ಪ ಬಿಎಸ್‌ಎಫ್ ಅಕಾಡೆಮಿ ಟೇಕನ್‌ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೆಕನ್‌ಪುರದ ಬಿಎಸ್‌ಎಫ್ ಅಕಾಡೆಮಿಯಲ್ಲಿ ನಿಯೋಜಿತರಾಗಿರುವ ಅಂಜು ಅವರ ಚಿಕ್ಕಪ್ಪ ಹವಾಲ್ದಾರ್ ಕೂಡ ತನಿಖೆಗೆ ಬಂದಿದ್ದ ಗುಪ್ತಚರ ಸಂಸ್ಥೆಗಳಿಗೆ ಅಗತ್ಯ ಮಾಹಿತಿ ಒದಗಿಸಿದ್ದಾರೆ. ಪತಿಯನ್ನು ತನ್ನ ಸ್ನೇಹಿತೆಯ ಬಳಿಗೆ ಹೋಗುವಂತೆ ಹೇಳಿ ಅಂಜು ಪಾಕಿಸ್ತಾನಕ್ಕೆ ಏಕೆ ಹೋಗಿದ್ದಾಳೆ?. ಅಂಜು ಪಾಕಿಸ್ತಾನಕ್ಕೆ ಹೋಗುವ ಉದ್ದೇಶವೇನು? ಎಂದು ಭದ್ರತಾ ಏಜೆನ್ಸಿಗಳು ಪ್ರಶ್ನಿಸಿವೆ.
ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಏಜೆನ್ಸಿಗಳು: ಈ ಕುರಿತು ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಅಂಜು ಕುಟುಂಬದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಇದರೊಂದಿಗೆ ಅಂಜು ಕುಟುಂಬದ ಸುತ್ತಮುತ್ತ ಯಾರು ವಾಸಿಸುತ್ತಿದ್ದಾರೆ. ಅಲ್ಲಿಗೆ ನಿತ್ಯ ಯಾರು ಬಂದು ಹೋಗುತ್ತಿದ್ದರು. ಈ ಬಗ್ಗೆ ನೆರೆಹೊರೆಯವರನ್ನು ವಿಚಾರಿಸಲಾಗುತ್ತಿದೆ. ಅಂಜು ಅವರ ತಂದೆ ಇದೇ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರು ಈ ಗ್ರಾಮಕ್ಕೆ ಬಂದಿದ್ದು ಕೊರೊನಾ ಕಾಲದಲ್ಲಿ ಮಾತ್ರ. ಕಳೆದ 8 ವರ್ಷಗಳಿಂದ ಅವರು ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದರು. ಇದರ ಜೊತೆಗೆ ಈ ಕುಟುಂಬ ಕೆಲ ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಹೇಳಲಾಗುತ್ತಿದೆ.
ಅಂಜು ಬಾಲ್ಯದಲ್ಲಿ ಉತ್ತರಪ್ರದೇಶದಲ್ಲಿರು ಜಲೌನ್‌ನಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದರು. ರಾಜಸ್ಥಾನದ ಭಿವಾಡಿಯಲ್ಲಿ ನೆಲೆಸಿರುವ ಅರವಿಂದ್ ಮೀನಾ ಎಂಬುವವರನ್ನು ಅಂಜು ವಿವಾಹವಾಗಿದ್ದರು. ಮದುವೆಯಾದ ನಂತರ ರಾಜಸ್ಥಾನದಲ್ಲಿ ಅಂಜು ನೆಲೆಸಿದ್ದಳು. ಅಂಜು ತನ್ನ ಪತಿ ಅರವಿಂದ್‌ಗೆ ಜೈಪುರದಲ್ಲಿರುವ ಸ್ನೇಹಿತೆಯನ್ನು ಭೇಟಿಯಾಗುವಂತೆ ಹೇಳಿ ಕಳುಹಿಸಿದ್ದಳು, ನಂತರ ಪತಿ ಮನೆಗೆ ಹಿಂತಿರುಗಿರಲಿಲ್ಲ.
ಬಳಿಕ ಅಂಜು ಪಾಕಿಸ್ತಾನದ ಲಾಹೋರ್ ತೆರಳಿದ್ದಾಳೆ ಎಂದು ತಿಳಿದು ಬಂದಿದೆ. ಅಲ್ಲಿ ಅವಳು ತನ್ನ ಗೆಳೆಯ ನಸ್ರುಲ್ಲಾನನ್ನು ಭೇಟಿಯಾಗಲು ತೆರಳಿದ್ದಾಳೆ. ಪಾಕಿಸ್ತಾನದ ಪಶ್ತೂನ್ ಸಮುದಾಯವು ಅಂಜು ಅವರನ್ನು ತಮ್ಮ ಸೊಸೆ ಎಂದು ಪರಿಗಣಿಸಿ ದತ್ತು ಪಡೆದಿದೆ ಎಂದು ವರದಿಯಾಗಿದೆ. ಇದರ ನಡುವೆ ವಿಡಿಯೋವೊಂದು ಹೊರಬಂದಿದ್ದು ಅದರಲ್ಲಿ ಅಂಜು ನಾನು ಸುರಕ್ಷಿತವಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳುವುದಾಗಿ ಹೇಳಿದ್ದಾಳೆ.
ಇದನ್ನೂ ಓದಿ: Indian woman visit Pakistan: 'ಅಂಜು ಭಾರತಕ್ಕೆ ಮರಳುವರು, ನಮ್ಮದು ಸ್ನೇಹ ಸಂಬಂಧ, ಮದುವೆ ಯೋಚನೆ ಇಲ್ಲ': ಪಾಕ್ ಸ್ನೇಹಿತ