ಸುರ್ಗುಜಾ(ಛತ್ತೀಸಗಢ): ಸಿಡಿಲು ಬಡಿದು ಗಾಯಗೊಂಡಿದ್ದ ವ್ಯಕ್ತಿಯೊಬ್ಬನಿಗೆ ಸ್ಥಳೀಯರು ಹಸುವಿನ ಸಗಣಿಯಲ್ಲಿ ಹೂತು ಚಿಕಿತ್ಸೆ ನೀಡಲು ಮುಂದಾಗಿರುವ ಘಟನೆ ನಡೆದಿದೆ.
ಛತ್ತೀಸಗಢದ ಸುರ್ಗುಜಾದಲ್ಲಿ ಈ ಘಟನೆ ನಡೆದಿದೆ. ಮಿಂಚು ಹೊಡೆದಿದ್ದ ಕಾರಣ ಆತನನ್ನು ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲಿಗೆ ಸಗಣಿ ಹಳ್ಳದಲ್ಲಿ ಹೂತಿದ್ದಾರೆ. ಆದರೆ, ಆತನ ಸ್ಥಿತಿ ಸುಧಾರಿಸಿಕೊಳ್ಳದ ಕಾರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಲಖನ್ಪುರ ಬ್ಲಾಕ್ನ ಗ್ರಾಮ ಪಂಚಾಯ್ತಿ ಮುಟ್ಕಿಯಲ್ಲಿ ನಿನ್ನೆ ಮಧ್ಯಾಹ್ನ 3 ಗಂಟೆಗೆ 35 ವರ್ಷದ ಕಿಶುನ್ ರಾಮ್ಗೆ ಸಿಡಿಲು ಹೊಡೆದಿದೆ. ಈ ವೇಳೆ, ಆತನನ್ನು ಸ್ಥಳೀಯರು ಹಾಗೂ ಗ್ರಾಮಸ್ಥರು ಹಸುವಿನ ಸಗಣಿಯಲ್ಲಿ ಹೂತಿದ್ದಾರೆ. ಆದರೆ, ಆತ ಚೇತರಿಸಿಕೊಳ್ಳದ ಕಾರಣ ತಕ್ಷಣವೇ ಆ್ಯಂಬುಲೆನ್ಸ್ಗೆ ಕರೆ ಮಾಡಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಮಾಹಿತಿ ನೀಡಿದ್ದಾರೆ.