ETV Bharat / bharat

ಆನಂದ್ ಮೋಹನ್ ಬಿಡುಗಡೆ ಕುರಿತು ವಿಚಾರಣೆ: ಈಗ ಯಾರಿಗೂ ಸಮಯ ನೀಡುವುದಿಲ್ಲ ಎಂದ ಸುಪ್ರೀಂ ಕೋರ್ಟ್

ಬಿಹಾರದ ಬಾಹುಬಲಿ ಆನಂದ್ ಮೋಹನ್ ಬಿಡುಗಡೆಗೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 8ರಂದು ನಡೆಯಲಿದೆ ಎಂದು ಕೋರ್ಟ್​ ಹೇಳಿದೆ.

Anand Mohan Case
ಆನಂದ್ ಮೋಹನ್
author img

By

Published : May 19, 2023, 10:38 PM IST

ನವದೆಹಲಿ/ಪಾಟ್ನಾ: ಬಿಹಾರದ ಬಾಹುಬಲಿ ಆನಂದ್ ಮೋಹನ್ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್, ಈಗ ಯಾರಿಗೂ ಸಮಯ ನೀಡುವುದಿಲ್ಲ ಎಂದು ಹೇಳಿದೆ. ವಾಸ್ತವವಾಗಿ, ಗೋಪಾಲಗಂಜ್‌ನ ಅಂದಿನ ಡಿಎಂ ಜಿ.ಕೃಷ್ಣಯ್ಯ ಅವರ ಪತ್ನಿ ಆನಂದ್​ರನ್ನು ಜೈಲಿನಿಂದ​ ಬಿಡುಗಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದರಲ್ಲಿ ಬಿಹಾರ ಸರ್ಕಾರ ಹೊರಡಿಸಿರುವ ಜೈಲು ಕೈಪಿಡಿಯ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ಮೇ 8ರಂದು ವಿಚಾರಣೆಯೂ ನಡೆದಿತ್ತು. ಇಂದು ನಡೆದ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್, ಮುಂದಿನ ದಿನಾಂಕವನ್ನು ಆಗಸ್ಟ್ 8ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್​ನಲ್ಲಿ ಉಮಾ ಕೃಷ್ಣಯ್ಯ ಅರ್ಜಿ: ಗೋಪಾಲಗಂಜ್‌ನ ಅಂದಿನ ಡಿಎಂ ಜಿ.ಕೃಷ್ಣಯ್ಯ ಹತ್ಯೆ ಪ್ರಕರಣದ ಆರೋಪಿ ಆನಂದ್ ಮೋಹನ್ ಬಿಡುಗಡೆಗೆ ವಿರೋಧಿಸಿ ಉಮಾ ಕೃಷ್ಣಯ್ಯ ಅವರು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬಿಹಾರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಜೈಲು ಕೈಪಿಡಿಯ ಅಧಿಸೂಚನೆ ಹಿನ್ನೆಲೆ ಆನಂದ ಮೋಹನ್ ಬಿಡುಗಡೆಯಾಗಿದ್ದರು. ಹೊಸ ನಿಯಮದ ಪ್ರಕಾರ, ಕರ್ತವ್ಯದಲ್ಲಿರುವಾಗ ಸಾರ್ವಜನಿಕ ನೌಕರನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ, ಅಪರಾಧಿಯ ಜೀವಾವಧಿ ಶಿಕ್ಷೆಯನ್ನು 20 ವರ್ಷದಿಂದ 14 ವರ್ಷಕ್ಕೆ ಇಳಿಸಲಾಗಿದೆ. ಈ ಬದಲಾವಣೆಯಿಂದಾಗಿ ಆನಂದ್ ಮೋಹನ್ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೊಂಡರು.

ಆನಂದ್ ಮೋಹನ್ ಪರ ವಾದ ಮಂಡಿಸಿದ ವಕೀಲ: ಇಂದು ನಡೆದ ವಿಚಾರಣೆಯಲ್ಲಿ ಆನಂದ್ ಮೋಹನ್ ಪರ ವಕೀಲರು ತಮ್ಮ ಕಕ್ಷಿದಾರರ ಪರ ವಾದ ಮಂಡಿಸಿದರು. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆಕೆ ಮಹೇಶ್ವರಿ ಅವರು ಮಧ್ಯಾಹ್ನದ ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಿದ್ದಾರೆ. ಆನಂದ್ ಮೋಹನ್ ಪರ ವಕೀಲರು ನೋಟಿಸ್‌ಗೆ ಉತ್ತರವನ್ನೂ ಸಿದ್ಧಪಡಿಸಿದ್ದಾರೆ. ಆನಂದ್ ಮೋಹನ್ ಅವರ ಬಿಡುಗಡೆ ಕಾನೂನುಬದ್ಧವಾಗಿದೆ ಎಂದು ಅವರ ಪರ ವಕೀಲರು ವಾದಿಸಿದರು.

ಜೈಲು ಕೈಪಿಡಿ ಬದಲಾಯಿಸಿದ ಬಿಹಾರ ಸರ್ಕಾರ: ಬಿಹಾರ ಸರ್ಕಾರ ಆನಂದ್ ಮೋಹನ್ ಬಿಡುಗಡೆಗಾಗಿ ಜೈಲು ಕೈಪಿಡಿಯನ್ನು ಬದಲಾಯಿಸಿದೆ ಎಂದು ಆರೋಪಿಸಲಾಗಿದೆ. ಇದರ ಆಧಾರದ ಮೇಲೆ, ಆನಂದ್ ಮೋಹನ್ ಸೇರಿದಂತೆ 26 ಕೈದಿಗಳನ್ನು ಏಪ್ರಿಲ್ 27ರಂದು ಬಿಡುಗಡೆ ಮಾಡಲಾಗಿತ್ತು. ನಿಯಮ ಬದಲಾದ ಬಳಿಕ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆಯಲ್ಲಿ ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡಿದ್ದು, ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹಲವು ತಪ್ಪುಗಳು ಕಂಡು ಬಂದಿವೆ. ಒಂದೆಡೆ ಮೃತ ಕೈದಿಯ ಬಿಡುಗಡೆಗೆ ಆದೇಶ ಹೊರಡಿಸಿದರೆ, ಮತ್ತೊಂದೆಡೆ ಜೈಲಿನಲ್ಲಿ ವಾಸವಾಗಿರುವ ಕೈದಿಯನ್ನು ಬೇರೆ ಜೈಲಿನಲ್ಲಿ ತೋರಿಸಲಾಗಿದೆ. ಈ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟಿಕೊಂಡಿವೆ.

1994ರಲ್ಲಿ ಜಿ.ಕೃಷ್ಣಯ್ಯ ಹತ್ಯೆ: ಮುಜಾಫರ್‌ಪುರ ಜಿಲ್ಲೆಯಲ್ಲಿ ಅಂದಿನ ಗೋಪಾಲಗಂಜ್‌ನ ಜಿಲ್ಲಾಧಿಕಾರಿ ಜಿ.ಕೃಷ್ಣಯ್ಯ ಅವರನ್ನು ಗುಂಪೊಂದು ಹತ್ಯೆ ಮಾಡಿತ್ತು.ಈ ಹತ್ಯೆಯ ಒಂದು ದಿನ ಮೊದಲು ಅಂದರೆ, 4 ಡಿಸೆಂಬರ್ 1994ರಂದು, 'ಬಿಹಾರ್ ಪೀಪಲ್' ಪಕ್ಷದ ನಾಯಕ ಛೋಟಾನ್ ಶುಕ್ಲಾ ಕೊಲ್ಲಲ್ಪಟ್ಟರು. ಇದು ಬೆಂಬಲಿಗರನ್ನು ಕೆರಳಿಸಿತು. ಮೃತದೇಹದೊಂದಿಗೆ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಮುಜಾಫರ್‌ಪುರದ ಖಾಬ್ರಾ ಗ್ರಾಮದ ಬಳಿ ಕೆಂಪು ದೀಪದೊಂದಿಗೆ ಹಾದು ಹೋಗುತ್ತಿದ್ದ ಜಿ.ಕೃಷ್ಣಯ್ಯ ಅವರ ಕಾರನ್ನು ಜನ ಸುತ್ತುವರಿದು ಥಳಿಸಿ ಕೊಂದರು. ಆನಂದ್ ಮೋಹನ್ ಕೊಲೆ ಪ್ರಕರಣದ ಆರೋಪಿ ಆಗಿದ್ದನು.

ಇದನ್ನೂ ಓದಿ: ಸಂಗಾತಿಯ ವಿನಿಮಯ ಪ್ರಕರಣದ ದೂರುದಾರ ಮಹಿಳೆ ಹತ್ಯೆ: ಪತಿಗಾಗಿ ಪೊಲೀಸರಿಂದ ಹುಡುಕಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.